HOMENews

ಪರವಾನಿಗೆ ಇಲ್ಲದೇ ಲಾಡ್ಜ್ ನಡೆಸಿದ ಆರೋಪ: ಅಧಿಕಾರಿಗಳ ಗಮನಕ್ಕೆ ತಂದ ನಿವಾಸಿಗಳು

ಕೆ ಆರ್ ನಗರ. ಮಾ. 24:- ಪುರಸಭೆಯ 2026 27 ನೇ ಸಾಲಿನ ಆಯವ್ಯಯ ಮಂಡಿಸುತ್ತಿದ್ದ ಪುರಸಭೆಯ ಆಡಳಿತಾಧಿಕಾರಿ ಹಾಗೂ ಹುಣಸೂರು ಉಪವಿಭಾಗಾಧಿಕಾರಿ ಕು. ಕಾವ್ಯ ರಾಣಿಗೆ ಕುವೆಂಪು ಬಡಾವಣೆ ನಿವಾಸಿಗಳು ಅಕ್ರಮವಾಗಿ ಲಾಡ್ಜ್ ಅನ್ನು ನಿರ್ಮಿಸಿ ಅನೈತಿಕ ಚಟುವಟಿಕೆ ನೀಡುತ್ತಿರುವ ಬಗ್ಗೆ ದೂರನ್ನು ನೀಡಿದರು.

 ಸಭೆ ನಡೆಯುತ್ತಿದ್ದ ವೇಳೆ ಕುವೆಂಪು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಟ್ರಸ್ಟಿನ ನೇತೃತ್ವ ವಹಿಸಿರುವ ಮಂಜುನಾಥ್ ನೇತೃತ್ವದಲ್ಲಿ ಆಗಮಿಸಿದ ತಂಡ ಉಪ ವಿಭಾಗಾಧಿಕಾರಿಯವರಿಗೆ ಅತ್ಯಂತ ಶಾಂತಿ ಮತ್ತು ನೆಮ್ಮದಿಯಿಂದ ಬಹುತೇಕ ನೌಕರರು ವಾಸಿಸುವ ಈ ಎರಡನೇ ವಾರ್ಡಿನಲ್ಲಿ ಯಾವುದೇ ರೀತಿಯ ಪರವಾನಿಗೆ ಮತ್ತು ಅನುಮತಿ ಪಡೆಯದೆ ಸಿ ಎನ್ ಆನಂದ್ ರವರು ಅಶ್ವಿನಿ ಕಾಂಪ್ಲೆಕ್ಸ್ ಎಂಬ ಹೆಸರಿನಲ್ಲಿ ಲಾಡ್ಜ್ ಪ್ರಾರಂಭ ಮಾಡಿ ಈಗ ಕೆಲವು ದಿನಗಳ ಹಿಂದೆ ಅಂದರೆ 14.02.2026ರ ಶನಿವಾರ ಲಾಡ್ಜ್ ನ ರೂಮಿನಲ್ಲಿ ಅಪ್ರಾಪ್ತ ಹುಡುಗಿಯ ಜೊತೆ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ ತಿಳಿದ ಪೋಲಿಸ್ ಇಲಾಖೆ ಡಿವೈಎಸ್ಪಿ ನೇತೃತ್ವದಲ್ಲಿ ಖುದ್ದು ಒಂದು ಮಹಾಜಾರ್ ಮಾಡಿ ಹುಡುಗಿ ಮತ್ತು ಹುಡುಗನ ವಿರುದ್ಧ ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ದೂರು ನೀಡಿದರು.

 ಇಷ್ಟಾದರೂ ಸಂಬಂಧಪಟ್ಟ ಪೊಲೀಸ್ ಇಲಾಖೆ ಪುರಸಭೆ ತಾಲೂಕ್ ಆಡಳಿತ ಜಿಲ್ಲಾ ಆಡಳಿತಕ್ಕೂ ದೂರು ನೀಡಲಾಗಿದೆ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು ತಕ್ಷಣ ಪುರಸಭೆಯ ಆಡಳಿತ ಅಧಿಕಾರಿಯಾದ ನೀವು ಸ್ಥಳ ಪರಿಶೀಲನೆ ಮಾಡಿ ಅಶ್ವಿನಿ ಕಾಂಪ್ಲೆಕ್ಸ್ ಮತ್ತು ಲಾಡ್ಜ್ ನ ಪರವಾನಿಗೆ ಮತ್ತು ಅನುಮತಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪರಿಶೀಲಿಸಿ ಅಕ್ರಮವಾಗಿ ಕಾಂಪ್ಲೆಕ್ಸ್ ನಿರ್ಮಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಲಾಡ್ಜ್ ಗೆ ಬೀಗ ಜಡೆಯುವಂತೆ ಮನವಿ ಮಾಡಿದರು ಈ ವೇಳೆ ಕುವೆಂಪು ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಟಿ ರಾಮಕೃಷ್ಣೇಗೌಡ ಮೂಲೆ ಪೆಟ್ಲು, ಸಿದ್ದಪ್ಪ ಹಂಪಾಪುರ ರಮೇಶ ಪ್ರಕಾಶ ಸೇರಿದಂತೆ ಇನ್ನಿತರರು ಹಾಜರಿದ್ದರು.