
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಏ. 19:- ಬಸವಣ್ಣನವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡಿರುವ ಉದ್ಯಮಿ ಮಾಜಿ ಪುರಸಭಾ ಸದಸ್ಯ ಜಿ ಶೇಷಾದ್ರಿ ಅವರು ಇತರೆ ಉದ್ಯಮಿಗಳಿಗೆ ಮಾದರಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಡಿಮ್ ಡಿಮಾಶಂಕರ್ ಅವರ ಬಗ್ಗೆ ಗುಣಗಾನ ಮಾಡಿದರು.
ಪಟ್ಟಣದ ಜಿ ಜಿ ಪ್ಯಾಲೆಸಿನ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಷ್ಟದಿಂದ ಮೇಲೆ ಬಂದು ತಾನು ಸಂಪಾದನೆ ಮಾಡಿದ ಹಣದಲ್ಲಿ ಒಂದಿಷ್ಟು ಹಣವನ್ನು ಪ್ರತಿವರ್ಷ ಸಹಾಯ ಮಾಡುತ್ತಿರುವ ಇವರ ಗುಣ ಅತ್ಯಂತ ಮೆಚ್ಚುವಂಥದ್ದು ಎಂದು ವರ್ಣಿಸಿದರು.

ಕೆ ಆರ್ ನಗರದ ಇತಿಹಾಸದಲ್ಲಿಯೇ ಯಾವ ಮಕ್ಕಳು ತಂದೆ ತಾಯಿಯನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವರು ಯಾವ ಸೊಸೆಯಂದಿರು ಅತ್ತೆ ಮಾವಂದಿರನ್ನು ಅಭಿಮಾನದಿಂದ ನೋಡಿಕೊಳ್ಳುವವರು ಮತ್ತು ಅತ್ಯಂತ ಕಷ್ಟದಿಂದ ಜೀವನ ಸಾಗಿಸುವವರಿಗೆ ಸುಮಾರು 15 ಜನರಿಗೆ 25,000 ಸಹಾಯಧನವನ್ನು ನೀಡಿರುವುದಲ್ಲದೆ ಕಡುಬಡತನದಲ್ಲಿದ್ದು ವಾಸಿಸಲು ಸೂರ್ ಇಲ್ಲದವರಿಗೆ ಮನೆಯ ನಿರ್ಮಿಸಿಕೊಳ್ಳಲು ಒಂದು ಲಕ್ಷ ಸಹಾಯಧನ ಹಾಗೂ 15 ಜನ ಬಡ ಮಹಿಳೆಯರಿಗೆ ಹೊಲೆಗೆ ಯಂತ್ರ ನೀಡಿದ್ದಲ್ಲದೆ ತಾಲೂಕು ಕುಂಬಾರ ಸಂಘಕ್ಕೆ ಒಂದು ಲಕ್ಷ ಈಶ್ವರ ನಗರದಲ್ಲಿ ನಿರ್ಮಿಸುತ್ತಿರುವ ದೇವಾಲಯಕ್ಕೆ ಒಂದು ಲಕ್ಷ ಸಹಾಯಧನವನ್ನು ನೀಡಿ ಸಮಾಜ ಸೇವೆ ಮಾಡುತ್ತಿರುವ ಇವರನ್ನು ನಾವೆಲ್ಲರೂ ಸೇರಿ ಇವರನ್ನು ಅಭಿನಂದಿಸಬೇಕಾಗುತ್ತದೆ ಎಂದು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ರಾಜ ಶ್ರೀಕಾಂತ್ ಮಾತನಾಡಿ ಜಿ ಶೇಷಾದ್ರಿ ಅವರು ಇಷ್ಟೊಂದು ಎತ್ತರಕ್ಕೆ ಬೆಳೆಯಬೇಕಾದರೆ ಹಾಗೂ ಸಮಾಜಸೇವೆ ಮಾಡಲು ಅವರ ಶ್ರೀಮತಿ ಸುಶೀಲಮ್ಮ ಶೇಷಾದ್ರಿ ಮತ್ತು ಮಕ್ಕಳು ನೀಡುವ ಸಹಕಾರ ಮುಖ್ಯವಾಗಿದೆ ಅದನ್ನು ಪ್ರತಿಯೊಬ್ಬರೂ ಅರಿತು ತಮ್ಮ ಸಂಪಾದನೆಯಲ್ಲಿ ಅಲ್ಪಸಲ್ಪ ಹಸಿದವರಿಗೆ ಸಹಾಯ ಮಾಡಿದರೆ ಅದು ನಮ್ಮನ್ನು ಕಾಯುತ್ತದೆ ಎಂಬ ನಿಲುವು ಶೇಷಾದ್ರಿ ಅವರ ಕುಟುಂಬದ್ದು ಎಂದು ತಿಳಿಸಿದರು.
ಸತ್ಯ ಧರ್ಮ ಉಳಿಯುತ್ತದೆ ಕರ್ಮ ಎಂದು ನಮ್ಮನ್ನು ಬಿಡುವುದಿಲ್ಲ ಹುಟ್ಟಿನಿಂದ ಬಡತನದಿಂದ ಬಂದ ಶೇಷಾದ್ರಿ ಅವರು ಅವರ ತಂದೆ ಹಾಕಿಕೊಟ್ಟ ಮಾರ್ಗ ಮತ್ತು ಸೇವೆಯನ್ನು ಮಾಡುತ್ತಾ ಬರುತ್ತಿದ್ದು ಆದುದರಿಂದಲೇ ಪ್ರತಿಯೊಬ್ಬ ಮಕ್ಕಳು ತಮ್ಮ ತಂದೆ ತಾಯಿ ಸೇವೆಯನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಲೆಂದು ಒಂದುವರೆ ತಿಂಗಳಿನಿಂದ ಸರ್ವೇ ಮಾಡಿ ಕೆಲವು ಹಿರಿಯರು ಆತ್ಮೀಯರ ಸಲಹೆಯನ್ನು ಪಡೆದು ಅರ್ಹ ಫಲಾನುಭವಿಗಳಿಗೆ ಸಹಾಯ ನೀಡುತ್ತಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಕವನ ಬರಹಗಾರ ಶಿವಕುಮಾರ್ ಮಾತನಾಡಿ ನಮ್ಮ ಈಶ್ವರ ನಗರ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರ ಪುತ್ರರನ್ನು ಸೋಲಿಸಿ ತಪ್ಪು ಮಾಡಿದವು ಆ ನೋವು ಈಗಲೂ ನಮಗೆ ಕಾಡುತ್ತಿದೆ ನಾವೇನಾದರೂ ನಮ್ಮ ವಾರ್ಡಿನಲ್ಲಿ ಇವರ ಪುತ್ರನನ್ನು ಗೆಲ್ಲಿಸಿದರೆ ನಮ್ಮ ವಾರ್ಡಿನ ಚಿತ್ರಣವೇ ಬದಲಾಗುತ್ತಿತ್ತು ಆದ್ದರಿಂದ ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಯಾವುದೇ ಕಾರಣಕ್ಕೂ ಸಮಾಜ ಸೇವೆಯನ್ನು ನಿಲ್ಲಿಸಬೇಡಿ ರಾಜಕಾರಣವನ್ನು ನಿಲ್ಲಿಸಬೇಡಿ ಮುಂದಿನ ಬಾರಿ ನಮ್ಮ ವಾರ್ಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಂದು ಸಲಹೆ ನೀಡಿದರು.

ಗೋವಿಗೆ ಹುಲ್ಲು ತಿಂಡಿ ತಿನ್ನಿಸಿದರೆ ಮಾತ್ರ ಹಾಲು ಕೊಡುತ್ತದೆ ಇಲ್ಲದಿದ್ದರೆ ಹಾಲನ್ನು ಕೊಡುವುದಿಲ್ಲ ಆದರೆ ನಮ್ಮ ಪಟ್ಟಣದ ಜಿ ಜಿ ಪ್ಯಾಲೆಸಿನ ಮಾಲೀಕರು ಉದ್ಯಮಿಗಳು ಆದ ಶೇಷಾದ್ರಿ ಅವರು ತಮ್ಮ ಸಂಪಾದನೆಯಲ್ಲಿ ಒಂದಿಷ್ಟು ಹಣ ಸಾರ್ವಜನಿಕರ ಸೇವೆಗೆ ಅದರ ಅದರಲ್ಲಿಯೂ ಕಷ್ಟದಲ್ಲಿರುವ ಸಣ್ಣಪುಟ್ಟ ಸಮಾಜದ ದುಡಿಯಲಾಗದ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಮಾಡುವುದು ಸಂಘ ಸಂಸ್ಥೆಗಳಿಗೆ ಸಹಾಯ ಮಾಡುವುದು ಅಷ್ಟೊಂದು ಸುಲಭವಲ್ಲ ಅಂತಹ ಕೆಲಸವನ್ನು ಮಾಡುತ್ತಿರುವ ಇವರಿಗೆ ಇವರ ಕುಟುಂಬದವರಿಗೆ ದೇವರು ಆರೋಗ್ಯ ಆಯಸ್ಸು ಐಶ್ವರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಜಿ ಶೇಷಾದ್ರಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಡ್ಡರ ಕೊಪ್ಪಲು ಶಿವರಾಮು ಚುಟುಕು ಕವಿ ಹೆಗ್ಗಂದೂರ್ ಪ್ರಭಾಕರ್ ಜನಪದ ಪರಿಷತ್ತಿನ ಅಧ್ಯಕ್ಷ ತಿಮ್ಮಶೆಟ್ಟಿ ರಾ ಸುರೇಶ್ ಮಾತನಾಡಿದರು.
ವೇದಿಕೆಯಲ್ಲಿ ನವನಗರ ಅರ್ಬನ್ ಬ್ಯಾಂಕಿನ ನಿರ್ದೇಶಕ ರಂಗನಾಥ್, ಸುಶೀಲಮ್ಮ ಶೇಷಾದ್ರಿ, ವಿಶ್ವಾಸ್ ಗೌಡ, ಮೋಕ್ಷಿತ, ವಿನುತಾ, ಕಾರ್ತಿಕ, ಲೋಕೇಶ್, ನಿವೃತ್ತ ಇಂಜಿನಿಯರ್ ಪ್ರಕಾಶ್ ಮುಖಂಡರುಗಳಾದ ಶ್ರೀನಿವಾಸ್, ಸುರೇಶ್, ವಿಷ್ಣುವರ್ಧನ, ಹೇಮಂತ್, ಪತ್ರಕರ್ತ ಮಹದೇವಸ್ವಾಮಿ, ಉದಯ್ ಕುಮಾರ್, ಮೋಹನ, ರಾಮಕೃಷ್ಣ, ಸೇರಿದಂತೆ ಮುಖಂಡರು ಸಹಾಯ ಪಡೆದ ಮಹಿಳೆಯರು ಅವರ ಕುಟುಂಬದ ಸದಸ್ಯರು ಇನ್ನಿತರರು ಹಾಜರಿದ್ದರು,





