
ತ್ರಿಕಾಲ ಜ್ಞಾನಿಗಳಾದ ಕೈವಾರ ತಾತಯ್ಯನವರು ಈ ನಾಡು ಕಂಡ ಒಬ್ಬ ಅಪೂರ್ವ ಸಂತರು, ಸುಧಾರಕರು, ಮಹಾನ್ ಜ್ಞಾನಿಗಳು, ಯೋಗಿಗಳು, ಸಿದ್ಧಪುರುಷರೂ ಹಾಗೂ ತ್ರಿಕಾಲ ಜ್ಞಾನಿಗಳು. ಸದಾ ಭಕ್ತಿ, ಭಜನೆ ಧ್ಯಾನ, ಉಪದೇಶ ಮುಂತಾದ ದೈವಿಕ ಕ್ರಿಯೆಗಳಲ್ಲಿ ನಿರತರಾಗಿದ್ದರು. ಶಾಂತಚಿತ್ತ, ಪ್ರೀತಿ, ಸರಳ ಬದುಕನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಇವರು. ಶ್ರೀ ಯೋಗಿನಾರಾಯಣ ಯತೀಂದ್ರರು ಭಕ್ತ ಕೋಟಿಗೆ ಆತ್ಮೋದ್ಧಾರದ ಮಾರ್ಗದರ್ಶನ ಮಾಡಿದ ಮಹಾಪುರುಷರು. ಜನತೆಯಲ್ಲಿನ ಅಂಧಕಾರವನ್ನು ತೊಲಗಿಸಿ ಪ್ರಗತಿಪಥವನ್ನು ನಿರ್ಮಿಸಿದ ಮಹಾನ್ ಸಮಾಜ ಸುಧಾರಕರು. ದೀನ- ದಲಿತರ ಬಗೆಗೆ ಸೇವಾ ಭಾವನೆಯನ್ನು ಮೂಡಿಸಿದ ಆಪ್ತ ಬಂಧುಗಳು, ಭೂಮಿ ಮೇಲಿರುವ ಎಲ್ಲಾ ಜೀವಿಗಳ ಸುಖ ಮತ್ತು ಸಂತೋಷವನ್ನು ಸಾರಿದ ಲೋಕ ಬಂಧುಗಳು. ವಿಶ್ವಕ್ಕೆ ಪರಮಾತ್ಮನ ವಾಣಿಯನ್ನು ಮತ್ತು ಸಂದೇಶವನ್ನು ಸಾರಿದ ದೇವಧೂತರು.

ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ಹದಿನೆಂಟನೆಯ ಶತಮಾನದಲ್ಲಿ ಪರಮ ಸಾತ್ವಿಕ ಕೊಂಡಪ್ಪ ಮತ್ತು ಮುದ್ದಮ್ಮ ದಂಪತಿಗಳಿಗೆ 1726ರ ಫಾಲ್ಗುಣ ಮಾಸದ ಪೌರ್ಣಮಿಯಂದು ಮಗನಾಗಿ ಯೋಗಿ ನಾರಾಯಣರು ಜನಿಸಿದರು. ಇವರ ಜನನವೇ ಒಂದು ಪವಾಡ. ಸಾದ್ವಿ ಮುದ್ದಮ್ಮ ತನ್ನ ಅತ್ತಿಗೆ ಧರ್ಮಕ್ಕನ ಈರ್ಷೆಯಿಂದ ವಿಷದ ಔಷಧಿ ಕುಡಿದಿದ್ದಾಗ್ಯೂ ಮಗುವಿಗೆ ಯಾವ ಅಪಾಯವೂ ಇಲ್ಲದೆ ಜನ್ಮವಿತ್ತು ತಾನು ಮರಣಹೊಂದುತ್ತಾಳೆ. ಮುದ್ದಿನ ಹೆಂಡತಿಯನ್ನು ಕಳೆದುಕೊಂಡ ಕೊಂಡಪ್ಪನು ಪತ್ನಿ ವಿಯೊಗ ತಾಳಲಾರದೆ ತಾನೂ ಕಾಲವಾಗುತ್ತಾನೆ. ಈ ರೀತಿ ತಬ್ಬಲಿಯಾದ ನಾರಾಯಣರು ಸಮಾಜದ ಜನರ ಸಹಾಯದಿಂದ ಬೆಳೆದು ದೊಡ್ಡವರಾಗುತ್ತಾರೆ.
ಕೈವಾರ ತಾತಯ್ಯನವರು ತಪಸ್ಸಿದ್ಧಿಯಿಂದ ಕಂಡುಕೊAಡ ಜ್ಞಾನಾಮೃತವನ್ನು ಪದ್ಯ, ಕೀರ್ತನೆ ಹಾಗೂ ಸ್ತೋತ್ರಗಳ ಮುಖಾಂತರ ಸಾಹಿತ್ಯ ರೂಪದಲ್ಲಿ ಜನತೆಗೆ ಹಂಚಿಕೊಟ್ಟ ಮಹಾನ್ ಯೋಗಿಗಳಾಗಿದ್ಧಾರೆ. ಭಾರತ ದೇಶದ ಭವಿಷ್ಯದ ಸ್ಥಿತಿಯನ್ನು ಕುರಿತು ಹೇಳಿರುವ “ಕಾಲಜ್ಞಾನವು ಒಂದು ಪ್ರವಾದಿಯ ಪವಾಡವಾಗಿದೆ, ಪ್ರಪಂಚದಲ್ಲಿ ಯಾವುದೋ ಒಂದು ಭಾಗದಲ್ಲಿ ಮುಂದೊAದು ದಿನ ನಡೆಯಬಹುದಾದ ಘಟನೆಗಳನ್ನು ಇದ್ದ ಸ್ಥಳದಲ್ಲೇ ಕುಳಿತು, ನಿರ್ದಿಷ್ಟವಾಗಿ ಹೇಳುವ ಶಕ್ತಿಯೇ ಕಾಲಜ್ಞಾನವಾಗಿದೆ”. ಈ ಕಾಲಜ್ಞಾನವನ್ನು ಹೇಳಿದವರು ಶ್ರೀ ಯೊಗಿನಾರೇಯಣ ಯತೀಂದ್ರರು. ದೇವಾಲಯದಲ್ಲಿ ಅರ್ಚಕರ ಸತ್ಸಂಗದಿAದ ವಿದ್ಯಾಭ್ಯಾಸ ಮಾಡಿದ ನಾರಾಯಣರಿಗೆ ಪ್ರಾಪಂಚಿಕ ಸಂಗತಿಗಳಿಗಿAತ ಆಧ್ಯಾತ್ಮಿಕ ಮಾರ್ಗವೇ ಪ್ರಿಯವಾಗುತ್ತಾ ಹೋದಾಗ್ಯೂ. ಪ್ರಾಪ್ತವಯಸ್ಸಿಗೆ ಬಂದಾಗ ಎಲ್ಲರಂತೆ ಸಂಸಾರಿಯಾಗಬೇಕಾಯಿತು. ನಾರಾಯಣರ ಜೀವನವೂ ಮೇಲೆ ತಿಳಿಸಿದ ಸಾಧಕರ ಜೀವನದಂತೆಯೇ ಆಯಿತು.
ಪ್ರತಿಯೊಬ್ಬ ಮಹಾಪುರುಷನ ಜೀವನದಲ್ಲಿ ಬರುವ ಸ್ತಿçÃಯ ನಡೆನುಡಿಯಿಂದ ಆಧ್ಯಾತ್ಮಿಕ ಮಾರ್ಗ ಅನುಸರಿಸಿ ಮೋಕ್ಷ ಪಡೆದ ಅನೇಕ ಸಂತರAತೆಯೇ ನಾರಾಯಣರ ಜೀವನವೂ ಆಯಿತು. ಇದು ಅವರು ವಾಸಿಸುತ್ತಿದ್ದ ನೆಲದ ಪುಣ್ಯ ಮತ್ತು ಈ ನಾಡಿನ ಭಾಗ್ಯ. ಅವರ ಪತ್ನಿ ಮುನಿಯಮ್ಮನ ಕಠೋರ ಮಾತುಗಳು ನಾರಾಯಣರನ್ನು ಆಧ್ಯಾತ್ಮಿಕ ಮಾರ್ಗಕ್ಕೆ ಪ್ರಚೋದಿಸಿದ ಕಾರಣ ಓರ್ವ ಬಳೆ ವ್ಯಾಪಾರಿ ನಾರಾಯಣರು ಸದ್ಗುರು ಶ್ರೀ ಯೋಗಿ ನಾರಾಯಣರಾಗಿ ಪರಿವರ್ತಿತರಾದರು. ಈ ರೀತಿ ಪರಿವರ್ತಿತರಾಗಲು ಅವರು ತುಳಿದ ಹಾದಿ ಬಹಳ ಕಠಿಣವಾಗಿತ್ತು. ಪ್ರಾಪಂಚಿಕ ಸುಖವೇ ಜೀವನದ ಪರಮ ಸುಖವೆಂದು ತಿಳಿದಿದ್ದ ಪತ್ನಿ ಮುನಿಯಮ್ಮನಿಗೆ ಪತಿ ನಾರಾಯಣರ ಆಧಾತ್ಮಿಕ ಒಲವು ಅರ್ಥವಾಗಲೇ ಇಲ್ಲ. ತಮ್ಮ ಮುದ್ದಿನ ಮಗಳು ಮುದ್ದಮ್ಮನನ್ನು ಕಳೆದುಕೊಂಡ ದುಃಖದಲ್ಲಿರುವಾಗ ಪತ್ನಿಯ ಕಠೋರ ಮಾತುಗಳಿಂದ ಮನೆ ಹಾಗೂ ಸಂಸಾರ ತೊರೆಯಬೇಕಾಗಿ ಬಂದು ತಾವು ಸದಾ ಆಶಿಸುತ್ತಿದ್ದ ಮೋಕ್ಷ ಸಾಧನೆಗಾಗಿ ಆಧ್ಮಾತ್ಮಿಕ ಮಾರ್ಗ ಹಿಡಿದ ನಾರಾಯಣರು ಕಠಿಣ ತಪಸ್ಸಿನಿಂದ ಹಾಗೂ ಗುರೋಪದೇಶದಿಂದ ಸಿದ್ದಿಗೈದ ಸಾಧುವಾದರು ಮತ್ತು ಜನರಿಗೆ ಸನ್ಮಾರ್ಗ ಬೋಧಿಸುವ ಗುರುವಾದರು. ಅವರ ಬೋಧನೆಯೆಲ್ಲವೂ ಆ ಪ್ರಾಂತದ ಜನಸಾಮಾನ್ಯರಿಗೆ ತಿಳಿಯುವ ಭಾಷೆಯಾದ ತೆಲುಗು ಭಾಷೆಯಲ್ಲಿತ್ತು.
ಪ್ರಗತಿಯ ಉತ್ತುಂಗಕ್ಕೆ ಏರುವ ಭರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದಿರುವ ಮಾನವ ಜನಾಂಗ ತನ್ನ ಹುಟ್ಟಿಗೆ ಮತ್ತು ಉಳಿವಿಗೆ ಕಾರಣವಾದ ಪ್ರಕೃತಿಯ ಒಡನಾಟವನ್ನೇ ಮರೆತಿದ್ದಾನೆ. ಇದರ ಪರಿಣಾಮವನ್ನು ಮತ್ತು ಮುಂದಿನ ಆಗುಹೋಗುಗಳನ್ನು ಜಗತ್ತಿನಲ್ಲಿ ಅನೇಕರು ಭವಿಷ್ಯವಾಣಿಗಳ ರೂಪದಲ್ಲಿ ಈಗಾಗಲೆ ಮಂಡಿಸಿದ್ದಾರೆ. ಯುರೋಪ್, ಅಮೇರಿಕಾ, ಜಪಾನ್ ರಾಷ್ಟçಗಳಲ್ಲಿ ಜನ ಇಂತಹ ಮಹನೀಯರನ್ನು ಮತ್ತೆ ಮತ್ತೆ ನೆನೆಯುತ್ತಾರೆ ಮತ್ತು ಪೂಜಿಸುತ್ತಾರೆ. ಆದರೆ ಭರತಖಂಡದಲ್ಲಿ ಅವೆಲ್ಲದಕ್ಕಿಂತ ಹೆಚ್ಚಿನ ಭವಿಷ್ಯವಾಣಿಗಳಿವೆ. ಅನಾದಿಕಾಲದಿಂದಲೂ ಕಾಲಕಾಲಕ್ಕೆ ಈ ದೇಶದಲ್ಲಿ ಹಲವಾರು ಮಹಾತ್ಮರು, ಮನುಜ ಕುಲದ ಆಗುಹೋಗುಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಇವರುಗಳಲ್ಲಿ ಕರ್ನಾಟಕದ ಶ್ರೀ ಯೋಗಿ ನಾರಾಯಣರು ಬಹಳ ಪ್ರಮುಖರು.
ಈ ಕಾಲಜ್ಞಾನದ ರಚನೆ ಸರಿಸುಮಾರು ಕ್ರಿ.ಶ. 1813-14ರಲ್ಲಿ ಆಗಿದೆ ಎಂದು ನಮೂದಿಸಲಾಗಿದೆ (ಕೈಪು ಲಕ್ಷಿö್ಮÃನರಸಿಂಹ ಶಾಸ್ತಿç-2015), ವೈಜ್ಞಾನಿಕವಾಗಿ ಆ ದಿನಗಳನ್ನು ವಿಮರ್ಶಿಸುವುದಾದರೆ, ಅಂದು ಖಾಯಿಲೆ ತರುವ ಸೂಕ್ಷಾö್ಮಣುಗಳ ಬಗ್ಗೆ ಅರಿವಿರಲಿಲ್ಲ. ಸಾಂಕ್ರಾಮಿಕ ರೋಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸಾಯುವ ಪರಿಸ್ಥಿತಿ, ಔಷಧಗಳ ಲಭ್ಯತೆ ಇರಲಿಲ್ಲ, ಹಸಿರುಕ್ರಾಂತಿಯಾಗಿರಲಿಲ್ಲ, ಸ್ವಾತಂತ್ರö್ಯವಿರಲಿಲ್ಲ, ಎಲ್ಲವೂ ಕೆಲವರಿಗೆ ಮಾತ್ರ ದಕ್ಕಿತ್ತು. ಇನ್ನೆಲ್ಲರೂ ಇಲ್ಲದಿರುವುದರ ಜೊತೆಗೆ ಬದುಕಿದ್ದರು. ಹುಟ್ಟು ಆಕಸ್ಮಿಕವಾದರೂ ಸಾವು ಯಾವ ಕಾಯಿಲೆಯಿಂದಾದರೂ ಬರಬಹುದಿತ್ತು. ಆ ದಿನಗಳಲ್ಲಿ ಮುಂದಿನ ಕಾಲಮಾನದಲ್ಲಿ ಜನಸಂಖ್ಯೆ ಸ್ಪೋಟವಾಗಬಹುದೆಂಬ ಮುನ್ಸೂಚನೆ ದೈವಬಲವೇ ನಿಜ. ಮಾನವ ಇಂದು ಹಲವಾರು ಕಾಯಿಲೆಗಳ ಮೇಲೆ ಸಾಧಿಸಿರುವ ಹಿಡಿತ, ಹುಟ್ಟು ಮತ್ತು ಸಾವಿನ ಪ್ರಮಾಣದಲ್ಲಿ ಆಗಿರುವ ಏರು-ಪೇರು ಎಲ್ಲವನ್ನೂ ನಾನು ಮೊದಲ ಪದ್ಯದ ಸೂಚ್ಯವಾಗಿ ಕಂಡೆ. ಮಾನವ ಇಂದು ವಿಜ್ಞಾನ ತಂತ್ರಜ್ಞಾನದ ನೆರವಿನಿಂದ ಈ ಭೂಮಿಯ ಒಡೆಯನಾಗಿ ಮೆರೆಯುತ್ತಿದ್ದಾನೆ. ಪರಿಸರ ವ್ಯವಸ್ಥೆಯಲ್ಲಿ “ಪಿರಮಿಡ್ ಸಂಖ್ಯೆಯ” ನಿಯಮವನ್ನು ಮೀರಿ ಮಾನವನ ಜನಸಂಖ್ಯೆ ಬೆಳೆದಿದೆ. ಅದಕ್ಕೆ ಇರಬೇಕು ತಾತಯ್ಯನವರು ತಮ್ಮ ಮೊದಲ ಪದ್ಯದಲ್ಲಿ ಜನಸಂಖ್ಯಾ ಸ್ಪೋಟ ಮತ್ತು ಇದರಿಂದ ಭೂಮಿಯ ಮೇಲಾಗುವ ಹೊರೆಯ ಬಗ್ಗೆ ಸೂಚ್ಯವಾಗಿ ತಿಳಿಸಿದ್ದಾರೆ. ಭೂಮಿಯೇ ದೇವರೆಂದು ಪೂಜಿಸುವ ನಾವು, ಭೂತಾಯಿಯೇ ದೇವರಲ್ಲಿ ಈ ಭಾರದಿಂದ ಮುಕ್ತಗೊಳಿಸಲು ಪ್ರಾರ್ಥಿಸುತ್ತಾಳೆ ಎನ್ನುವ ಸೂಚನೆ ಕಾಲಜ್ಞಾನವಲ್ಲದೆ ಇನ್ನೇನು. ಇದಕ್ಕೆ ಸಂಬAಧಪಟ್ಟAತೆ ವಾಷಿಂಗ್‌ಟನ್ ವಿಶ್ವವಿದ್ಯಾನಿಲಯ ಮುಂದಿನ ಜನಸಂಖ್ಯೆಯ ಬಗ್ಗೆ ನಡೆಸಿರುವ ಸಂಶೋಧನೆಯಿAದ ಹೊರಬಂದಿರುವ ಸತ್ಯ ಮತ್ತಷ್ಟು ಭಯಾನಕವಾಗಿದೆ. ಈ ಸಂಶೋಧನೆ ಭೂಮಿಯ ಮೇಲೆ 2050ಕ್ಕೆ 9.6 ಬಿಲಿಯನ್ ಹಾಗೂ 2100ಕ್ಕೆ 11 ಬಿಲಿಯನ್ ಜನಸಂಖ್ಯೆಯನ್ನು ಹೊಂದುತ್ತದೆ ಎಂದು ತಿಳಿಸುತ್ತದೆ. ಅಂದರೆ 18ನೇ ಶತಮಾನದ ತಾತಯ್ಯನವರ ಕಾಲಜ್ಞಾನ ಇಂದಿಗೂ ಸತ್ಯ ಮುಂದೆಯೂ ಸತ್ಯ.
ಶ್ರೀ ತಾತಯ್ಯನವರು ಮತ್ತೊಂದು ಕಡೆ “ನಡೆ ನುಡಿಗೆ ನರಹರಿಯ ನಾಮ ಜಪಿಸಲು ಬೇಕು, ಜಾತಿ ಜನ್ಮಗಳೊಂದು ಸಮಕೂಡಬೇಕು” ಎಂದು ಕೀರ್ತನೆ ಹಾಡಿರುವುದಲ್ಲದೇ “ಜಾತಿ ಭೇದವ ಮಾಡೋ ಪಾತಕರನ್ನು ಬಿಡಬೇಕು” ಎಂದು ಹೇಳಿದ್ದಾರೆ. ನಾವೆಲ್ಲರೂ ಮಾನವರು, ಹುಟ್ಟಿನಿಂದ ಮಾನವರೆಲ್ಲರು ಒಂದೇ ಕುಲದವರು. ಇವರಲ್ಲಿ ಮೇಲು ಕೀಳುಗಳೆಂಬ ಬೇಧಕ್ಕೆ ಅವಕಾಶವೇ ಇರಕೂಡದು. ಎಲ್ಲರೂ ಎಲ್ಲರ ಶ್ರೇಯಸ್ಸಿಗಾಗಿ ಸಹಕರಿಸಿ ಬಾಳುವುದರಿಂದಲೇ ಸಮಾಜವು ಉನ್ನತಿ ಹೊಂದುತ್ತದೆ. ಆದುದರಿಂದ ಉತ್ತಮ ಕುಲದವರೆಂದು ಹೇಳಿಕೊಳ್ಳುವ ಅಥವಾ ಹೇಳುವ ಅನುಚಿತವಾದ ಅಭಿಮಾನವನ್ನು ಬಿಟ್ಟು ಮಾನವರೆಲ್ಲ ಒಂದೇ ಕುಲದವರೆಂಬ ಭಾವನೆಯಿಂದ ವಿಶ್ವ ಬಂದುತ್ವವನ್ನು ಗಳಿಸಿ ಬಾಳಬೇಕೆಂದು ಬೋಧಿಸಿದ್ದಾರೆ. ನಾರಾಯಣರು ಜಾತಿಯತೆಯ ಬಗ್ಗೆ ಎತ್ತುವ ಪ್ರಶ್ನೆಗಳು ಕೂಡ ಗಂಭೀರವಾದವುಗಳು. ಮೇಳು-ಕೀಳೆನ್ನುವ ಮನೋಭಾವವಿದ್ದುದರಿಂದಲೇ, ನವ ಸಮಾಜ ನಿರ್ಮಾಣವಾಗಿಲ್ಲ ಎನ್ನುವ ನಿಲುವಿನೊಂದಿಗೆ ಅವರು ‘ಜಾತಿವಾರಮೊಯೆರುಗ ಲೇಮಯ್ಯ’ ಸ್ತಿçÃಪುರುಷ ಜಾತುಲವಿ ಸೃಷ್ಟಿಲೋರೆಂಡೋ’ ಎನ್ನುತ್ತಾರೆ. ನಮ್ಮ ಜಾತಿ ಮೇಲು ನಮ್ಮ ಜಾತಿ ಮೇಲೆಂದು ಹೊಡೆದಾಡುತ್ತೇವೆ. ಆದರೆ ಸೃಷ್ಟಿಯಲ್ಲಿ ಗಂಡು ಹೆಣ್ಣೆಂಬ ಎರಡೇ ಜಾತಿ ಎಂದು ಎಚ್ಚರಿಸಿದ್ದಾರೆ. ನಾವೆಲ್ಲರು ಹೊಂದಿರುವ ದೇಹ ಮಾತ್ರ ಒಂದೇ ರೀತಿಯಿದ್ದು, ದೇಹಕ್ಕಿಲ್ಲದ ಮನಸ್ಸಿಗಿಲ್ಲದ ಜಾತಿ ಎನ್ನುವ ಕಳಂಕವನ್ನು ಸಮಾಜಕ್ಕೇಕೆ ಅಂಟಿಸಬೇಕು ಎನ್ನುವ ವಾದವನ್ನು ಮಂಡಿಸುತ್ತಾರೆ.
ಸುಖಭೋಗಗಳ ಕಡೆಗೆ ನಾನು ತಾನೆಂದು ಮುನ್ನುಗ್ಗಿ ಅವುಗಳನ್ನು ಪಡೆಯಲು ಅನೇಕ ಪ್ರಯತ್ನಗಳಿಂದ ಗದ್ದಲ ಮಾಡುವ ಜನರೇ ಲೋಕದಲ್ಲಿ ಹೆಚ್ಚಾಗಿ ತುಂಬಿಕೊAಡಿದ್ದಾರೆ. ತತ್ವಜ್ಞಾನವು ಅವರಿಗೆ ತಿರಸ್ಕಾರದ ವಸ್ತುವಾಗಿದೆ. ಹಾಗೆಯೇ ಭೋಗ ವೈಭೋಗಗಳನ್ನು ಪಡೆಯುವಂತೆ ಪ್ರೋತ್ಸಾಹಿಸುವವರೆ ನಮ್ಮ ಸುತ್ತಮುತ್ತಲು ಹೆಚ್ಚಿನ ಜನರಿದ್ದಾರೆ ಹೊರತು, ಜ್ಞಾನ ಬೋಧನೆ ಮಾಡುವ ಸನ್ಮಾರ್ಗದಲ್ಲಿ ಕರೆದೊಯ್ಯವ ಸತ್ವಪುರುಷನ ಬಳಿ ಯಾವೊಬ್ಬರು ಸೇರುತ್ತಿಲ್ಲ. ಅಶಾಶ್ವತವಾದ ಲೌಕಿಕ ಭೋಗಗಳ ಕಡೆ ನಾನು ತಾನೆಂದು ಮುನ್ನುಗ್ಗುವ ಅಜ್ಞಾನಿಗಳ ಪಾಲಿಗೆ ತತ್ವಜ್ಞಾನವು ಏನೇನೂ ಬೆಲೆಯಿಲ್ಲದ ಅಗ್ಗದ ವಸ್ತುವಾಗಿದೆ ಎಂದು ಶ್ರೀ ತಾತಯ್ಯನವರು ಲೋಕದ ಪ್ರವೃತ್ತಿಯ ಬಗೆಗೆ ಮರುಕ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ದುಡ್ಡಿದ್ದವನೇ ದೊಡ್ಡಪ್ಪ ಎನ್ನುವ ಹಾಗೆ ಐಶ್ವರ್ಯವಂತನನ್ನು ಕುಲದಲ್ಲಿ ಶ್ರೇಷ್ಠನೆಂದು ಗೌರವಿಸಿ ದರಿದ್ರನನ್ನು ಕುಲಹೀನನೆಂದು ತೆಗಳುವ ಪ್ರವೃತ್ತಿ ಜನರಲ್ಲಿ ಹೆಚ್ಚಿದೆ. ವ್ಯಕ್ತಿಯ ಶ್ರೇಷ್ಠತೆಯನ್ನು ಐಶ್ವರ್ಯದಿಂದ ನಿರ್ಧರಿಸಬಾರದೆಂದು ತಾತಯ್ಯನವರು ಹೇಳಿದ್ದಾರೆ. ಸಿರಿತನ ಬಡತನಗಳು ಚಿರಕಾಲ ಶಾಶ್ವತವಾಗಿ ನಿಲ್ಲುವುದಿಲ್ಲ. ಹಣದಿಂದ ಮಾತ್ರವೇ ಕುಲಶ್ರೇಷ್ಠನೆನಿಸಿಕೊಂಡ ಅದೇ ಒಬ್ಬ ವ್ಯಕ್ತಿಯು ದರಿದ್ರನಾಗುತ್ತಲೇ ಸಮಾಜದ ದೃಷ್ಟಿಯಿಂದ ಕುಲಹೀನನೆನಿಸಿಕೊಳ್ಳುತ್ತಾನೆ. ಆದ್ದರಿಂದ ಶ್ರೇಷ್ಠತ್ವಕ್ಕೆ ಗುಣ ಪ್ರಧಾನವೇ ಹೊರತು ಹಣವಲ್ಲವೆಂದು ತಾತಯ್ಯನವರ ಅಭಿಮತವಾಗಿದೆ. ಬಡತನ ಬಂದಾಗ ಕುಗ್ಗದೆ, ಸಿರಿತನ ಬಂದಾಗ ಹೆಮ್ಮೆಯಿಂದ ಬೀಗದೆ ಬುದ್ಧಿವಂತನಾಗಿ ಎರಡು ಅವಸ್ಥೆಗಳಲ್ಲೂ ರಾಗ ದ್ವೇ಼ಷಗಳನ್ನು ಬಿಟ್ಟು ಸಮಭಾವ ಹೊಂದುವವನೆ ಸ್ವತಃ ಈಶ್ವರನಾಗುವನೆಂದು ಶ್ರೀ ಯತೀಂದ್ರರು ಹೇಳಿದ್ದಾರೆ.
ಆತ್ಮ ಶುದ್ಧಿ ಇಲ್ಲದೆ ನಾವು ಎಂತಹ ಉನ್ನತ ಕುಲದಲ್ಲಿ ಹುಟ್ಟಿದರೂ ಪ್ರಯೋಜನವಿಲ್ಲ ಎನ್ನುವ ಸಂದೇಶವನ್ನು ನೀಡಿದ್ದಾರೆ. ಆಸೆಯೇ ಮಾನವನ ಸಕಲ ದುಃಖಕ್ಕೆ ಆಗರವಾದುದು ತನ್ನ ಆಸೆಯನ್ನು ಈಡೇರಿಸಿಸಿಕೊಳ್ಳುವುದಕ್ಕಾಗಿ ಮಾನವನು ಎಂತಹ ಹೇಯಕೃತ್ಯಕ್ಕೂ ಹಿಂಜರಿಯನು ಅಂಥವನಿಗೆ ಇತರರ ಭಾದೆ ಅರ್ಥವಾಗಾರವು. ಸಂಪತ್ತಿನ ವ್ಯಾಮೋಹದಿಂದ ಮಾನವೀಯತೆ, ಅನುಕಂಪ, ಮಮಕಾರ ಜೀವಪರ ಕಾಳಜಿಗಳೆಂಬ ಹೃದಯ ಸಂಪತ್ತನ್ನು ಕಳೆದುಕೊಂಡವನಿAದ ಸಮಾಜಕ್ಕೆ ಯಾವ ಬಗೆಯ ಉಪಯೋಗವಿಲ್ಲ. ಮನುಷ್ಯನಲ್ಲಿನ ಮೌಢ್ಯ, ವಂಚನೆ, ಆಲಸ್ಯ, ಚಪಲ, ಅಹಂಕಾರ ಕಲಹ, ಕಠೋರತೆ, ಔದಾಸೀನ್ಯ, ದಯಾಶೂನ್ಯತೆ ಮುಂತಾದವುಗಳಿAದ ಮನುಷ್ಯನ ಮನಸ್ಸು ಕಲ್ಮಶಕ್ಕೊಳಗಾಗಿದೆ. ಇವುಗಳಿಂದ ಹೊರಬಂದು ಮನಸ್ಸನ್ನು ಶುದ್ಧಿಗೊಳಿಸಿಕೊಳ್ಳಬೇಕಾದರೆ ಇಂದ್ರಿಯ ನಿಗ್ರಹ ಅತ್ಯಗತ್ಯ ಎನ್ನುತ್ತಲೇ ಅದಕ್ಕೆ ಪೂರಕವಾಗಿ ಕರುಣೆ, ದಯೆ, ವಿನಯ, ಧರ್ಮ, ನಿರಹಂಕಾರ, ಸತ್ಯ, ಜ್ಞಾನ, ತಪಸ್ಸು, ವೈರಾಗ್ಯ, ವಿವೇಕ, ದಾನಗುಣಗಳಂತಹ ಸಾತ್ವಿಕ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಸುತ್ತಲಿನ ಸಮಾಜ ಪರಿಶುದ್ಧತೆಯಿಂದ ಕೂಡಿರಲು ಸಾಧ್ಯವಾಗುತ್ತದೆ ಎನ್ನುವ ಹಿತವಚನವು ನಾರಾಯಣರ ಸಾಹಿತ್ಯದುದ್ದಕ್ಕೂ ಕಾಣಿಸಿಕೊಂಡಿದೆ.
ಜಗತ್ತು ಇಂದು ವಿಪರೀತವಾದ ಗಂಡಾAತರಗಳನ್ನು ಎದುರಿಸುತ್ತಿದೆ. ವಿಪತ್ತಿನ ಭಯದಿಂದ ಲೋಕವು ಶಾಂತಿ ಸೌಖ್ಯಗಳಿಗೆ ಹಂಬಲಿಸುತ್ತಿರುವ ದಿನಗಳಿವು. ನೈತಿಕ ಅಧಃಪತನದಿಂದ ಉಂಟಾಗಿರುವ ವ್ಯರ್ಥ ಕಲಹಗಳು, ಅಧಿಕಾರದ ದಾಹದಿಂದ ನಾರುತ್ತಿರುವ ರಾಜಕೀಯ ವ್ಯವಸ್ಥೆ, ಮತ ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಮಾರಣ ಹೋಮಗಳು, ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ನಡೆಯುತ್ತಿರುವ ಕುತಂತ್ರ, ಮೋಸ, ವಂಚನೆಗಳು, ದೈಹಿಕ ಸುಖಗಳಿಗಾಗಿ ಮಾಡುತ್ತಿರುವ ಅಮಾನವೀಯ ಕೃತ್ಯಗಳು ಮುಂತಾದವುಗಳು ಇಂದು ಅಲ್ಲೋಲ ಕಲ್ಲೋಲಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಮನವೀಯತೆಯನ್ನು ಬೆಳೆಸಿಕೊಳ್ಳುವಂತೆ ಸಾಮಾಜಿಕ ಸ್ವಾಸ್ಥö್ಯವನ್ನು ಕಾಪಾಡಿಕೊಳ್ಳಲು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸೂಚಿಸಿರುವ ನಾರಾಯಣರ ವಿಚಾರಧಾರೆ ಚಿಂತನಾರ್ಹವಾದವುಗಳು.
ಯೋಗಿನಾರಾಯಣರು ಸಮಸ್ಥಿತವಾದ ಆರ್ಥಿಕ ರಚನೆಯನ್ನು ಒಪ್ಪಿಕೊಂಡಿದ್ದವರು. ಅವರಿಗೆ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ನಂಬಿಕೆ ಇರಲಿಲ್ಲ. ವ್ಯಕ್ತಿಗಿಂತ ವಸ್ತು ದೊಡ್ಡದಲ್ಲ. ಪ್ರೀತಿ-ವಿಶ್ವಾಸಗಳ ಮುಂದೆ ಹಣ ಶೂನ್ಯ ಎಂಬ ಉದಾಸೀನತೆಯನ್ನು ಹಣದ ಬಗೆಗೆ ತೋರುತ್ತಿದ್ದರು. ಇವರ ಜ್ಞಾನ ದೀವಿಗೆಯಲ್ಲಿ ನಾವು ಮುನ್ನಡೆಯುವುದೇ ಆದರೆ, ನಮ್ಮ ಜಗತ್ತಿನಲ್ಲಿ ಯಾವ ಸಂಕಟಗಳೂ ಪ್ರಾಪ್ತವಾಗಲಾರದು. ನಾರಾಯಣರು ಈ ಎಲ್ಲ ಆರ್ಥಿಕ ಚಿಂತನೆಗಳಿAದ ಅವರೊಬ್ಬ ಸಮರ್ಥ ಅರ್ಥಶಾಸ್ತçಜ್ಞನಾಗಿದ್ದರು ಎಂಬ ಮಾತಲ್ಲಿ ಎರಡಿಲ್ಲ.
ಉತ್ಕೃಷ್ಟ ಮಾಹಿತಿಯ ಕಣಜದಂತಿರುವ ತಾತಯ್ಯನವರ ಆಲೋಚನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ. ಬದುಕಿನ ಸೂತ್ರದಂತಿರುವ ಇವರ ರಚನೆಗಳ ಓದು ನಮ್ಮ ಬದುಕಿನ ನಡೆಗೆ ಮಾರ್ಗದರ್ಶಿಯಾಗಬಲ್ಲದು.
ತಾತಯ್ಯನವರ ಪವಾಡಗಳು
- ಆಲೆಮನೆಯಲ್ಲಿ ಕಾದ ಕುದಿಯುವ ಕೊಪ್ಪರಿಗೆಯಿಂದ ಕೈಹಾಕಿ ಬೆಲ್ಲದ ತೆಗೆದು ಹಸಿದ ಕುರಿಕಾಯುವವರಿಗೆ ನೀಡುತ್ತಿದ್ದರು.
- ಪ್ರತಿದಿವಸ ಮುಂಜಾಣೆ ಗರುಡ ದರ್ಶನ ಮಾಡಿ ಕೈ ಮುಗಿಯುತ್ತಿದ್ದ ತಾತಯ್ಯನವರನ್ನು ಅವಮಾನಿಸಲು ಮಹಮದೀಯರು ಕೃತಕ ಮಣ್ಣಿನ ಗರುಡ ಪಕ್ಷಿಯನ್ನು ಮಾಡಿ ಮರದ ಮೇಲೆ ಇಟ್ಟಾಗ ತಾತಯ್ಯನವರು ಆ ಮಣ್ಣಿನ ಕೃತಕ ಪಕ್ಷಿಗೆ ಜೀವ ಬರಿಸಿ ಹಾರುವಂತೆ ಮಾಡಿದರು.
- ಬೆಣಚುಕಲ್ಲನ್ನು ಸಿಹಿಯಾದ ಕಲ್ಲುಸಕ್ಕರೆಯಾಗಿಸಿ ದನಕಾಯುವ ಹುಡುಗರಿಗೆ ಊರಿನ ಮಕ್ಕಳಿಗೆ ನೀಡಿ ಸಂತೋಷಪಡುತ್ತಿದ್ದರು.
- ತಮ್ಮ ಬಳಿ ಬಂದು ಘಟಸರ್ಪಗಳಂತೆ ಹೆಡೆ ಆಡಿಸುತ್ತಾ ವೇದಾಂತ ವಿಚಾರಗಳ ಬಗ್ಗೆ ಬೇಧವಾದ ಮಾಡಿ ಜಯಿಸಬೇಕೆಂದಿದ್ದವರನ್ನು ಮಣಿಸಿದರು.
- ಭಕ್ತರು ನಶ್ಯ ತಯಾರಿಸುವ ಸಂಬAಧ ಬೇಕಾಗುವ ನೀರನ್ನು ಸರ್ಪದಿಂದ ಕೊಡಿಸುವರು.
- ಕುರುಡ ಮಲಯ್ಯ ಶ್ರೀ ವೆಂಕಟರಮಣನನ್ನು ಪ್ರಾರ್ಥಿಸಿ ಒಂದು ಕಣ್ಣು ಪಡೆದು, ಇನ್ನೊಂದು ಕಣ್ಣನ್ನು ಯೋಗೀಂದ್ರರಲ್ಲಿ ಬೇಡಿದಾಗ ಕಣ್ಣನ್ನು ಕರುಣಿಸಿದರು.
- ಶಿಷ್ಯಪೂವಯ್ಯನನ್ನು ನೋಡಲು ವಡಿಗೇನ ಹಳ್ಳಿಗೆ ಹೋಗಿದ್ದಾಗ ಅನಾವೃಷ್ಟಿಗೆ ತುತ್ತಾಗಿದ್ದ ಜನರು ತಾತಯ್ಯನವರನ್ನು ಮಳೆ ಬರಿಸಲು ಪ್ರಾರ್ಥಿಸಿದಾಗ ಅಷ್ಟದಿಕ್ಪಾಲಕರನ್ನು ಪ್ರಾರ್ಥಿಸಿ ಮಳೆ ಸುರಿಸಿದರು.
- ಒಮ್ಮೆ ತಾತಯ್ಯನವರು ಶಿಷ್ಯರ ಸಮ್ಮುಖದಲ್ಲಿ ಕೈಯನ್ನು ಉಜ್ಜಿಕೊಂಡಾಗ ಹೊಗೆ ಏಳುತ್ತಿತ್ತು. ಅದನ್ನು ನೋಡಿ ಶಿಷ್ಯರು ಏಕೆಂದು ಕೇಳಿದಾಗ ತಿರುಪತಿಯಲ್ಲಿ ಶ್ರೀನಿವಾಸನ ಪೀತಾಂಬರಕ್ಕೆ ಬೆಂಕಿ ಹತ್ತಿಕೊಂಡಿತ್ತು ಆರಿಸಿದೆ ಎಂದರು. ತಿರುಪತಿಯಲ್ಲೂ ಬೆಂಕಿಯ ಆರಿಸುವುದನ್ನು ನೋಡಿದ್ದ ಅರ್ಚಕರು ಯತೀಂದ್ರರ ಮಹಿಮೆಯನ್ನು ಕೊಂಡಾಡಿ ಪ್ರಚಾರ ಮಾಡಿದರು.
- ಮಠದ ಆವರಣದಲ್ಲಿರುವ ಕೊಳದಲ್ಲಿ ಬಹಳ ಹೊತ್ತು ಮುಳುಗಿ ಮೇಲಕ್ಕೆ ಬರುತ್ತಿದ್ದರು. ಪಾದ್ರಿಯೊಬ್ಬರು ಇಷ್ಟು ಹೊತ್ತು ನೀರಿನಲ್ಲಿ ಏನು ಮಾಡುತ್ತಿದ್ದಿರೆಂದು ಕಾರಣ ಕೇಳಿದಾಗ ತಿರುಪತೆಗೆ ಪೂಜಾ ಸಮಯದಲ್ಲಿ ಅಲ್ಲಿಗೆ ಹೋಗಿ ಬರುತ್ತಿರುವೆನೆಂದು ಹೇಳಿದರು. ಇದನ್ನು ಖಾತ್ರಿ ಪಡಿಸಿಕೊಳ್ಳಲೆಂದು ತಿರುಪತಿ ಧರ್ಮಾಧಿಕಾರಿಗಳಿಗೆ ಪತ್ರ ಬರೆದ ಪಾದ್ರಿ, ಅದು ಸತ್ಯವೆಂದು ತಿಳಿದು ತಾತಯ್ಯನವರ ಅಪಾರ ಮಹಿಮೆಯನ್ನು ಕೊಂಡಾಡಿದರು.
ಆತ್ಮ ಪೂಜೆಯಿಲ್ಲದ ಅಗ್ರ ಜನ್ಮವೇಕೆ?
ಮನಸ್ಸು ನಿಲ್ಲಿಸದ ಮಂತ್ರವೇಕೆ?
ಅನ್ನದಾನವಿಲ್ಲದ ಶ್ರೀಮಂತಿಕೆಯೇಕೆ?
ಕಾಸಿಗಾಗಿ ರಚಿಸುವ ಕಾವ್ಯವೇಕೆ?
ಕೂಲಿಗಾಗಿ ಪೂಜಿಸುವ ವೈಷ್ಣವ ಮತವೇಕೆ?
ವಯಸ್ಸಾದ ವೈಶ್ಯಗೆ ಅಲಂಕಾರವೇಕೆ?
ಮನಸ್ಸಿಗೆ ನಿಲ್ಲದ ಯೋಗತತ್ವವೇಕೆ?
ಚಪಲಚಿತ್ತರು ಈ ರೀತಿ ಶ್ರೇಷ್ಠವೆಂದು
ಹಿಗ್ಗುತ್ತಿರುವರು ಲಜ್ಜೆ ಬಿಟ್ಟು
ಭಕ್ತ ಮಂದಾರ
ನಾದ ಬ್ರಹ್ಮಾನಂದ ನಾರೇಯಣ ಕವಿ.

ಡಾ.ಟಿ.ರಮೇಶ
ಸಹಾಯಕ ಪ್ರಾಧ್ಯಾಪಕರು
ಮೈಸೂರು
ಮೊ. ನಂ. 9591688536





