
ಮೈಸೂರು :- ಈಗಿನ ವಿದ್ಯಾರ್ಥಿಗಳು ಓದುವುದರ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ರಾಜ್ಯಕ್ಕೇ, ದೇಶಕ್ಕೇ ಕೀರ್ತಿ ತರಬೇಕೆಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು. ಅವರು ಮೈಸೂರಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ಮತ್ತು ಗಂಥಾಲಯವನ್ನೂ ಉದ್ಘಾಟಿಸಿ ಮಾತನಾಡುತ್ತಾ,
ಬ್ಯಾಸ್ಕೆಟ್ ಬಾಲ್ಒಂದು ಜನಪ್ರಿಯ ಕ್ರೀಡೆಯಾಗಿದೆ. ಈ ಆಟವನ್ನು ಎರಡು ತಂಡಗಳು ಆಡುತ್ತವೆ. ಪ್ರತೀ ತಂಡದಲ್ಲಿ ಸಾಮಾನ್ಯವಾಗಿ 5 ಆಟಗಾರರು ಮೈದಾನದಲ್ಲಿ ಇರುತ್ತಾರೆ.
ಆಟದ ಮುಖ್ಯ ಉದ್ದೇಶ

ಬ್ಯಾಸ್ಕೆಟ್ ಬಾಲ್‌ನಲ್ಲಿ ಆಟಗಾರರು ಚೆಂಡನ್ನು ಎದುರಾಳಿ ತಂಡದ ಹೂಪ್ (ಬಾಸ್ಕೆಟ್)ಒಳಗೆ ಹಾಕಬೇಕು. ಹೀಗೆ ಮಾಡಿದಾಗ ಅಂಕಗಳು ಸಿಗುತ್ತವೆ. ಹೂಪ್ ಒಳಗೆ ಸಾಮಾನ್ಯ ಶಾಟ್ ಮಾಡಿದರೆ 2 ಅಂಕಗಳು ಸಿಗುತ್ತವೆ. ಮೂರು ಅಂಕಗಳ ರೇಖೆ (3-point line) ಹೊರಗಿನಿಂದ ಹಾಕಿದರೆ – 3 ಅಂಕಗಳು ಸಿಗುತ್ತವೆ.
ಫ್ರೀ ತ್ರೋ ಮಾಡಿದರೆ 1 ಅಂಕ ಸಿಗುತ್ತದೆ.
ಸಾಮಾನ್ಯವಾಗಿ ಪಂದ್ಯವನ್ನು 4 ಭಾಗಗಳು (quarters) ಆಗಿ ಆಡುತ್ತಾರೆ. ಪ್ರತಿಯೊಂದು ಭಾಗಕ್ಕೆ ನಿರ್ದಿಷ್ಟ ಸಮಯ ಇರುತ್ತದೆ ಎಂದು ತಿಳಿಸಿದರು.
ಬ್ಯಾಸ್ಕೆಟ್ ಬಾಲ್ ಅನ್ನು 1891 ರಲ್ಲಿ ಜೇಮ್ಸ್ ನಾಯಿಸ್ಮೀತ್ (James Naismith) ಎಂಬ ಶಿಕ್ಷಕರು ಅಮೇರಿಕಾದಲ್ಲಿ ಕಂಡುಹಿಡಿದರು, ಮೈಕಾಲ್ ಜೋರ್ಢಾನ್ ರವರಂತಹ ಪ್ರಸಿದ್ಧ ಆಟಗಾರರು ಇದ್ದಾರೆ ಎಂದು ವಿವರವಾಗಿ ಮಾತನಾಡಿದರು.

ಗ್ರಂಥಾಲಯ ಎಂದರೆ ಪುಸ್ತಕಗಳು, ಪತ್ರಿಕೆಗಳು, ಮ್ಯಾಗಜೀನ್ ಗಳು ಹಾಗೂ ಜ್ಞಾನಕ್ಕೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ ಜನರಿಗೆ ಓದಲು ಮತ್ತು ಅಧ್ಯಯನ ಮಾಡಲು ನೀಡುವ ಸ್ಥಳವಾಗಿದೆ. “ಗ್ರಂಥ” ಎಂದರೆ ಪುಸ್ತಕ, “ಆಲಯ” ಎಂದರೆ ಸ್ಥಳ.
ಆದ್ದರಿಂದ ಗ್ರಂಥಾಲಯವೆಂದರೆ ಪುಸ್ತಕಗಳ ಮನೆ ಅಥವಾ ಪುಸ್ತಕಗಳ ಭಂಡಾರ ಎಂದು ಹೇಳಬಹುದಾಗಿದೆ. ಪುಸ್ತಕಗಳ ಸಂಗ್ರಹ ಮಾಡಿದ ಪಾಂಡವಪುರದ ಅಂಕೇಗೌಡರವರಿಗೆ ಭಾರತ ಸರ್ಕಾರವೂ “ಪದ್ಮಶ್ರೀ” ನೀಡಿರುವುದನ್ನೂ ಸ್ಮರಿಸಿದರು.
ಗ್ರಂಥಾಲಯದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಅಧ್ಯಾಪಕರಲ್ಲಿ, ಜನಸಾಮಾನ್ಯರಲ್ಲಿ ಓದುವ ಅಭ್ಯಾಸ ಬೆಳೆಸುವುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಹಾಯ ಮಾಡುವುದು. ಸಮಾಜದಲ್ಲಿ ಜ್ಞಾನ ಮತ್ತು ಸಂಸ್ಕೃತಿ ಹೆಚ್ಚಿಸುತ್ತದೆ.
ವಿದ್ಯಾರ್ಥಿಗಳ ಮನಸ್ಸಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಮಾಜವನ್ನು ಶಿಕ್ಷಣದ ಕಡೆಗೆ ಮುನ್ನಡೆಸುತ್ತದೆ.
ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯ ಚಳುವಳಿಗೆ ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳಲ್ಲಿ ಪ್ರಮುಖರು ಎಸ್.ಆರ್. ರಂಗನಾಥನ್ ರವರು. (S. R. Ranganathan.). ಇವರನ್ನೂ “ಭಾರತದ ಗ್ರಂಥಾಲಯ ಶಾಸ್ತ್ರದ ಪಿತಾಮಹ” ಎಂದು ಕರೆಯಲಾಗುತ್ತದೆ ಎಂದರು.
ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಕಾರ್ಯದರ್ಶಿರವರಾದ ಎಲ್. ರವಿ ರವರು ಮೈಸೂರಿನ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಸಂಸ್ಥೇಯ ಆವರಣದಲ್ಲಿ ಸುಸಜ್ಜೀತ ಈಜುಕೊಳ, ಪುಟಬಾಲ್, ಚೆಸ್,
ಅಥ್ಲೇಟಿಕ್ಸ್ ಟ್ರಾಕ್, ಈಗ ಬ್ಯಾಸ್ಕೇಟ್ ಬಾಲ್ ಕೋರ್ಟ್ ನಿರ್ಮಿಸುವುದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೀರುವುದಕ್ಕೇ ಅಭಿನಂದಿಸಿದರು. ಇದರ ಸಂಪೂರ್ಣ ಪ್ರಯೋಜನಾವನ್ನೂ ಮೈಸೂರು ಜಿಲ್ಲೆಯ ಮಕ್ಕಳು ಪಡೆದುಕೊಳ್ಳಬೇಕೆಂದು ಡಾ.ಈ.ಸಿ.ನಿಂಗರಾಜ್ ಗೌಡರವರು ಮಾತನಾಡುತ್ತಾ ತಿಳಿಸಿದರು.

ಮೈಸೂರು ಮಹಾನಗರಪಾಲಿಕೆಯ ಉಪ ಆಯುಕ್ತರಾದ ಜಿ.ಎಸ್.ಸೋಮಶೇಖರ್ ರವರು ಮಾತನಾಡಿ ಬ್ಯಾಸ್ಕೆಟ್ ಬಾಲ್ ಆಟವು ದೇಹದ ಆರೋಗ್ಯಕ್ಕೂ ಹಾಗೂ ಮನಸ್ಸಿನ ಬೆಳವಣಿಗೆಗೂ ಬಹಳ ಉಪಯುಕ್ತವಾಗಿದೆ. ದೇಹವನ್ನು ಚುರುಕಾಗಿ ಮತ್ತು ಬಲಿಷ್ಠವಾಗಿರಿಸುತ್ತದೆ. ಓಡುವುದು, ಜಿಗಿಯುವುದು ಇತ್ಯಾದಿಯಿಂದ ಹೃದಯ ಮತ್ತು ಸ್ನಾಯುಗಳು ಬಲವಾಗುತ್ತವೆ. ದೇಹದ ತೂಕ ನಿಯಂತ್ರಣದಲ್ಲಿರುತ್ತದೆ. ಆಟದ ವೇಳೆ ವೇಗವಾಗಿ ಓಡಬೇಕಾಗಿರುವುದರಿಂದ ಚುರುಕುತನ ಹೆಚ್ಚುತ್ತದೆ. ದೇಹದ ಸಮತೋಲನ ಮತ್ತು ಕಣ್ಣು-ಕೈ ಸಮನ್ವಯತೆ ಉತ್ತಮವಾಗುತ್ತದೆ.
ಬ್ಯಾಸ್ಕೆಟ್ ಬಾಲ್ ಒಂದು ತಂಡ ಆಟವಾಗಿರುವುದರಿಂದ ಆಟಗಾರರು ಒಟ್ಟಾಗಿ ಕೆಲಸ ಮಾಡುವ ಗುಣವನ್ನು ಕಲಿಯುತ್ತಾರೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ನಾಯಕತ್ವ ಹಾಗೂ ಜವಾಬ್ದಾರಿ ಭಾವನೆ ಹೆಚ್ಚಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಬ್ಯಾಸ್ಕೆಟ್ ಬಾಲ್ ಆಟವು ಆರೋಗ್ಯ, ಸ್ನೇಹಭಾವ ಮತ್ತು ವ್ಯಕ್ತಿತ್ವ ಅಭಿವೃದ್ಧಿಗೆ ಬಹಳ ಸಹಾಯಕವಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಜಿ.ಎಸ್. ಸೋಮಶೇಖರ್ ರವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೇಯ ನಿರ್ದೇಶಕರಾದ ಡಾ.ಸುಮಲಿನಿ ಬಿ. ಸ್ವಾಮಿ, ಪ್ರಾಂಶುಪಾಲರಾದ ಡಾ.ದೀಪ್ತಿ ಚತುರ್ವೇದಿ, ಎಂ.ಮೋಹನ್, ಚಂದ್ರಣ್ಣ, ಹರೀಶ್ ಮೋಗಣ್ಣ, ಕೆ.ಎನ್. ಸಂತೋಷ್, ಅಧ್ಯಾಪಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.





