
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಏ. 10:- ಎಲ್ಲರನ್ನು ಒಂದುಗೂಡಿಸಿಕೊಂಡು ಮಾಡುವ ಹಬ್ಬ ಸಾಮರಸ್ಯದಿಂದ ಒಂದುಗೂಡಿ ಬಾಳುವ ವ್ಯವಸ್ಥೆ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಿರುವ ನಿಮ್ಮ ಗ್ರಾಮ ಮತ್ತು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಬಿಚನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಆ ಗ್ರಾಮದ ಸಂಬಂಧಿಕರೆಲ್ಲರೂ ಒಟ್ಟುಗೂಡಿ ನೂರಾರು ಮೇಕೆ ಕುರಿಗಳನ್ನು ಹರಕೆ ಒಪ್ಪಿಸುವ ಮೂಲಕ ಬರುವ ಭಕ್ತಾದಿಗಳಿಗೆ ಬಾಡೂಟವನ್ನು ಮಾಡಿಸಿದ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಸಾ ರಾ ಮಹೇಶ್ ಗ್ರಾಮಸ್ಥರ ಒಗ್ಗಟ್ಟು ಮತ್ತು ವ್ಯವಸ್ಥೆಯನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದರು.

ಯಾವುದೇ ಮುಖಂಡರು ಮತ್ತು ರಾಜಕಾರಣಿಗಳಿಂದ ಸಹಾಯ ಹಸ್ತ ಚಾಚದೆ ತಾವೇ ಎಲ್ಲರೂ ಒಗ್ಗಟ್ಟಾಗಿ ಸೇರಿ ಹಣ ಅಕ್ಕಿ ಕುರಿ ಸೇರಿದಂತೆ ಎಲ್ಲಾ ಪದಾರ್ಥಗಳನ್ನು ತಾವೇ ಹಾಕಿಕೊಂಡು ಮಾಡುವ ಹಬ್ಬ ಮತ್ತು ಹರಿದಿನಗಳು ಇತ್ತೀಚೆಗೆ ಮಾಯವಾಗುತ್ತಿದೆ ಆದರೆ ಬೀಚನಹಳ್ಳಿ ಕೊಪ್ಪಲು ಗ್ರಾಮಸ್ಥರು ತಮ್ಮ ಗ್ರಾಮ ಮತ್ತು ಸಂಬಂಧಿಕರು ಸೇರಿದಂತೆ ಗ್ರಾಮ ದೇವತೆಯ ಭಕ್ತಾದಿಗಳು ತಮ್ಮದೇ ವೈಯಕ್ತಿಕ ಖರ್ಚಿನಿಂದ ಮಾಡಿರುವ ಇಂತಹ ಕಾರ್ಯಕ್ರಮಗಳು ಈ ಕ್ಷೇತ್ರದ ಇತರೆ ಗ್ರಾಮಗಳು ನಿಮ್ಮನ್ನು ನೋಡಿ ಕಲಿಯಬೇಕಿದೆ ಎಂದು ಹೊಗಳಿಕೆಯ ಮಾತುಗಳನ್ನಾಡಿದರು.
ಒಂದು ಮನೆ ಮತ್ತು ಕುಟುಂಬದಲ್ಲಿ ಒಂದು ಕಾರ್ಯಕ್ರಮವನ್ನು ಮಾಡಿದರೆ ಅದರಲ್ಲಿ ಹತ್ತಾರು ಸಮಸ್ಯೆಗಳು ಕಂಡುಬರುತ್ತವೆ ಆದರೆ ಸಾವಿರಾರು ಜನ ಸೇರಿ ಮಾಡುತ್ತಿರುವ ಈ ಹಬ್ಬದ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮತ್ತು ವೈ ಮನಸು ಇಲ್ಲದಿರುವುದು ಬಹಳ ಸಂತೋಷಕರವಾದ ಸಂಗತಿ ಇನ್ನು ಮುಂದೆಯೂ ಸಹ ತಾವೆಲ್ಲರೂ ಒಗ್ಗಟ್ಟಾಗಿ ತಮ್ಮ ಸಂಬಂಧಿಕರು ಮತ್ತು ಅಕ್ಕಪಕ್ಕದ ಗ್ರಾಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂತೋಷ ಕೂಟದಲ್ಲಿ ಭಾಗವಹಿಸಿ ಆ ದೇವರು ನಿಮಗೆ ಸಕಲ ಐಶ್ವರ್ಯವನ್ನು ನೀಡಲಿ ಎಂದು ಹಾರೈಸಿದರು.
ಗ್ರಾಮದ ಯುವ ಮುಖಂಡ ಮಹಾದೇವ ಮಾತನಾಡಿ ನಮ್ಮ ಈ ಕಾರ್ಯಕ್ರಮಕ್ಕೆ ಆಗಮಿಸಿ ನಮಗೆ ಧೈರ್ಯ ಮತ್ತು ಸಹಕಾರವನ್ನು ನೀಡಿದ ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ಅಭಿನಂದಿಸುತ್ತೇವೆ ಹಾಗೂ ನಮಗೆ ಏನಾದರೂ ಸಹಕಾರ ಸಹಾಯ ಬೇಕಾ ಎಂದು ಕೇಳಿದ ನಿಮ್ಮ ಈ ಗುಣ ಇತರ ರಾಜಕಾರಣಿಗಳಿಗೆ ಅನುಕರಣೆಯಾಗಲಿ ಅವರು ಸಹ ನಿಮ್ಮಂತೆ ಸಹಾಯ ಮಾಡುವ ಗುಣವನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಗ್ರಾಮ ಸೇರಿದಂತೆ ಈ ಗ್ರಾಮ ದೇವತೆಗೆ ಸೇರಿದ ಅಕ್ಕಪಕ್ಕದ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಸುಮಾರು ವರ್ಷಗಳಿಂದ ಮಾಡದೆ ಇದ್ದ ಈ ಹಬ್ಬವನ್ನು ನಾವುಗಳೆಲ್ಲರೂ ಒಟ್ಟು ಸೇರಿ ಯಾವುದೇ ಪಕ್ಷ ಮತ್ತು ಜಾತಿ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಒಂದು ತಿಂಗಳಿನಿಂದ ನಮ್ಮ ಯುವಕರು ಮತ್ತು ಹಿರಿಯರು ಹಾಕಿದ ಶ್ರಮ ಇಂದು ಯಶಸ್ವಿಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರುಗಳಾದ ಮಂಜುನಾಥ್ ಕೃಷ್ಣೇಗೌಡ ಕಾಳೇಗೌಡ ಮಹಾದೇವ್ ಚಂದ್ರೇಗೌಡ ಸುಹಾಸ್ ಮಿರ್ಲೆ ವಿಎಸ್ಎಸ್ ನ ಮಾಜಿ ಅಧ್ಯಕ್ಷ ಭಾಸ್ಕರ ಮಿರ್ಲೇ ಜಲ ಸಿರಿ ಸಹಕಾರ ಸಂಘದ ಅಧ್ಯಕ್ಷ ಕೃಷ್ಣೇಗೌಡ ನವೀನ ಸೇರಿದಂತೆ ಇನ್ನಿತರರು ಹಾಜರಿದ್ದರು.





