HOMENews

” ಸೇವಾ ಕಾರ್ಯದ ಮೂಲಕ  ದೇಶದ ಅಗ್ರಗಣ್ಯ ನಾಯಕ ಡಾ. ಬಾಬು ಜಗಜೀವನ್ ರಾಂ  ಜಯಂತಿ  ಆಚರಣೆ ” 

ಮೈಸೂರು :- ನಗರದ ಸರಸ್ವತಿಪುರಂನಲ್ಲಿರುವ  ಮಹಾಬೋಧಿ ಕರ್ಲಾ ವಿದ್ಯಾರ್ಥಿ  ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಡ್ರೈ ಫ್ರೂಟ್ಸ್,ಹಣ್ಣು ಹಂಪಲ, ಲೇಖನಿಯನ್ನು ವಿತರಿಸುವ ಸೇವಾ ಕಾರ್ಯದೊಂದಿಗೆ ದೇಶದ ಅಗ್ರಗಣ್ಯ ನಾಯಕ,ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಂ ರವರ ಜಯಂತಿಯನ್ನು ಸ್ನೇಹ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪ್ರಕಾಶ್ ಪ್ರಿಯಾದರ್ಶನ್  ಶೋಷಿತರ ಧ್ವನಿಯಾಗಿ ಭಾರತದ ಹಸಿರು ಕ್ರಾಂತಿ ರೂವಾರಿಯಾಗಿ ದೇಶವನ್ನು ಮುನ್ನಡೆಸಿದ ಧೀಮಂತ ರಾಷ್ಟ್ರೀಯ ನಾಯಕ ಡಾ. ಬಾಬು ಜಗಜೀವನ್ ರಾಂ ರವರ ಜನ್ಮ ದಿನದಂದು ಅವರನ್ನು ಸ್ಮರಿಸುವುದು ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

” ಸಮಾಜದಿಂದ ನಾವು ಬದಲಾಗುವುದಿಲ್ಲ, ನಮ್ಮಿಂದ ಸಮಾಜ ಬದಲಾಗಬೇಕು ಎಂಬ ಸಿದ್ಧಾಂತದೊಂದಿಗೆ ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು – ಕೀಳು  ತಾರತಮ್ಯ,ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವನೆಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಮಹಾನ್ ದಲಿತ ನಾಯಕ ಬಾಬು ಜಗಜೀವನ್ ರಾಮ್ ಎಂದು ತಿಳಿಸಿ. ಪಠ್ಯದ ಜೊತೆಯಲ್ಲಿ  ಈ ರೀತಿಯ ದೇಶದ ಮಹಾನ್ ನಾಯಕರಗಳು, ಮಹಾಪುರುಷರುಗಳ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರಲ್ಲಿ ನಾವು ಒಬ್ಬರಾಗಬೇಕು ಎಂಬ ದೃಷ್ಟಿಕೋನದೊಂದಿಗೆ ಬೆಳೆದು ತಂದೆ ತಾಯಿ ಹಾಗೂ  ದೇಶಕ್ಕೆ ಕೀರ್ತಿ ತರುವಂತಹ ಪ್ರಜೆಗಳಾಗಿ ಎಂದು  ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ  ಜೆ.ಡಿ.ಎಸ್. ಮುಖಂಡ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಬ್ಲಡ್ ಆನ್ ಕಾಲ್ ಕ್ಲಬ್, ಮೈಸೂರು ಸಂಸ್ಥಾಪಕ ದೇವೇಂದ್ರ ಪರಿಹಾರಿಯಾ,  ಸಿಂಚನಗೌಡ (ಮಂಗಳಮುಖಿ), ಸಮಾಜ ಸೇವಕಿ ವಿದ್ಯಾ, ಛಾಯ , ಗಾಯಕ ಯಶವಂತ್ ಕುಮಾರ್,ಹಿರಿಯ ಕ್ರೀಡಾಪಟು ಮಹದೇವ್, ಸುಬ್ರಮಣಿ,ರಾಜೇಶ್ ಕುಮಾರ್,ಮಹೇಶ,  ದತ್ತ,  ಇನ್ನಿತರರು ಇದ್ದರು.

Leave a Reply