
ಎಚ್ ಡಿ ಕೋಟೆ:- ತಾಲೂಕಿನ ಮೊತ್ತ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನೆರವೇರಿತು. ಪ್ರತಿವರ್ಷದಂತೆ ಈ ವರ್ಷವೂ ಸಹ ಗ್ರಾಮಸ್ಥರೆಲ್ಲ ಸೇರಿ ಭಕ್ತಿಪೂರ್ವಕವಾಗಿ ಸ್ವಾಮಿಯ ಉತ್ಸವದಲ್ಲಿ ಪಾಲ್ಗೊಂಡಿದ್ದರು, ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನೆರವೇರಿದವು, ಶನೇಶ್ವರ ವಿಗ್ರಹಕ್ಕೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿದ್ದು, ದೇವಾಲಯದ ಒಳಗೂ ಹೊರಗೂ ಹೂಗಳಿಂದ ಸಿಂಗರಿಸಲಾಗಿದ್ದು, ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು,

ಮುಂಜಾನೆಯಿಂದಲೂ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಶನೇಶ್ವರ ದರ್ಶನ ಪಡೆದು ಪುನೀತರಾದರು, ಪ್ರತಿವರ್ಷದಂತೇ ಈ ವರ್ಷವೂ ಸಹ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು,
ಊರ ಹೊರ ಭಾಗದಿಂದ ದೇವರನ್ನು ತರಲಾಯಿತು ಈ ವೇಳೆ ಪುಟ್ಟ ಪುಟ್ಟ ಹೆಣ್ಣುಮಕ್ಕಳು ದೀಪದಾರತಿ ತಂದದ್ದು ಅತ್ಯಾಕರ್ಷಕವಾಗಿದ್ದು, ಬಸವನ ಮೆರವಣಿಗೆ, ವೀರಗಾಸೆ ಕುಣಿತ, ಮಹಿಳಾ ವೀರಗಾಸೆ ಕುಣಿತ, ಸೇರಿ ಹಲವು ಕಲಾತಂಡಗಳ ಪ್ರದರ್ಶನ ಏರ್ಪಡಿಸಲಾಗಿತ್ತು, ರಾತ್ರಿ ಹನ್ನೊಂದು ಗಂಟೆಗೆ ಶುರುವಾದ ಸ್ವಾಮಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಂಜಾನೆವರೆಗೂ ನೆರವೇರಿತು, ಬೆಳ್ಳಿ ರಥದಲ್ಲಿ ಶ್ರೀ ಶನೇಶ್ವರ ಸ್ವಾಮಿಯು ವಿರಾಜಮಾನವಾಗಿ ಕಂಗೊಳಿಸಿದರು, ಪೂಜೆಯಲ್ಲಿ ಪಾಲ್ಗೊಂಡ ಭಕ್ತರು ಸ್ವಾಮಿಯನ್ನು ಕಣ್ತುಂಬಿಗೊಂಡು ಭಕ್ತಿಪರವಶರಾದರು






