
ಇತಿಹಾಸ ಪ್ರಸಿದ್ಧ ಹುಣಸಮ್ಮ ದೇವಿ ಸಿಡಿ ಮತ್ತು ರಥೋತ್ಸವಕ್ಕೆ ಭಕ್ತರ ಮಹಾಜಾತ್ರೆ
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಫೆ. 28:- ಇತಿಹಾಸ ಪ್ರಸಿದ್ಧ ಹು ಣಸಮ್ಮ ದೇವಿಯ ಸಿಡಿ ಮತ್ತು ರಥೋತ್ಸವ ದೇವಾಲಯದ ಪ್ರಧಾನ ಅರ್ಚಕ ಕುಮಾರಸ್ವಾಮಿ ದೇವಾಲಯದ ಧರ್ಮದರ್ಶಿ ಲೋಕೇಶ್ ಒಂಬತ್ತು ಗ್ರಾಮಗಳ ಯಜಮಾನರ ನೇತೃತ್ವದಲ್ಲಿ ಅತ್ಯಂತ ಅದ್ದೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಇಂದು ನಡೆಯಿತು.
ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಸಮೀಪವಿರುವ ಹುಣಸಮ್ಮ ತಾಯಿಯ ಸಿಡಿ ಮತ್ತು ರಥೋತ್ಸವವು ಮಿರ್ಲೆ ನಾಟನಹಳ್ಳಿ
ಶಾಬಾಳ್ ಹಳೆಮಿರ್ಲೆ ಕೊಡಿಯಾಲಾ ನರಚನಹಳ್ಳಿ ಹನುಮನಹಳ್ಳಿ ಬೀಚನಹಳ್ಳಿ ಮಾಳನಾಯಕನಹಳ್ಳಿ ಗ್ರಾಮಗಳಿಂದ ಬರುವ ಸಿಡಿ ಮತ್ತು ರಥಗಳು ಆ ಗ್ರಾಮಗಳ ಯಜಮಾನರು ಮತ್ತು ಭಕ್ತರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ದೇವಾಲಯದ ಸುತ್ತಮುತ್ತ ಬರುವ ಭಕ್ತರಿಗೆ ಪಾನಕ ಮಜ್ಜಿಗೆ ಅನ್ನ ಸಂತರ್ಪಣೆ ನೀರು ನೀಡುವ ಮೂಲಕ ಬರುವ ಭಕ್ತರು ಮತ್ತು ಜನಸಾಮಾನ್ಯರಿಗೆ ಬೇಸಿಗೆಯ ದಣಿವನ್ನು ಆರಿಸಲು ಮಿರ್ಲೆ ಮತ್ತು ಸುತ್ತಮುತ್ತಲಿನ ಗ್ರಾಮದ ಯುವ ಸಂಘಟನೆಗಳು ಸಹಕಾರ ನೀಡಿದರು ಹಾಗೂ ಜನಮೆಚ್ಚಿಗೆ ಪಾತ್ರರಾಗಿ ಪ್ರತಿಯೊಂದು ಜಾತ್ರೆ ಮತ್ತು ರಥೋತ್ಸವಗಳಲ್ಲಿ ಇಂಥ ವ್ಯವಸ್ಥೆಯನ್ನು ಮಾಡಬೇಕೆಂದು ಪ್ರಸಂಸೆಯ ಮಾತುಗಳನ್ನಾಡುತ್ತಿದ್ದರು.
ರಾಜಕೀಯ ಹಸ್ತಕ್ಷೇಪವಿಲ್ಲದ ಪ್ರವಿತ್ರ ಹುಣಸಮ್ಮ ಜಾತ್ರೆ:- ಈ ದೇವಾಲಯದ ರಥ ಮತ್ತು ಸಿಡಿ ಜಾತ್ರೆಗೆ ಯಾವುದೇ ರಾಜಕಾರಣಿ ಅಥವಾ ಸಂಘ ಸಂಸ್ಥೆಗಳು ರಥೋತ್ಸವಕ್ಕೆ ಮತ್ತು ದೇವಾಲಯದ ಪೂಜೆಗೆ ಚಾಲನೆ ನೀಡಲು ಅವಕಾಶವಿಲ್ಲ ದೇವಾಲಯದ ಪ್ರಧಾನ ಅರ್ಚಕ ಕುಮಾರಸ್ವಾಮಿ ದೇವಸ್ಥಾನದ ಧರ್ಮದರ್ಶಿ ಲೋಕೇಶ್ ಮತ್ತು ಒಂಬತ್ತು ಗ್ರಾಮಗಳ ಯಜಮಾನರ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಶಾಸಕರು ಮಾಜಿ ಸಚಿವರು ಮಾಜಿ ಶಾಸಕರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ದೇವಾಲಯಕ್ಕೆ ಬಂದು ಪೂಜೆ ಪುರಸ್ಕಾರ ಮಾಡಿಕೊಂಡು ಎಲ್ಲಾ ಭಕ್ತರಂತೆ ಹೋಗುವುದನ್ನು ಬಿಟ್ಟರೆ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆಸದಿರುವುದು ಇಂದಿನಿಂದಲೂ ನಡೆದುಕೊಂಡು ಬಂದಿರುವ ಪರಂಪರೆಯಾಗಿದ್ದು ಅದನ್ನು ಇಂದು ಸಹ ನಡೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.
ಯಾವುದೇ ರಾಜಕೀಯ ವ್ಯಕ್ತಿಯ ಬ್ಯಾನರ್ ಪ್ಲಕ್ಸ್ ಗೆ ಅವಕಾಶವಿಲ್ಲ:- ದೇವಾಲಯದ ಸುತ್ತಮುತ್ತ ಒಂದು ಕಿಲೋಮೀಟರ್ ಒಳಗಡೆ ಯಾವುದೇ ರಾಜಕಾರಣಿ ಅಥವಾ ಇನ್ಯಾವುದೋ ಸಂಘ ಸಂಸ್ಥೆಯ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಲು ಅವಕಾಶ ನೀಡದಿರುವುದು ವಿಶೇಷವಾಗಿದೆ ಹುಣಸಮ್ಮ ತಾಯಿಯ ದೇವಿಯ ವಿಗ್ರಹವನ್ನು ಹೊಂದಿರುವ ಫ್ಲೆಕ್ಸ್ ಅನ್ನು ಹೊರತುಪಡಿಸಿ ಇನ್ಯಾವುದೇ ವ್ಯಕ್ತಿಯ ಭಾವಚಿತ್ರವಿರುವ ಫ್ಲೆಕ್ಸ್ ಗಳನ್ನು ಅಳವಡಿಸಲು ನಿರ್ಬಂಧಿಸಲಾಗಿದೆ.

ಶುಕ್ರವಾರ ರಾತ್ರಿಯೇ ಬಂದ ಐದು ಸಿಡಿಗಳು ನಾಲ್ಕು ರಥಗಳು ಹುಣ್ಸಮ್ಮ ತಾಯಿಯ ಉತ್ಸವ ಮೂರ್ತಿ:- ಮಿರ್ಲೆ ಗ್ರಾಮದ ಹುಣಸಮತಾಯಿಯ ತಾಯಿ ಸಿಡಿ ನರಚನಹಳ್ಳಿ ಸಿಡಿ ಹಳೆ ಮಿರ್ಲೆ ನಾಟನಹಳ್ಳಿ ಶಾಬಾಳ್ ಐದು ಸಿಡಿಗಳು ಕೊಡಿಯಾಲ ಹನುಮನಹಳ್ಳಿ ಬೀಚನಹಳ್ಳಿ ಮಾಳನಾಯಕನಹಳ್ಳಿಯ ನಾಲಕ್ಕು ರಥಗಳು ಸೇರಿದಂತೆ ದೇವಿಯ ಉತ್ಸವ ಮೂರ್ತಿಯು ಶುಕ್ರವಾರ ರಾತ್ರಿ ದೇವಾಲಯಕ್ಕೆ ಬಂದು ಮೂರು ಸುತ್ತು ಪ್ರದಕ್ಷಣೆ ಹಾಕಿ ಹಾಜುರಾಗುವುದು ವಿಶೇಷವಾಗಿದೆ.
ಸಿಡಿ ಮತ್ತು ರಥೋತ್ಸವ ಮುಗಿದ ನಂತರ ಮರಳಿ ತವರಿಗೆ:- ಇಂದು ಶುಭಗಳಿಗೆಯಲ್ಲಿ ದೇವಾಲಯದ ಸುತ್ತ ಉಸ್ತವ ಮೂರ್ತಿಯನ್ನು ಹೊತ್ತ ತಾಯಿ ತಾಯಿ ತೇರು ಸೇರಿದಂತೆ ಎಲ್ಲಾ ಸಿಡಿ ಮತ್ತು ರಥಗಳು ಮೂರು ಸುತ್ತು ಪ್ರದಕ್ಷಣೆ ಹಾಕಿ ತಮ್ಮ ಗ್ರಾಮಗಳಿಗೆ ಮರಳಿ ಹೋಗುವ ವೇಳೆ ದೇವಾಲಯದ ಸುತ್ತ ವಿದ್ದ ಲಕ್ಷಾಂತರ ಭಕ್ತಾದಿಗಳು ಹಣ್ಣು ಜವನ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ದೇವಿಗೆ ಅರ್ಪಣೆ ಮಾಡಿ ರಥ ಮತ್ತು ಸಿಡಿಯನ್ನು ತಮ್ಮ ತಮ್ಮ ಗ್ರಾಮಗಳಿಗೆ ಆ ಗ್ರಾಮಗಳ ಭಕ್ತರು ಎಳೆದುಕೊಂಡು ಹೋಗಲಿದ್ದಾರೆ.
ಭರ್ಜರಿ ವ್ಯಾಪಾರ:- ರಾಜ್ಯದ ಅತ್ಯಂತ ಹೆಸರುವಾಸಿ ಮತ್ತು ವಿಶೇಷ ಜಾತ್ರೆಯಲ್ಲಿ ಅತ್ಯಂತ ಉತ್ಸವದಿಂದ ಹಣ್ಣು ಕಾಯಿ ಸಿಹಿ ತಿಂಡಿಗಳು ಮಹಿಳೆಯರ ಆಭರಣಗಳು ಮಕ್ಕಳ ಆಟೋಟಗಳ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತಿದ್ದರೆ ವ್ಯಾಪಾರಸ್ಥರು ಭರ್ಜರಿ ವ್ಯಾಪಾರದಿಂದ ಖುಷಿಪಡುತ್ತಿದ್ದರು.

ಸೂಕ್ತ ಪೊಲೀಸ್ ಬಂದೋಬಸ್ ವ್ಯವಸ್ಥೆ:- ಡಿ ವೈ ಎಸ್ ಪಿ ರಾಜಣ್ಣ ಸಾಲಿಗ್ರಾಮ ಆರಕ್ಷಕ ನಿರೀಕ್ಷಕರಾದ ಶಶಿಕುಮಾರ್ ನೇತೃತ್ವದಲ್ಲಿ ಎರಡು ದಿನಗಳ ಕಾಲ ಅತ್ಯಂತ ಸೂಕ್ಷ್ಮ ಗ್ರಾಮಗಳು ಸೇರಿದಂತೆ ದೇವಾಲಯಕ್ಕೆ ಬರುವ ಮತ್ತು ಹೋಗುವ ಭಕ್ತಾದಿಗಳ ರಕ್ಷಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಸಾರ್ವಜನಿಕರು ಮತ್ತು ಭಕ್ತರ ಪ್ರಸಂಸೆಗೆ ಮತ್ತು ಮೆಚ್ಚುಗೆ ಪಡೆಯಿತು.
ಒಟ್ಟಾರೆಯಾಗಿ ಈ ಜಾತ್ರೆಗೆ ಒಂದು ವಿಶೇಷವಿದ್ದು ಎರಡು ದಿನಗಳ ಕಾಲ ನಡೆಯುವ ಒಂಬತ್ತು ಗ್ರಾಮಗಳು ಮತ್ತು ಹೊರರಾಜ್ಯ ಹೊರ ಜಿಲ್ಲೆಗಳಿಂದ ಬರುವ ಜನಸಾಗರ ಸುಮಾರು ಎರಡು ಲಕ್ಷಕ್ಕೂ ಮೀರಲಿದೆ ಎಂಬುದು ಈ ಜಾತ್ರೆಯ ಭಕ್ತರ ಅನಿಸಿಕೆಯಾಗಿದೆ.





