
ತಂಬಾಕು ದರದಲ್ಲಿ ಬಾರಿ ಕುಸಿತ, ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಹರಾಜು ಪ್ರಕ್ರಿಯೆ ನಡೆಸುವಂತೆ ರೈತರ ಆಗ್ರಹ
ವರದಿ ಪ್ರಸನ್ನ ಕುಮಾರ್
ಪಿರಿಯಾಪಟ್ಟಣ : ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುಣಮಟ್ಟದ ತಂಬಾಕಿಗೆ ಕೇವಲ 220 ರೂಗಳನ್ನು ನೀಡುತ್ತಿದ್ದಾರೆಂದು ತಂಬಾಕು ರೈತರು ಆಕ್ರೋಶ ವ್ಯಕ್ತಪಡಿಸುವುದರ ಮೂಲಕ ಉತ್ತಮ ದರ ನೀಡುವವರಿಗೂ ಹರಾಜು ಪ್ರಕ್ರಿಯೆಯನ್ನು ನಡೆಸಬಾರದೆಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಹರಾಜು ಪ್ರಕ್ರಿಯೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಖರೀದಿದಾರರು ಪ್ರತಿ ಕೆಜಿ ಗುಣಮಟ್ಟದ ತಂಬಾಕುಗೆ ಕೇವಲ 220 ರಿಂದ 240 ರೂಗಳಿಗೆ ಕೊಂಡುಕೊಳ್ಳಲು ಮುಂದಾದರು.ಇದರಿಂದ ಕೋಪಗೊಂಡ ರೈತರು ಕಗ್ಗುಂಡಿ ಹರಾಜು ಮಾರುಕಟ್ಟೆಯ 3 ಕೇಂದ್ರಗಳನ್ನು ಏಕಕಾಲದಲ್ಲಿ ನಿಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ , ತಂಬಾಕು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಹರಾಜು ಪ್ರಕ್ರಿಯೆ ನಡೆಸದಂತೆ ಸ್ಥಗಿತಗೊಳಿಸಿದರು.

ಈ ವೇಳೆ ಪ್ಲಾಟ್ ಫಾಂ ನಂ. 5 ರಲ್ಲಿ ಕೆಲ್ಲೂರು ಮತ್ತು ಹಂಡಡಿತವಳ್ಳಿ ಕ್ಲಸ್ಟರ್ ತಂಬಾಕು ಬೆಳೆಗಾರರು ತಂಬಾಕಿಗೆ ಉತ್ತಮ ಬೆಲೆ ಕೊಡಿ ಇಲ್ಲವೇ ಬ್ಯಾನ್ ಮಾಡಿ, ನಮಗೆ ಪ್ರತಿ ಸಿಂಗಲ್ ಬ್ಯಾರನ್ ಗೆ 20 ಲಕ್ಷ ಪರಿಹಾರವನ್ನು ನೀಡಿ , ನಾವೇ ಹೊಗೆಸೊಪ್ಪು ಬೆಳೆಯನ್ನು ನೀಲಿಸುತ್ತೇವೆ ಎಂದು ಅಧಿಕಾರಿಗಳ ಮುಂದೆ ತಂಬಾಕು ಬೆಳೆಯಲ್ಲೂ ಪಡುತ್ತಿರುವ ಸಂಕಷ್ಟದ ಭಾವಣೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿರುವ ಸನ್ನಿವೇಶ ಕಣ್ಣಿಗೆ ಕುಕ್ಕುತ್ತಿತು.

ಹರಾಜು ಪ್ರಕ್ರಿಯೆ ಆರಂಭದ ದಿನಗಳಲ್ಲಿ ಇದ್ದ ಬೆಲೆ ಈಗ ಇಲ್ಲ, ತಂಬಾಕು ಖರಿದಿ ಮಾಡುವ ಕಂಪನಿಗಳು ತಮ್ಮ ಮೇಲೆ ಜಿಎಸ್ಟಿ ಹೊರೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಯಾವುದೇ ಮುನ್ಸೂಚನೆ ನೀಡದೆ ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಮಂಡಳಿಗೆ ರಜೆ ಘೋಸಿಸಿದರು ಆದರೆ ಈಗ ಕಳೆದ 15 ದಿನಗಳಿಂದ ಸರಾಸರಿ ರೂ. 288 ಇದ್ದ ಮಾರುಕಟ್ಟೆ ಬೆಲೆ ಈಗ ಇಲ್ಲ ಈಗ ಅದು ರೂ.220 ಕ್ಕೆ ಕುಸಿತಗೊಂಡಿದೆ ಹಾಗಾಗಿ ಉತ್ತಮ ದರ್ಜೆಯ ತಂಬಾಕಿಗೆ ಪ್ರತಿ ಕೆ.ಜಿ.ಗೆ ರೂ. 300 ಮೇಲ್ಪಟ್ಟು ಬೆಲೆ ನೀಡಿ. ಇಲ್ಲವೇ ತಂಬಾಕು ಬೆಳೆಯನ್ನೇ ನಿಷೇಧ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಹರಾಜು ಮಾರುಕಟ್ಟೆಗೆ ಬೀಗ ಜಡಿದು ತಮ್ಮ ಅಳಲನ್ನು ತೋಡಿಕೊಂಡರು.
ನೆರೆಯ ರಾಜ್ಯದ ಮಾದರಿಯಲ್ಲಿ ರಾಜ್ಯ ಸರ್ಕಾರ ಕೊಂಡುಕೊಳ್ಳಲ್ಲಿ : ಕೊವಿಡ್ ಸಂದರ್ಭದಲ್ಲಿ ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಹರಾಜು ಮಾರುಕಟ್ಟೆಗೆ ಮಧ್ಯಪ್ರವೇಶಿಸಿ ಸರಕಾರವೇ ನೇರವಾಗಿ ತಂಬಾಕುನ್ನು ಖರೀದಿಸಿತ್ತು.ಇದರಿಂದ ಬೆಲೆ ಹೆಚ್ಚಳವಾಗಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹಾಯವಾಯಿತು. ಇದೇ ಮಾದರಿಯನ್ನು ನಮ್ಮ ಸರಕಾರ ಅನುಸರಿಸಲ್ಲಿ ಎಂದು ಕೆಲವು ರೈತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು

ಮಾಜಿ ಶಾಸಕ ಕೆ. ಮಹದೇವ್ ಭೇಟಿ ತಂಬಾಕು ಬೆಳೆಗಾರರ ಪ್ರತಿಭಟನೆ ವಿಷಯ ತಿಳಿದು ಮಾಜಿ ಶಾಸಕ ಕೆ. ಮಹದೇವ್ ಸ್ಥಳಕ್ಕೆ ಭೇಟಿ ಮಾತನಾಡುತ್ತಾ ತಂಬಾಕು ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸ್ಪಂದಿಸಬೇಕು. ಕೆಲ ದಿನಗಳ ಹಿಂದೆ 5 ತಾಲ್ಲೂಕಿನ ರೈತರನ್ನು ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಳಿ ಕರೆದುಕೊಂಡು ಹೋಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡೀಕೊಟ್ಟ ನಂತರ ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಸಚಿವ ಕೆ. ವೆಂಕಟೇಶ್, ಸಂಸದ ಯದುವೀರ್ ಚಾಮರಾಜ ಒಡೆಯರ್ ಸೇರಿದಂತೆ ಮತ್ತಿತರ ಹಾಗೂ ತಂಬಾಕು ಖರೀದಿ ಕಂಪನಿಗಳು ಮಂಡಳಿಯ ಸಮ್ಮುಖದಲ್ಲಿ ರೈತರು ಬೆಳೆದಿರುವ ತಂಬಾಕಿಗೆ ಉತ್ತಮ ಬೆಲೆಕೊಟ್ಟು ಪೂರ್ಣ ಪ್ರಮಾಣದ ತಂಬಾಕು ಖರೀದಿ ಮಾಡುವಂತೆ ಸೂಚಿಸಲಾಗಿದೆ. ಹೀಗಿದ್ದರೂ ಖರೀದಿದಾರ ಕಂಪನಿಗಳು ಉದ್ದೇಶ ಪೂರ್ವಕವಾಗಿ ಕಡಿಮೆ ದರಕ್ಕೆ ಹರಾಜು ಕೂಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಹಾಗಾಗಿ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಜಿ ಎಸ್ ಟಿ ರದ್ದುಗೊಳಿಸಿ, ತಂಬಾಕು ರೈತರನ್ನು ರಕ್ಷಿಸಿ : ತಂಬಾಕು ಬೆಳೆಯ ಕಚ್ಚಾ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಳವಾಗಿತ್ತಿವೆ.ಜೊತೆಗೆ ಈ ವರ್ಷ ಗೊಬ್ಬರ ಮುಂಗಡವನ್ನು ಬ್ಯಾರನ್ ಗೆ 5000 ದಿಂದ 7000 ಕ್ಕೇ ಹೆಚ್ಚಳ ಮಾಡಲಾಗಿದೆ.ಇದರ ಮಧ್ಯ ಕೇಂದ್ರ ಸರಕಾರ ಸಿಗರೇಟ್ ಮೇಲಿನ ಜಿ ಎಸ್ ಟಿ ಯನ್ನು ಹೆಚ್ಚಿಸಿದೆ. ಇದನ್ನು ನೆಪವಾಗಿಟ್ಟುಕೊಂಡು ಖರೀದಿ ಕಂಪನಿಗಳು ನಮ್ಮ ಮೇಲೆ ಗದ ಪ್ರವಾಹ ಮಾಡಲು ಹೋರಟಿದಿರುವುದರಿಂದ ಕೇಂದ್ರ ಸರಕಾರ ಸಾಧ್ಯವಾದಷ್ಟು ಸುಂಕವನ್ನು ಕಡಿಮೆ ಮಾಡುವ ಮೂಲಕ ತಂಬಾಕು ರೈತರನ್ನು ರಕ್ಷಿಸಿ ಕೆಲಸ ಮಾಡಲಿ ಎಂದರು
ಈ ಸಂದರ್ಭದಲ್ಲಿ ತಂಬಾಕು ಹರಾಜು ಅಧೀಕ್ಷಕರಾದ ಬ್ರಿಜು ಭೂಷಣ್, ಕಿರಣ್ ಕುಮಾರ್, ಧನರಾಜ್, ರೈತ ಹೋರಾಟಗಾರ ಶ್ರೀನಿವಾಸ್ ಆರ್. ತುಂಗಾ, ಗ್ರಾಮ ಪಂ ಮಾಜಿ ಸದಸ್ಯ ಜವರೇಶ್, ಕೆಲ್ಲೂರು ಡೇರಿ ಅಧ್ಯಕ್ಷ ಕೆ. ಕೆ. ಮಂಜುನಾಥ್, ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಮಣಿಯಣ್ಣ, ರೈತ ಮುಖಂಡರಾದ ಕೆ. ಸಿ. ಮಂಜುನಾಥ್, ಕನಕರಾಜ್, ಕೆ. ಸಿ. ಜಮರಾಮ್, ಕೆ. ಎಂ. ಶ್ರೀನಿವಾಸ್, ರಾಧಕೃಷ್ಣ, ಕೆ. ಎನ್. ರಾಜು, ಕೆ. ಆರ್. ಮಹೇಶ್, ಕೆ. ಸಿ. ರಮೇಶ್, ಬಿ. ಶಿವಣ್ಣ, ಕೆ. ಶಿವಣ್ಣ, ಅ. ರವಿಗೌಡ, ಕೆ. ಆರ್. ಸತೀಶ್, ಲಕ್ಕೇಗೌಡ, ಯಜಮಾನ್ ನಾಗರಾಜ್, ರೇವಣ್ಣ, ಸುಂದರ್, ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು





