
ಮಂಡ್ಯ:- ತಾಯಿ ಮತ್ತು ಮಗಳು. ಇಬ್ಬರ ಆ*ಹ* ಗೆ ಇಡಿ ಊರಿಗೆ ಊರನ್ನೆ ಬೆಚ್ಚಿ ಬೀಳಿಸಿದೆ. ಇದಕ್ಕೆ ಕಾರಣ ಹುಡುಕಿ ಹೊರಟಾಗ ವಿಷಯ ತಿಳಿದು ಸ್ಥಳೀಯರು ಹೌಹಾರಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಷ್ಟಕ್ಕೂ ಇವರಿಬ್ಬರ ಸಾ*ಗೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.
ಯುವತಿಗೆ 19 ವರ್ಷ ಹಾಗೂ ಎರಡು ಮಕ್ಕಳ ತಂದೆಯ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆ*ಹ* ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ(46) ಮತ್ತು ಪ್ರಿಯಾಂಕಾ(19) ಮೃತರು. ಪ್ರಿಯಾಂಕಾಳ ಮದುವೆಗೆ ಕುಟುಂಬಸ್ಥರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಮದುವೇ ಆಗಿರುವ ಪರ ಪುರುಷನ ಜೊತೆಗಿನ ಒಡನಾಟ ಆಕೆಯ ಪ್ರೇಮವೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಹೌದು, ಕೋಡಿಹಳ್ಳಿ ಗ್ರಾಮದನೇ ಆದ 34 ವರ್ಷದ ಮುತ್ತುರಾಜ್ ಎಂಬವನ ಜೊತೆ ಪ್ರಿಯಾಂಕಾಗೆ ಲವ್ ಆಗಿತ್ತು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಕೂಡ ಮುತ್ತುರಾಜ್ ಪ್ರಿಯಾಂಕಾಳ ಹಿಂದೆ ಬಿದ್ದಿದ್ದಎನ್ನಲಾಗಿದೆ . ಮುತ್ತುರಾಜ್ ಪ್ರತಿದಿನವೂ ಪ್ರಿಯಾಂಕಾ ಮನೆಗೆ ಬರುತ್ತಿದ್ದ. ಇವರ ಪ್ರೀತಿಯ ವಿಷಯ ತಿಳಿಯದ ಮನೆಯವರು ಇದು ಸಾಮಾನ್ಯ ಎಂದುಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಪ್ರೀತಿ ಮಾಡ್ತಿರುವ ವಿಚಾರ ಪ್ರಿಯಾಂಕಾ ಪೋಷಕರಿಗೆ ತಿಳಿದಿತ್ತು. ಈ ವಿಚಾರ ತಿಳಿದ ಬಳಿಕ ಇಬ್ಬರಿಗೂ ಗ್ರಾಮಸ್ಥರು ಬೈದು ಬುದ್ಧಿ ಹೇಳಿದ್ದರು. ಬುದ್ದಿ ಹೇಳಿದ್ದರು ಸಹ ಈ ವಿವಾಹಿತ ಮುತ್ತುರಾಜ್ ಪ್ರಿಯಾಂಕಾಳನ್ನು ಪ್ರತಿನಿತ್ಯ ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದರಿಂದ ಬೆಸತ್ತು ಮರ್ಯಾದೆಗೆ ಅಂಜಿ ತಾಯಿ,ಹಾಗೂ ಪುತ್ರಿ ಆ*ಹ* ಮಾಡಿಕೊಂಡಿರುವ ಘಟನೆ ನಡೆದಿದೆ..
ಪ್ರಿಯಾಂಕಗೆ ಹತ್ತಿರದ ಸಂಬಂಧದಲ್ಲೇ ಮದುವೆಗೆ ತಯಾರಿ ನಡೆದಿತ್ತು
ಪ್ರಿಯಾಂಕಾ ಮತ್ತು ಮುತ್ತುರಾಜ್ ಪ್ರೇಮದ ವಿಷಯ ಮೊದಲು ಶಕುಂತಲಾದೇವಿ ಅವರಿಗೆ ತಿಳಿದಿತ್ತು. ನಂತರ ಅವರು ಈ ಬಗ್ಗೆ ತಮ್ಮ ಪತಿಗೆ ಶಕುಂತಲಾದೇವಿ ವಿಷಯ ತಿಳಿಸಿದ್ದರು ಎನ್ನಲಾಗಿದೆ. ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಸಂಬಂಧದಲ್ಲೇ ಹುಡುಗನನ್ನು ಹುಡುಕಿ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಈ ವಿಷಯ ತಿಳಿದು ಸಿಡಿಲು ಬಡಿದಂತಾಗಿದೆ. ತಮ್ಮ ಮಗಳು ತನ್ನ ಪ್ರೀತಿಯ ವಿಚಾರದ ಬಗ್ಗೆ ಮೊದಲು ನಮಗೆ ಯಾವುದೇ ವಿಷಯ ತಿಳಿಸಿರಲಿಲ್ಲ. ಈ ವಿಷಯ ಗೊತ್ತಾಗುತ್ತಿದ್ದಂತೆ ಇಷ್ಟೆಲ್ಲ ನಡೆದು ಹೋಗಿದೆ ಎಂದು ಯುವತಿಯ ತಂದೆ ಕಣ್ಣೀರು ಹಾಕಿದ್ದಾರೆ. ಇನ್ನು ಘಟನೆ ಬಗ್ಗೆ ಹಲಗೂರು ಠಾಣೆಗೆ ಶಕುಂತಲಾದೇವಿ ಪತಿ ಮಹೇಶ್ ನೀಡಿರುವ ದೂರಿನ ಅನ್ವಯ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಿಯಾಂಕ ಮದುವೆ ಮಾಡವ ವಿಚಾರ ತಿಳಿದು ಆತ್ಮಹತ್ಯೆಗೆ ಯತ್ನಿಸಿದ್ದ ಮುತ್ತುರಾಜ್
ಪ್ರಿಯಾಂಕಾಗೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದ ವಿಷಯ ತಿಳಿದು ಆಕೆಯನ್ನು ಮನೆಯವರನ್ನು ಹೆದರಿಸಲು ಮುತ್ತುರಾಜ್ ಮೂರು ದಿನದ ಹಿಂದೆ ವಿಷ ಸೇವಿಸಿ ಆ*ಹ*ಯ ನಾಟಕವಾಡಿ ಹೆದರಿಸಲು ಯತ್ನಿಸಿದ್ದ. ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆ ಬಳಿಕ ತಾಯಿ ಶಂಕುತಲಾ ಮತ್ತು ಮಗಳು ಪ್ರಿಯಾಂಕಾ ಇನ್ನಷ್ಟು ಗಾಬರಿಗೊಂಡಿದ್ದರು ಎನ್ನಲಾಗಿದೆ.



