HOMENews

ಈಗ (Gold loan) ಚಿನ್ನದ ಸಾಲ ಪಡೆಯುವವರಿಗೆ ಒಳ್ಳೆಯ ಸುದ್ದಿ , ಇನ್ನೂ ಮುಂದೆ 10 ಗ್ರಾಂ ಚಿನ್ನಕ್ಕೆ 85% ವರೆಗೆ ಸಾಲ ಸೀಗುತ್ತದೆ ಆರ್.ಬಿ.ಐ ಹೊಸ ರೂಲ್ಸ್ .

ಇನ್ನೂ ಮುಂದೆ Gold loan ಚಿನ್ನದ ಮೇಲೆ ಸಾಲ ಪಡೆಯುವವರಿಗೆ 2026ರಲ್ಲಿ ಅತಿ ದೊಡ್ಡ ಮಟ್ಟದ ಅನುಕೂಲ ಚಿನ್ನ ಇಟ್ಟಿರುವ ಎಲ್ಲರಿಗೂ ದೊರೆಯಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲ ವ್ಯವಸ್ಥೆಯನ್ನು ಇನ್ನಷ್ಟುಸುಲಭವಾಗೊ ಗ್ರಾಹಕರ ಸ್ನೇಹಿಯಾಗಿಸಲು ಹೊಸ ನಿಯಮಗಳನ್ನು ತಂದಿದೆ . RBI ನ ಹೊಸ ಈ ನಿಯಮಗಳ ಮೂಲಕ ಸಣ್ಣ ಸಾಲಗಾರರಿಗೆ ಹೆಚ್ಚಿನ ಹಣ ಸಿಗಲಿದೆ ,ಕಡಿಮೆ ವೇಗದ ಪ್ರಕ್ರಿಯೆ ಮತ್ತು ಎಲ್ಲಾ ಬ್ಯಾಂಕುಗಳ ಮೇಲಿನ ಹೊಣೆಗಾರಿಕೆಯನ್ನು ಹೆಚ್ಚಿಸಲಾಗಿದೆ.

RBI ತಂದಿರುವ ಈ ಎಲ್ಲಾ ಹೊಸ ಮಾರ್ಗಸೂಚಿಗಳು ಏಪ್ರಿಲ್ 1, 2026 ರಿಂದ ದೇಶದ ಎಲ್ಲಾ ಸರ್ಕಾರಿ, ಖಾಸಗಿ ಬ್ಯಾಂಕುಗಳು ಹಾಗೂ NBFCಗಳಿಗೆ ಕಡ್ಡಾಯವಾಗಿ ಅನ್ವಯವಾಗುತ್ತವೆ.
1. ಚಿನ್ನದ ಸಾಲದ ಮೌಲ್ಯದಲ್ಲಿ ಭಾರಿ ಏರಿಕೆ (LTV ಹೆಚ್ಚಳ)

RBI ಹೊಸ ನಿಯಮಗಳ ಪ್ರಕಾರ, ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ನೀಡುವ ಸಾಲದ ಪ್ರಮಾಣವನ್ನು ಹೆಚ್ಚಿಸಲಾಗಿದೆ.
₹2.5 ಲಕ್ಷದವರೆಗೆ ಸಾಲ
ಈಷ್ಡೇ ಹಣದ ಸಾಲಕ್ಕೆ ಈಗ ಚಿನ್ನದ ಮೌಲ್ಯ 85% ವರೆಗೆ ಮೊತ್ತಗ್ರಾಹಕರಿಗೆ ಸಿಗಲಿದೆ. ಮೊದಲಿನಂತೆ 75%ಕ್ಕೆ ಮಿತಿ ಇಲ್ಲ.
ಉದಾಹರಣೆ: ಮೊದಲು ₹1 ಲಕ್ಷ ಮೌಲ್ಯದ ಚಿನ್ನಕ್ಕೆ ಈಗ ₹85,000 ಸಾಲ.

₹2.5 ಲಕ್ಷದಿಂದ ₹5 ಲಕ್ಷದವರೆಗೆ
ಈ ಎಲ್ಲಾ ಶ್ರೇಣಿಯ ಸಾಲಗಳಿಗೆ 80% LTV ನಿಗದಿ ಪಡಿಸಲಾಗಿದೆ .
₹5 ಲಕ್ಷಕ್ಕಿಂತ ಹೆಚ್ಚು ದೊಡ್ಡ ಮೊತ್ತದ ಸಾಲಗಳಿಗೆ ಹಳೆಯದಂತೆ 75% LTV ಮುಂದುವರಿಯಲಿದೆ.
2. ಎಲ್ಲಾ ಸಾಲ ತೀರಿಸಿದ ಬಳಿಕ ಒಡವೆ ತಡವಾದರೆ ಬ್ಯಾಂಕಿಗೆ ದಂಡ
ಗ್ರಾಹಕರು/ ಸಾಲಗಾರರ ಹಕ್ಕುಗಳನ್ನು ರಕ್ಷಿಸಲು RBI ಕಟ್ಟುನಿಟ್ಟಿನ ನಿಯಮಗಳನ್ನು ತಂದಿದೆ.
ಗ್ರಾಹಕರು ಸಾಲವನ್ನು ಸಂಪೂರ್ಣವಾಗಿ ತೀರಿಸಿದ 7 ಕೆಲಸದ ದಿನಗಳೊಳಗೆ ಚಿನ್ನದ ಆಭರಣವನ್ನು ಗ್ರಾಹಕರಿಗೆ ಹಿಂತಿರುಗಿಸಬೇಕು
ಸಾಲ ಮರುಪಾವತಿಯಾಗಿ 7 ದಿನ ಮೀರಿದರೆ, ಆ ಬ್ಯಾಂಕ್ ಗೆ ಪ್ರತಿದಿನಕ್ಕೆ ₹5,000 ರೂ ದಂಡವನ್ನು ಬ್ಯಾಂಕ್ ಗ್ರಾಹಕರಿಗೆ ಕೊಡಬೇಕಾಗುತ್ತದೆ

ಇದು RBI ಗ್ರಾಹಕರಿಗೆ ದೊಡ್ಡ ಭದ್ರತೆ ನೀಡುವ ಕ್ರಮವಾಗಿದೆ.

3. ಗ್ರಾಹಕರು ಚಿನ್ನದ ತೂಕ ಮತ್ತು ಗುಣಮಟ್ಟದಲ್ಲಿ ಪಾರದರ್ಶಕತೆ
ಚಿನ್ನ ಅಡವಿಡುವ ಸಂದರ್ಭದಲ್ಲಿ ವಂಚನೆ ಆಗದಂತೆ RBI ಹೊಸ ಮಾನದಂಡಗಳನ್ನು ಕಡ್ಡಾಯಗೊಳಿಸಿದೆ.
ಚಿನ್ನದ ವಡವೆಗಳಲ್ಲಿ ಅಳವಡಿಸಿರುವ ಕಲ್ಲುಗಳು ಅಥವಾ ಅಲಂಕಾರಗಳ ತೂಕವನ್ನು ಹೊರತುಪಡಿಸಿ ನಿವ್ವಳ ಚಿನ್ನದ ತೂಕವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ
ಗ್ರಾಹಕರು ಚಿನ್ನದ ಕ್ಯಾರೆಟ್, ತೂಕ ಮತ್ತು ಮೌಲ್ಯ ಕುರಿತು ಲಿಖಿತ ಬ್ಯಾಂಕ್ ಗಳು ಪ್ರಮಾಣಪತ್ರವನ್ನು ಗ್ರಾಹಕರಿಗೆ ನೀಡಬೇಕು
ಗ್ರಾಹಕರ ಚಿನ್ನದ ಬೆಲೆ ನಿಗದಿ ಮಾಡುವಾಗ
ಹಿಂದಿನ ದಿನದ ಮಾರುಕಟ್ಟೆ ಬೆಲೆ ಅಥವಾ
ಕಳೆದ 30 ದಿನಗಳ ಸರಾಸರಿ ಬೆಲೆ

ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನೇ ಪರಿಗಣಿಸಲಾಗುತ್ತದೆ

4. ಚಿನ್ನಕ್ಕೆ ಬಡ್ಡಿದರ ಮತ್ತು ಬುಲೆಟ್ ಪಾವತಿ ವ್ಯವಸ್ಥೆ
ಬುಲೆಟ್ ಪೇಮೆಂಟ್ ಆಯ್ಕೆ: 12 ತಿಂಗಳ ನಂತರ ಅಸಲು ಮತ್ತು ಬಡ್ಡಿಯನ್ನು ಒಟ್ಟಿಗೆ ಪಾವತಿಸುವ ಅವಕಾಶ
ಬಡ್ಡಿದರ:
SBI, ಕೆನರಾ ಬ್ಯಾಂಕ್ ಮುಂತಾದ ಸರ್ಕಾರಿ ಬ್ಯಾಂಕುಗಳಲ್ಲಿ: 8.75% – 11%
ಮುತ್ತೂಟ್, ಮಣಪ್ಪುರಂ ಮುಂತಾದ NBFCಗಳಲ್ಲಿ: 9.9% ರಿಂದ ಆರಂಭ
5. ಸಿಬಿಲ್ ಸ್ಕೋರ್ ಅಥವಾ ಇನ್ಕಮ್ ಯಾವುದೇ ಪ್ರೂಫ್ ಬೇಡ!
₹2.5 ಲಕ್ಷದವರೆಗೆ ಚಿನ್ನದ ಸಾಲ ಪಡೆಯಲು ಮಾತ್ರ :
CIBIL ಸ್ಕೋರ್ ಅಗತ್ಯವಿಲ್ಲಾ

ಗ್ರಾಹಕರ ಆದಾಯದ ದಾಖಲೆಗಳು ಬೇಡ

ರೈತರು, ಸಣ್ಣ ವ್ಯಾಪಾರಿಗಳು 30 ನಿಮಿಷಗಳಲ್ಲಿ ಸಾಲ ಪಡೆಯಲು ಈ ನಿಯಮ ಬಹಳ ಸಹಾಯಕ
ಯಾರು ಎಷ್ಟು ಸಾಲ ಪಡೆಯಬಹುದು?
₹2.5 ಲಕ್ಷದವರೆಗೆ – 85% ಸಾಲ | ಯಾವುದೇ ಆದಾಯತೆ ರಿಗೆ ಧೃಡಿಕರಣ ಬೇಡ
₹2.5 – ₹5 ಲಕ್ಷ – 80% ಸಾಲ | ಸರಳ ಪ್ರಕ್ರಿಯೆ
₹5 ಲಕ್ಷಕ್ಕಿಂತ ಹೆಚ್ಚು – 75% ಸಾಲ | ಗ್ರಾಹಕರಿಗೆ ಪಾರದರ್ಶಕ ಮೌಲ್ಯಮಾಪನ
ನಿಮ್ಮ ಚಿನ್ನದ ಭದ್ರತೆ ನಿಮ್ಮ ಕೈಯಲ್ಲಿ
ಇನ್ನು ಮುಂದೆ ಬ್ಯಾಂಕ್ಗಳು ಚಿನ್ನದ ತೂಕ, ಗುಣಮಟ್ಟ ಮತ್ತು ಮೌಲ್ಯದ ಬಗ್ಗೆ ಸ್ಪಷ್ಟ ದಾಖಲೆ ನೀಡಲೇಬೇಕು. ಇದರಿಂದ ಗ್ರಾಹಕರಿಗೆ ಸಂಪೂರ್ಣ ನಂಬಿಕೆ ಮತ್ತು ಭದ್ರತೆ ಸಿಗಲಿದೆ.
ಈ ಎಲ್ಲಾ ಹೊಸ ನಿಯಮಗಳು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿವೆ. ಸಾಲ ಪಡೆಯುವ ಮೊದಲು ನಿಮ್ಮ ಬ್ಯಾಂಕ್ನಲ್ಲಿ ಈ ನಿಯಮಗಳ ಬಗ್ಗೆ ಖಚಿತಪಡಿಸಿಕೊಳ್ಳಿ.
ನಮ್ಮ ಸಲಹೆ
ಚಿನ್ನದ ಸಾಲಕ್ಕೆ ಸಾಧ್ಯವಾದಷ್ಟು ಸರ್ಕಾರಿ ಬ್ಯಾಂಕುಗಳಿಗೆ ಮೊದಲ ಆದ್ಯತೆ ನೀಡಿ. ಕಡಿಮೆ ಬಡ್ಡಿದರ, ಹೆಚ್ಚು ಭದ್ರತೆ ಮತ್ತು RBI ನಿಯಮಗಳ ಕಟ್ಟುನಿಟ್ಟಿನ ಪಾಲನೆ ಇಲ್ಲಿ ಲಾಭಕರವಾಗಿರುತ್ತದೆ.

 

Leave a Response