HOMENews

ಹಾಡಹಗಲೇ ಪತ್ನಿ ಹ*: ಕತ್ತು ಕೊಯ್ದು, ಬಳಿಕ ಕಾರು ಹಾಯಿಸಿ ಪೈಶಾಚಿಕ ಕೃತ್ಯ

ಕಲಬುರಗಿ, ಮಾರ್ಚ್ 26: ಮಾನವೀಯತೆಯನ್ನೆ  ನಡುಗಿಸುವಂತಹ ಅತ್ಯಂತ ಭೀಕರ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ. ತನ್ನ ಹೆಂಡತಿಯ ಮೇಲೆ ಅನುಮಾನ ಗೋಂಡ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹಾಡಹಗಲೇ ಕತ್ತು ಕೊಯ್ದು, ಬಳಿಕ ಕಾರಿನಿಂದ ಗುದ್ದಿ ತನ್ನ ಹೆಂಡತಿಯ ಮೇಲೆ  ಕಾರು ಹಾಯಿಸಿ ಬರ್ಬರವಾಗಿ ಹ* ಮಾಡಿದ ಘಟನೆ ರಾಜ್ಯದಾದ್ಯಂತ ಆಘಾತ ಮೂಡಿಸಿದೆ.

ಹ* ಯಾದ ಮಹಿಳೆಯನ್ನು ಶೈಲಾ (28) ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಅಕ್ಷಯ್ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಮಹಾರಾಷ್ಟ್ರದ ಮೂಲದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಹೇಗೆ ನಡೆದಿದೆ  ಈ ಘಟನೆ ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ಅಕ್ಷಯ್ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಗಾಣಗಾಪುರಕ್ಕೆ ಹೋಗೋಣ ಎಂದು ನೆಪವಿಟ್ಟು ಪತ್ನಿ ಶೈಲಾಳನ್ನು ತನ್ನ ತಂದೆ-ತಾಯಿಯೊಂದಿಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾನೆ. ಮಾರ್ಗ ಮಧ್ಯೆ, ಬಳೂರಗಿ ಗ್ರಾಮದ ಸಮೀಪ ಕಾರು ನಿಲ್ಲಿಸಿ, ಪತ್ನಿಯನ್ನು ಬಲವಂತವಾಗಿ ಹೊರಗೆಳೆದು ಹೊಲದ ಪಕ್ಕಕ್ಕೆ ಕರೆದೊಯ್ದಿದ್ದಾನೆ.

ಅಲ್ಲಿಯೇ ಕುಡುಗೋಲಿನಿಂದ ಶೈಲಾಳ ಕತ್ತನ್ನು ಕೊಯ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಶೈಲಾ ಪ್ರಾಣ ಉಳಿಸಿಕೊಳ್ಳಲು ರಕ್ತಸಿಕ್ತ ಸ್ಥಿತಿಯಲ್ಲಿ ಹೊಲದ ಕಡೆಗೆ ಓಡಲು ಪ್ರಯತ್ನಿಸಿದ್ದಾಳೆ. ಆದರೆ ಕ್ರೂರತೆಯ ಮಿತಿ ಮೀರಿ, ಅಕ್ಷಯ್ ಆಕೆಯನ್ನು ಕಾರಿನಿಂದ ಬೆನ್ನಟ್ಟಿ ಗುದ್ದಿ, ಬಳಿಕ ಆಕೆಯ ಮೇಲೆ ಕಾರು ಹಾಯಿಸಿ ಹ* ಗೈದಿದ್ದಾನೆ.

ಈ ಭೀಕರ ಘಟನೆ ಜನರ ಮುಂದೆ ನಡೆದ ಭೀಕರ ದೃಶ್ಯ

ಈ ಭೀಕರ ಘಟನೆ ರಸ್ತೆ ಪಕ್ಕದಲ್ಲೇ ನಡೆದಿದ್ದು, ಸ್ಥಳದಲ್ಲಿದ್ದ ಕೆಲವರು ಅದನ್ನು ಕಣ್ಣಾರೆ ನೋಡಿದ್ದಾರೆ. ಕೆಲವರು ಭಯದಿಂದ ದೂರ ನಿಂತಿದ್ದರೆ, ಇನ್ನೂ ಕೆಲವರು ಕಲ್ಲು ಎಸೆದು ತಡೆಯಲು ಯತ್ನಿಸಿದ್ದಾರೆ. ಆದರೂ, ಶೈಲಾಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಸಂಪೂರ್ಣ ಘಟನೆ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆ ಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕ ಮೂಡಿಸಿದೆ.

ಕಲಬುರಗಿ  ಪೊಲೀಸ್ ಕ್ರಮ

ಘಟನಾ ಸ್ಥಳಕ್ಕೆ ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರ ಪ್ರಕಾರ, ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪ್ರಕರಣ ಸಂಬಂಧ ಅಕ್ಷಯ್ ಹಾಗೂ ಆತನ ತಂದೆ-ತಾಯಿಯನ್ನು ವಶಕ್ಕೆ ಪಡೆಯಲಾಗಿದೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿಯ ಅನೈತಿಕ ಸಂಬಂಧವೇ ಹತ್ಯೆಗೆ ಕಾರಣವೇ ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕುಟುಂಬದ ಕಲಹ, ಅನುಮಾನ ಮತ್ತು ಕೋಪ – ಈ ಮೂರು ಸೇರಿಕೊಂಡಾಗ ಎಷ್ಟು ಭೀಕರ ಪರಿಣಾಮ ಉಂಟಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಕಣ್ಣೆತ್ತಿಸುತ್ತದೆ.

Leave a Reply