HOMENews

ಹೇಮಾವತಿ ಹೆಗಡೆ ಜನ್ಮದಿನದಂದು ಸೇವೆಯ ಸಡಗರ: ಫಲ ತಾಂಬೂಲ ನೀಡಿ ಗೌರವ

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ.ಏ. 02:- ಮಹಿಳೆಯರ ಸಬಲೀಕರಣಕ್ಕಾಗಿ ಭೂಮಿಯಲ್ಲಿ ಜನ್ಮ ತಾಳಿದ ಪ್ರತಿಯೊಬ್ಬರು ಹಸಿವಿನಿಂದ ಇರಬಾರದೆಂದು ವಾಸ್ತಲ್ಯದ ಮೂಲಕ ಧನಸಹಾಯ ಮಾಡುತ್ತಿರುವ ಮಾತೃ ಹೃದಯದ ಶ್ರೀ ಡಾ. ಹೇಮಾವತಿ ವಿ ಹೆಗಡೆಯವರ ಹುಟ್ಟು ಹಬ್ಬದ ಅಂಗವಾಗಿ ಅತ್ಯಂತ ಜೀವನ ಸಾಗಿಸಲು ಸಾಧ್ಯವಾಗದ ನಿರ್ಗತಿಕರಿಗೆ ಇಂದು ಫಲ ತಾಂಬೂಲ ಕೊಟ್ಟು ಗೌರವಿಸುತ್ತಿದ್ದೇವೆ ಎಂದು ಸಾಲಿಗ್ರಾಮ ತಾಲೂಕಿನ ಯೋಜನಾಧಿಕಾರಿ ಉಮೇಶ್ ಪೂಜಾರಿ ಹೇಳಿದರು.

ಅವರು ವಡ್ಡರ ಕೊಪ್ಪಲು ಗ್ರಾಮದಲ್ಲಿ ಶ್ರೀ ಧರ್ಮಸ್ಥಳದ ಗ್ರಾಮ ಅಭಿವೃದ್ಧಿ ಯೋಜನೆಯ ರೂವಾರಿ ಡಾ. ಹೇಮಾವತಿ ವಿ ಹೆಗಡೆಯವರ ಹುಟ್ಟು ಹಬ್ಬದ ಅಂಗವಾಗಿ ವಸ್ತಲ್ಯದ ಹೆಸರಿನಲ್ಲಿ ಒಂದು ಸಾವಿರ ಸಹಾಯಧನವನ್ನು ಪಡೆಯುತ್ತಿರುವ ಸಾಲಿಗ್ರಾಮ ತಾಲೂಕಿನ 35 ಜನರಿಗೆ ಇಂದು ಫಲ ತಾಂಬೂಲ ನೀಡುವ ಮೂಲಕ ವಿನೂತನವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಫಲ ತಾಂಬೂಲ ನೀಡಿ ಮಾತನಾಡಿದ ತಾಲೂಕ್ ಯೋಜನಾಧಿಕಾರಿ ಉಮೇಶ್ ಪೂಜಾರಿ ಧರ್ಮಸ್ಥಳದ ಚೈತನ್ಯ ಶಕ್ತಿ ಜ್ಞಾನ ವಿಕಾಸದ ರೂವಾರಿ ವಾಸ್ತಲ್ಯದ ತಾಯಿ ಲಕ್ಷಾಂತರ ಮಹಿಳೆಯರ ಸಬಲೀಕರಣಕ್ಕೆ ಪಣತೊಟ್ಟ ಸ್ಪೂರ್ತಿದಾಯಕಿ ನೊಂದ ಮನಸ್ಸಿಗೆ ಗೆಳತಿಯಾಗಿ ಸಂತ್ವಾನ ಅತಂತ್ರ ಕುಟುಂಬಗಳ ಪಾಲಿನ ನಂದಾದೀಪ ಇಂತಹ ಮಾತೃಶ್ರೀಯನ್ನು ಪಡೆದ ನಾವೇ ಪುಣ್ಯವಂತರು ಇವರ ಹುಟ್ಟು ಹಬ್ಬವನ್ನು ಅತ್ಯಂತ ಸರಳ ಮತ್ತು ಮಾತೆಯರಿಗಾಗಿ ಫಲತಾಂಬಲವನ್ನು ನೀಡುವ ಮೂಲಕ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಡ್ಡರ ಕೊಪ್ಪಲು ಶಿವರಾಮು ಮಾತನಾಡಿ ರಾಜ್ಯ ಸರ್ಕಾರಗಳು ವಿಧವೆಯರಿಗೆ ಅಂಗವಿಕಲರಿಗೆ ಮತ್ತು ವಯಸ್ಸಾದವರಿಗೆ ಸಹಾಯಧನವನ್ನು ಪ್ರತಿ ತಿಂಗಳು ನೀಡಲು ಸಾಧ್ಯವಾಗದೆ ಎರಡು ಅಥವಾ ಮೂರು ತಿಂಗಳಿಗೊಮ್ಮೆ ನೀಡುವಂತ ಪರಿಸ್ಥಿತಿಯಿದ್ದರೂ ಧರ್ಮಸ್ಥಳದ ಗ್ರಾಮ ಅಭಿವೃದ್ಧಿ ಸಂಘದ ವತಿಯಿಂದ ಮಾತೃಶ್ರೀ ರವರು ಪ್ರತಿ ತಿಂಗಳು ಮಾಸಾಸನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಮುದಾಯ ಭವನಗಳಿಗೆ ಸಹಾಯಧನ ಕೃಷಿಗೆ ಅಗತ್ಯವಾದ ಪರಿಕರಗಳು ಕೆರೆ ಅಭಿವೃದ್ಧಿ ಸೇರಿದಂತೆ ಮಹಿಳಾ ಸಂಘಗಳಿಗೆ ಸಾಲ ನೀಡುವ ಮೂಲಕ ಸಮಸಮಜ ನಿರ್ಮಾಣ ಮಾಡಲು ಪಣತೊಟ್ಟಿರುವ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ ಎಂದು ವರ್ಣಿಸಿದರು.

ಸಾಲಿಗ್ರಾಮ ಗ್ರಾಮ ಅಭಿವೃದ್ಧಿ ಸಂಘದ ಯೋಜನಾಧಿಕಾರಿಯವರು ಎಲ್ಲಾ ಗ್ರಾಮಗಳಲ್ಲಿಯೂ ಪರಿಶೀಲನೆ ಮಾಡಿ ಯಾರಿಗೆ ಕುಟುಂಬದ ಸಹಾಯವಿಲ್ಲವೂ ದುಡಿಯಲು ಆಗುವುದಿಲ್ಲವೋ ಅಂತಹವರನ್ನು ಗುರುತಿಸಿ ಅವರಿಗೆ ತಮ್ಮ ಸಂಘದ ವತಿಯಿಂದ ನೀಡುತ್ತಿರುವ ಸಹಾಯ ನಾವು ಮರೆಯುವಂತಿಲ್ಲ ಆದರೂ ಮುಂದೆಯೂ ಸಹ ಇನ್ನೂ ಕೆಲವು ಮಂದಿಯನ್ನು ಗುರುತಿಸಿ ಸಹಾಯ ನೀಡುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವಾಸ್ತಲ್ಯದ ಸಹಾಯಧನ ಪಡೆಯುತ್ತಿರುವ ಕೆಂಪಮ್ಮ ಲಕ್ಷ್ಮಮ್ಮ ಸಾಕಮ್ಮ ಲಕ್ಷ್ಮಮ್ಮನವರಿಗೆ ಫಲತಾಂಬುಲ ನೀಡಿ ಗೌರವಿಸಿದರು ಈ ವೇಳೆ ಜಿಲ್ಲಾ ಯೋಜನೆಯ ಉಸ್ತುವಾರಿ ಉಮೇಶ್ ಧರ್ಮಸ್ಥಳ ಯೋಜನೆಯ ರಾಜೇಶ್ವರಿ ಸಂಗೀತ ಪತ್ರಕರ್ತ ಬಸವರಾಜ್ ಧರ್ಮಸ್ಥಳದ ಮಹಿಳಾ ಸಂಘದ ಸದಸ್ಯರುಗಳಾದ ರೂಪ ದೇವರಾಜ್ ರೇಣುಕ ಅನಂತ್ ಕಮಲಮ್ಮ ಪವಿತ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply