NewsHOME

ಹಳೆಯ ನೆನಪುಗಳು, ಹೊಸ ಸಂಕಲ್ಪ: ಸಾಲಿಗ್ರಾಮ ಕಾಲೇಜಿನಲ್ಲಿ ಅಲ್ಯೂಮ್ನಿ ಸಂಭ್ರಮ : ಡಾ. ಜಿ.ಟಿ. ಮಹೇಶ್

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ.ಮಾ. 28:-ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಆಸ್ತಿ ಆದ್ದರಿಂದ ಕಾಲೇಜಿನ ಕೀರ್ತಿ ಮತ್ತು ಯಶಸ್ಸು ಹಿರಿಯ ವಿದ್ಯಾರ್ಥಿಗಳಿಗೆ ಸಲ್ಲಬೇಕಾಗಿದೆ ಎಂದು ಡಾ. ಜಿ ಟಿ ಮಹೇಶ್ ಹೇಳಿದರು.

​ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು ಕಾಲೇಜಿನ ಅಭಿವೃದ್ಧಿ ಹಾಗೂ ಹಿರಿಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದೇಗೌಡ ಕೆ.ಇ. ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಪ್ರಗತಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಅತ್ಯಂತ ದೊಡ್ಡದು. ಶೈಕ್ಷಣಿಕ ಚಟುವಟಿಕೆಗಳಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದರು.

​ ಸಭೆಯ ಸಂಚಾಲಕರಾದ ಡಾ. ಮಹೇಶ್ ಜಿ.ಟಿ. ಅವರು ಕಾಲೇಜಿನ ಯಶಸ್ಸು ಅಲ್ಲಿನ ಕಟ್ಟಡಗಳಿಂದಲ್ಲ, ಅಲ್ಲಿ ಓದಿ ಹೊರಬಂದ ವಿದ್ಯಾರ್ಥಿಗಳು ಸಮಾಜದಲ್ಲಿ ಗಳಿಸಿದ ಯಶಸ್ಸಿನಿಂದ ಅಳೆಯಲ್ಪಡುತ್ತದೆ. ಆ ಯಶಸ್ಸಿನ ಪ್ರತಿಫಲವೇ ಹಿರಿಯ ವಿದ್ಯಾರ್ಥಿಗಳ ಸಂಘವಾಗಿದೆ. ಮುಂಬರುವ ದಿನಗಳಲ್ಲಿ ಸಂಘವು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಹಿರಿಯ ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು ಹಾಗೂ ಕಾಲೇಜಿನ ನ್ಯಾಕ್ ಮೌಲ್ಯಮಾಪನ ಮಾಡುವಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ಷಮತೆ ಮತ್ತು ಅವರು ಕಾಲೇಜಿಗೆ ನೀಡುವ ಕೊಡುಗೆ ಬಹಳ ಮುಖ್ಯವಾದ ಮಾನದಂಡವಾಗಿದೆ ಎಂದು ತಿಳಿಸಿದರು.

​ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕಿಶೋರ್ ಪದಾಧಿಕಾರಿಗಳಾದ ರಾಜೇಶ್, ಸಚಿನ್, ದೊಡ್ಡಸ್ವಾಮಿ ಹಾಗೂ ಪ್ರದೀಪ್, ಸ್ವಾಮಿ, ಸಾನಿಯಾ, ಮೆಹಕ್, ಉದಯ್, ಶಿವು, ಮನು, ರಕ್ಷಿತಾ, ಪ್ರಮೋದೀನಿ ಮತ್ತು ಭಾಸ್ಕರ್ ಸೇರಿದಂತೆ ಹಲವು ನಿಕಟಪೂರ್ವ ವಿದ್ಯಾರ್ಥಿಗಳು ಭಾಗವಹಿಸಿ ಕಾಲೇಜಿನ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ಹಂಚಿಕೊಂಡರು.

 

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಾ.ರಾಜೇಶ, ರಾಜಶೇಖರ, ಮಧು, ಶ್ರೀನಿವಾಸ, ಮಂಜುನಾಥ್, ಡಾ.ಸತ್ಯನಾರಾಯಣ್,ಸುರೇಶ್, ಡಾ.ಪ್ರತಿಮಾ, ಡಾ.ಸುವರ್ಣ, ಡಾ. ತಾಸೀನ್ ಮತ್ತು ಗಾಯತ್ರಮ್ಮ ಹಾಜರಿದ್ದರು.

 

1 17 18 19 20 21 81
Page 19 of 81