HOMENews

ಸಾಲದ ಪ್ರಶ್ನೆ ಪ್ರಾಣ ಹರಣಕ್ಕೆ ಕಾರಣ: ಪತ್ನಿಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಪತಿ

ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಮಾನವೀಯತೆ ಬೆಚ್ಚಿಬೀಳುವ ಘಟನೆ | ಇಬ್ಬರು ಮಕ್ಕಳ ಭವಿಷ್ಯ ಕತ್ತಲಲ್ಲಿ

ಹುಬ್ಬಳ್ಳಿ, ಫೆಬ್ರವರಿ 3:- ಸಾಲದ ಸಂಕಟ, ದಾಂಪತ್ಯದ ಗಲಾಟೆ ಮತ್ತು ನಿಯಂತ್ರಣವಿಲ್ಲದ ಕೋಪ ಒಂದು ಸುಖಿ ಕುಟುಂಬವನ್ನು ಸಂಪೂರ್ಣವಾಗಿ ನಾಶಪಡಿಸಿದ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಸಾಲದ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯ ಕತ್ತು ಸೀಳಿ ಅಮಾನುಷವಾಗಿ ಕೊಲೆ ಮಾಡಿರುವುದು ನಗರವನ್ನೇ ಬೆಚ್ಚಿಬೀಳುವಂತೆ ಮಾಡಿದೆ.

ಹುಬ್ಬಳ್ಳಿ ರಾಮಲಿಂಗೇಶ್ವರ ನಗರದಲ್ಲಿ ಅಮಾನುಷ ಕೃತ್ಯ: ಪತಿಯ ಕೈಯಲ್ಲಿ ಪತ್ನಿ ಬಲಿ

ಹುಬ್ಬಳ್ಳಿಯಲ್ಲಿ ಜೀವನಕ್ಕಾಗಿ ಗಾರೆ ಕೆಲಸ ಮಾಡಿಕೊಂಡು ಹೋಗುತ್ತಿದ್ದ  ಇರ್ಫಾನ್ ಎಂಬಾತ ತನ್ನ ಪತ್ನಿ ಮಾಸಬ್ಬಿಯನ್ನು ಚಾಕುವಿನಿಂದ ಕತ್ತು ಸೀಳಿದ್ದಾನೆ .  ಆಕೆ ರಕ್ತದ ಮಡುವಿನಲ್ಲಿ ಪ್ರಾಣ ಉಳಿಸಿಕೊಳ್ಳಲು ಆಕೆ ಮನೆಯ ಹೊರಗೆ ಓಡಿ ಬಂದರೂ ಸಹ, ಆಕೆಯ ಬದುಕಲಿಕ್ಕಾಗಿ  ಮಾಡಿದ ಬೇಡಿಕೆಗೆ ಕರಗದ ಇರ್ಫಾನ್ ಪತಿ, ಮತ್ತೆ ಕತ್ತಿಗೆ ಚಾ* ಕು ಇರಿದು ಸ್ಥಳದಲ್ಲೇ ಕೊಲೆ ಮಾಡಿರುವುದು ಕ್ರೌರ್ಯದ ಪರಾಕಾಷ್ಠೆಯಾಗಿದೆ.

ಇರ್ಫಾನ್ ಮತ್ತು ಮಾಸಬ್ಬಿ ಸಾಲದ ಸುಳಿಯಲ್ಲಿ ಸಿಲುಕಿದ ಇವರ ಕುಟುಂಬ

ಇರ್ಫಾನ್ ಮತ್ತು ಮಾಸಬ್ಬಿ ದಂಪತಿಗೆ ಇಬ್ಬರು ಪುಟ್ಟ ಮಕ್ಕಳು ಇದ್ದರು. ಸಾಮಾನ್ಯವಾಗಿ ನೆಮ್ಮದಿಯ ಬದುಕು ನಡೆಸುತ್ತಿದ್ದ ಈ ಕುಟುಂಬಕ್ಕೆ ಕಳೆದ ಕೆಲವು ತಿಂಗಳಿಂದ ಸಾಲದ ಸಮಸ್ಯೆ ದೊಡ್ಡ ತಲೆನೋವಾಗಿತ್ತು. ಗಾರೆ ಕೆಲಸದಿಂದ ಸಿಗುತ್ತಿದ್ದ ಆದಾಯ ಸಾಲ ತೀರಿಸಲು ಸಾಕಾಗದೆ, ಇರ್ಫಾನ್ ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗಿದೆ. ಇದಕ್ಕಾಗಿ ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟಿದ್ದು, ಬಳಿಕವೂ ಹಣಕಾಸಿನ ಸಮಸ್ಯೆ ತೀವ್ರವಾಗುತ್ತಲೇ ಹೋಗಿತ್ತು.

ಇರ್ಫಾನ್ ಮತ್ತು ಮಾಸಬ್ಬಿರವರ ಮನೆಯೊಳಗಿನ ಆರ್ಥಿಕ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ದಂಪತಿಯ ನಡುವೆ ಕಲಹ ಹೆಚ್ಚಾಗಿತ್ತು ಎಂದು  ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ. ಇವರು ಸಾಲ ತೀರಿಸಲು ಹಣ ತರುವಂತೆ ಇರ್ಫಾನ್ ಪತ್ನಿಗೆ ದಿನ ನಿತ್ಯ ಮನೆಯಲ್ಲಿ ಜಗಳ ಗಂಡ ಹೆಂಡತಿಯರ ಮದ್ಯೆ ನಡೆಯುತ್ತತ್ತು ಎಂದು ನೆರೆಹೊರೆಯವರು ಹೇಳಿದ್ದು ಕೇಳಿಬಂದಿವೆ.

ಮಾಸಬ್ಬಿಯ ಸಹೋದರ ನೀಡಿದ ಹಣವೂ ಇರ್ಫಾನ್ ಗೆ  ಸಾಕಾಗಲಿಲ್ಲ

ತನ್ನ ಸಹೋದರಿಯ ಮನೆ ಪರಿಸ್ಥಿತಿಯನ್ನು ನೋಡಿದ ಮಾಸಬ್ಬಿಯ ಸಹೋದರ ಸುಮಾರು 20 ಸಾವಿರ ರೂಪಾಯಿ ಹಣವನ್ನು  ನೀಡಿ ಸಹಾಯ ಮಾಡಿದ್ದರೂ ಸಹ, ಇರ್ಫಾನ್ ಗೆ ಸಾಕಾಗಲಿಲ್ಲಾ ಎನ್ನಲಾಗಿದೆ. ಇನ್ನು ಹೆಚ್ಚು ಹಣ ತರಬೇಕು ಎಂದು ಹೆಂಡತಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಇದೇ ವಿಚಾರವನ್ನು ಸೋಮವಾರ ಮತ್ತೆ ಪ್ರಶ್ನಿಸಿದಾಗ, ದಂಪತಿಯ ನಡುವೆ ಭಾರೀ ಕಲಹ ಉಂಟಾಗಿದೆ.

ಇದನ್ನೂ ಓದಿ:- https://kannadanewshub24.com/horoscope-for-today-03-02-2026/

ವಿಕೋಪಕ್ಕೆ  ಏರಿದಾಗ, ಇರ್ಫಾನ್ ಕೋಪದ ಆವೇಶದಲ್ಲಿ ಇರ್ಫಾನ್ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ. ಅಚಾನಕ್ ನಡೆದ ದಾಳಿಯಿಂದ ತೀವ್ರ ಗಾಯಗೊಂಡ ಮಾಸಬ್ಬಿ ರಕ್ತಸ್ರಾವವಾಗುತ್ತಲೇ ಮನೆಯ ಹೊರಗೆ ಓಡಿ ಬಂದಿದ್ದಾಳೆ.

ಮಾಸಬ್ಬಿಯ  ಪ್ರಾಣ ಉಳಿಸಿಕೊಳ್ಳಲು ಮಾಡಿದ ಅಂಗಲಾಚಿಕೆ ವ್ಯರ್ಥ

ಮಾಸಬ್ಬಿಯ ಮನೆಯ ಎದುರಿನ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದು ಜೀವ ಉಳಿಸಿಕೊಳ್ಳಲು ನೆರೆಯವರನ್ನು ಕರೆದಿದ್ದಾಳೆ. ಆದರೆ, ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಇರ್ಫಾನ್ ಯಾವುದೇ ಮಾನವೀಯತೆ ತೋರಿಸದೆ, ಮತ್ತೆ ಕತ್ತಿಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದು ಕೂಗಿಕೊಂಡಿದ್ದಾರೆ.

ಸ್ಥಳದಲ್ಲೇ ಮಾಸಬ್ಬಿ ಪ್ರಾಣಬಿಟ್ಟಿದ್ದಾಳೆ , ಕೆಲವೇ ಕ್ಷಣಗಳಲ್ಲಿ ಸಂತೋಷದ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಮಾಸಬ್ಬಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ದೇಹವನ್ನು ಕಂಡು ಜನರು ಕಣ್ಣೀರು ಹಾಕಿದ್ದಾರೆ.

ಮಾಸಬ್ಬಿಯ ಮೃತದೇಹದ ಮುಂದೆ ಮುರಿದ ಪೋಷಕರ ಹೃದಯ

ಮೃತದೇಹವನ್ನು ಕಂಡು ಮಾಸಬ್ಬಿಯ ತಂದೆ-ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಮಗಳು ಅನುಭವಿಸಿದ ನೋವು, ಆಕೆಯ ಅಂತ್ಯವನ್ನು ನೆನೆದು ಕುಟುಂಬದವರು ಕಣ್ಣೀರು ಸುರಿಸಿದ್ದಾರೆ. “ಸಾಲದ ವಿಚಾರಕ್ಕೆ ಮಗಳ ಪ್ರಾಣ ಹೋಗಬೇಕಿತ್ತೇ?” ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದೆ.

ಇರ್ಫಾನ್ ಕ್ರೌರ್ಯ ಮೆರೆದ ಬಳಿಕ ಪೊಲೀಸರಿಗೆ ಶರಣು

ಈ ಘಟನೆ ಬಳಿಕ ಇರ್ಫಾನ್ ಯಾವುದೇ ಭಯವಿಲ್ಲದೆ ಹುಬ್ಬಳ್ಳಿ ನಗರದ ಕೇಶ್ವಾಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಬಳಿಕ ಗೋಕುಲ್ ರೋಡ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಸಾಲದ ವಿಚಾರವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದ್ದು, ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಚಾಕುವನ್ನು ವಶಪಡಿಸಿಕೊಂಡು ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯುತ್ತಿದೆ.

ಇವರಿಬ್ಬರ ಜಗಳದಲ್ಲಿ ಅನಾಥರಾದ ಇಬ್ಬರು ಮುದ್ದಾದ ಮಕ್ಕಳು

ಈ ಭೀಕರ ಘಟನೆಯಿಂದ ಅತ್ಯಂತ ದೊಡ್ಡ ಹೊಡೆತ ಅನುಭವಿಸಿರುವವರು ದಂಪತಿಯ ಇಬ್ಬರು ಪುಟ್ಟ ಮಕ್ಕಳು. ಒಂದೆಡೆ ತಂದೆ ಜೈಲು ಪಾಲಾಗಿದ್ದು, ಇನ್ನೊಂದೆಡೆ ತಾಯಿ ಶವವಾಗಿ ಮಲಗಿದ್ದಾಳೆ. ಪ್ರಪಂಚದ ಅರ್ಥವೂ ಅರಿಯದ ಈ ಮಕ್ಕಳ ಭವಿಷ್ಯ ಇದೀಗ ಪ್ರಶ್ನಾರ್ಥಕವಾಗಿದೆ.

ಸ್ಥಳೀಯರು ಮತ್ತು ಸಮಾಜಸೇವಕರು ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ. “ಇಂತಹ ಘಟನೆಗಳು ಮತ್ತೆ ನಡೆಯದಂತೆ ಕುಟುಂಬ ಕಲಹ, ಸಾಲದ ಒತ್ತಡದ ಬಗ್ಗೆ ಸಮಾಜ ಜಾಗೃತರಾಗಬೇಕು” ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:- https://kannadanewshub24.com/tax-terrorism-tax-terrorism/

ಹುಬ್ಬಳ್ಳಿ ನಗರವನ್ನೇ ಕಂಗಾಲು ಮಾಡಿದ ಘಟನೆ

ರಾಮಲಿಂಗೇಶ್ವರ ನಗರದಲ್ಲಿ ನಡೆದ ಈ ಅಮಾನುಷ ಕೃತ್ಯ ಇಡೀ ಹುಬ್ಬಳ್ಳಿಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಸಾಲ, ಕೋಪ ಮತ್ತು ಮಾನಸಿಕ ಒತ್ತಡಗಳು ಯಾವ ಮಟ್ಟಕ್ಕೆ ಮನುಷ್ಯನನ್ನು ಕ್ರೂರನಾಗಿಸಬಹುದು ಎಂಬುದಕ್ಕೆ ಈ ಘಟನೆ ಕಠಿಣ ಉದಾಹರಣೆಯಾಗಿದೆ.

ಪೊಲೀಸರು ಪ್ರಕರಣದ ತನಿಖೆಯನ್ನು ಗಂಭೀರವಾಗಿ ನಡೆಸುತ್ತಿದ್ದು, ಶೀಘ್ರವೇ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ.

1 37 38 39 40 41 47
Page 39 of 47