ಫೆ.7–8ಕ್ಕೆ ಕಲಾಮಂದಿರದಲ್ಲಿ ಆಯಾಮೋತ್ಸವ: ಸಂಗೀತ, ನೃತ್ಯ, ನಾಟಕ ರಸದೌತಣ
ಫೆಬ್ರವರಿ 7-8 ರಿಂದ ಯುವ ಪ್ರತಿಭೆಗಳ ಕಲಾ ಹಬ್ಬ ‘ಆಯಾಮೋತ್ಸವ’
ಮೈಸೂರು: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕಲಾತ್ಮಕ ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಆಯಾಮ ಅಕಾಡೆಮಿ, ಈ ಬಾರಿ ತನ್ನ ವಾರ್ಷಿಕ ಆಯಾಮೋತ್ಸವ – ಸಂಗೀತ, ನೃತ್ಯ, ನಾಟಕ ಉತ್ಸವ”ವನ್ನು ಫೆಬ್ರವರಿ 7 ಮತ್ತು 8, 2026ರಂದು ನಗರದ ಕಲಾಮಂದಿರದಲ್ಲಿ ಆಯೋಜಿಸಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಉತ್ಸವವು ಕಲಾಭಿಮಾನಿಗಳಿಗೆ ವಿಭಿನ್ನ ಕಲಾ ಪ್ರಕಾರಗಳ ರಸದೌತಣವನ್ನು ನೀಡಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿದುಷಿ ಡಾ. ಶಾಂಭವಿ ಸ್ವಾಮಿ ಎಸ್.ವಿ ತಿಳಿಸಿದ್ದಾರೆ.









