
ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಮತ್ತು ಶಾಲಾ ಶಿಕ್ಷಣ ಇಲಾಖೆ
ಮೈಸೂರು ;- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮೈಸೂರು ರವರು ದಿನಾಂಕ 26.03.2026 ರಂದು ಬೆಳಿಗ್ಗೆ 10.30 ಗಂಟೆಗೆ ಕೆರಿಯರ್ ಮೇಳ 2026 ” ವೃತ್ತಿ ಬಗ್ಗೆ ಅರಿತುಕೊಳ್ಳಿ ” ಭವಿಷ್ಯ ರೂಪಿಸಿಕೊಳ್ಳಿ” ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ಶಿಬಿರವನ್ನು 9, 10, 11ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀ ಡಿ ಉದಯಕುಮಾರ್ ಉಪನಿರ್ದೇಶಕರು, (ಆಡಳಿತ ) ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ರವರು ಉದ್ಘಾಟಿಸಿ ಮಾತನಾಡುತ್ತಾ ಎಲ್ಲಾ ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕನ್ನ ಕಟ್ಟಿಕೊಳ್ಳಬೇಕು ಎಂದು ಹೇಳುತ್ತಾ ಕೆರಿಯರ್ ಮೇಳದ ಸದುಪಯೋಗವನ್ನು ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅರವಿಂದ್ ಜೂನಿಯರ್ ಟ್ರೈನಿಂಗ್ ಆಫೀಸರ್ ಬೆಳವಾಡಿ ರವರು ಮಾತಾಡಿ….. ಕೆರಿಯರ್ ಮೇಳದ ಸದುಪಯೋಗವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಜೊತೆಗೆ ಅದನ್ನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತ್ತೊಬ್ಬರು ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಿ. ಆರ್ ಅಮಿತ್, ಪ್ರವಾಚಕರು ಸಿಟಿಇ, ಇವರು ಸ್ವಯಂ ಉದ್ಯೋಗ ಮತ್ತು ಸರ್ಕಾರಿ ಉದ್ಯೋಗ ಎರಡರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಮಾರಂಭದ ಅಧ್ಯಕ್ಷರು ಮತ್ತು ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಸಿ ಆರ್. ನಾಗರಾಜಯ್ಯ ನವರು ಮಾತನಾಡುತ್ತಾ ಸ್ವಯಂ ಉದ್ಯೋಗ ಮತ್ತು ಉದ್ಯಮಿಗಳಾಗಿ ಸಮಾಜಕ್ಕೆ ಮಾದರಿಯ ಪ್ರಜೆಗಳಾಗಿ ಬದುಕಬೇಕು ಮತ್ತು ಸಮಾಜದ ಋಣವನ್ನು ನಾವು ನೀವೆಲ್ಲರೂ ತೀರಿಸಬೇಕೆಂದು ತಿಳಿಸಿದರು.
ಈ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆರಿಯರ್ ಮೇಳಕ್ಕೆ ಸುಮಾರು 25 ಇಲಾಖೆ / ಸಂಘ ಸಂಸ್ಥೆಗಳು ಭಾಗವಹಿಸಿದ್ದವು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಈ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಚಂದ್ರಶೇಖರ್, ಶ್ರೀಮತಿ ನಾಗಮ್ಮ. ಉಪನಿರ್ದೇಶಕರು ಪದವಿಪೂರ್ವ ಕಾಲೇಜ್ ಮೈಸೂರು. ಮೈಸೂರು ಜಿಲ್ಲೆಯ ಶಿಕ್ಷಣ ಇಲಾಖೆಯ ಬೋಧಕೇತರ ಸಂಘದ ಅಧ್ಯಕ್ಷರಾದ ಶ್ರೀ ರೇವಣ್ಣ. ಶ್ರೀ ಮಧು ಲೆಕ್ಕಾಧಿಕ್ಷಕರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಕೆ ವಿ ಸುರೇಶ್ ಡಯಟ್ ನ ಹಿರಿಯ ಉಪನ್ಯಾಸಕರು / ಉಪನ್ಯಾಸಕರು/ ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು. ಪ್ರಸ್ತಾವಿಕ ನುಡಿಯನ್ನು ನಂಜುಂಡ ಆರಾಧ್ಯರು ಮಾಡಿದರು.
ಸ್ವಾಗತವನ್ನು ಹಿರಿಯ ಉಪನಾಷಕರಾದ ಶ್ರೀ ನಾಗೇಂದ್ರ ಅವರು ಮಾಡಿದರು.
ಕಾರ್ಯ ಕ್ರಮ ನಿರೂಪಣೆಯನ್ನು ಹನೂರು ಚನ್ನಪ್ಪನವರು ನಿರ್ವಹಿಸಿದರು. ವಂದನಾರ್ಪಣೆಯನ್ನು ಶ್ರೀಮತಿ ಗಾಯಿತ್ರಿ ಉಪನ್ಯಾಸಕರು ನೆರವೇರಿಸಿದರು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.





