News

”   ಮೂರು ವರ್ಷದ ಹಿಂದೆ 26 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಕಾಂಗ್ರೆಸ್ ಪಕ್ಷದ  ಶಾಸಕ ಡಿ ರವಿಶಂಕರ್ ಮತ್ತು ಅವರ ತಂದೆ ಎಂಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡ ಸ್ವಾಮಿಗೌಡರ ವಿರುದ್ಧ ಬಂಡೆದ್ದ ಕಾಂಗ್ರೆಸ್ಸಿನ ಕಾರ್ಯಕರ್ತರು ಸಾಗರೋಪಾದಿಯಲ್ಲಿ ಜೆಡಿಎಸ್ ಸೇರ್ಪಡೆ”     

 ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಜ.28:- ಚುನಾವಣೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಶಾಸಕ ಡಿ ರವಿಶಂಕರ್ ಮತ್ತು ಅವರ ತಂದೆ ದೊಡ್ಡ ಸ್ವಾಮಿಗೌಡರ ವಿರುದ್ಧ ಬಂಡಿದ್ದ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಕುರುಬ ಸಮುದಾಯದ ಮುಖಂಡರು ದಲಿತ ಮುಖಂಡರು ಸೇರಿದಂತೆ ಸೂಕ್ಷ್ಮತೆ ಸೂಕ್ಷ್ಮ ಸಮಾಜದ ಮುಖಂಡರು ಜೆಡಿಎಸ್ ಪಕ್ಷ ಸೇರಿಕೊಳ್ಳುವ ಮೂಲಕ ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿಗಿರುವಂತೆ ಕಾಣುತ್ತಿದೆ.

ಶಾಸಕ ಡಿ ರವಿಶಂಕರ್ ಅತ್ಯಂತ ಹೆಚ್ಚು ಬಹುಮತಗಳ ಮೂಲಕ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲಿ ಏಕೈಕ ಕುರುಬ ಶಾಸಕರಾದ ಡಿ ರವಿಶಂಕರ್ ಸಿದ್ದರಾಮಯ್ಯನವರ ಮೂಲಕ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಎಲ್ಲಾ ಸಮುದಾಯಗಳನ್ನು ಜೊತೆಗೂಡಿ ಕರೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಆಶಾ ಭಾವನೆಯಲ್ಲಿದ್ದ ಕ್ಷೇತ್ರದ ಜನತೆ ನಿರಾಸೆಯಾಗಿದ್ದು ಅಧಿಕಾರ ಒಂದು ಕುಟುಂಬದಲ್ಲಿ ಕೇಂದ್ರೀಕೃತವಾಗಿದ್ದು ಹಿರಿಯ ಕಾಂಗ್ರೆಸ್ ಮುಖಂಡರು ಬುದ್ಧಿಜೀವಿಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಮುನ್ಸೂಚನೆ ನೀಡುತ್ತಿದ್ದಾರೆ.

ಇದರ ಭಾಗವಾಗಿ ಕುರುಬ ಸಮುದಾಯದ ಬಡಕನ ಕೊಪ್ಪಲು ಗ್ರಾಮದಲ್ಲಿ ಸುಮಾರು 45ಕ್ಕೂ ಹೆಚ್ಚು ಮುಖಂಡರು ಮಾಜಿ ಸಚಿವ ಸಾರಾ ಮಹೇಶ್ ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ರವರ ಪುತ್ರ ಅಮಿತ್ ವಿ ದೇವರಟ್ಟಿ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ಕುರುಬ ಸಮುದಾಯದ ಶಾಸಕ ಡಿ ರವಿಶಂಕರ್ ಮತ್ತು ಅವರ ತಂದೆ ಎಂ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡ ಸ್ವಾಮಿ ಗೌಡರಿಗೆ ಸೆಡ್ಡು ಹೊಡೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಅಡಗೂರು ಹೆಚ್ ವಿಶ್ವನಾಥ್ ರವರ ಪುತ್ರ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಮಿತ್ ವಿ ದೇವರಟ್ಟಿ ಇಡೀ ರಾಜ್ಯದಲ್ಲಿ ಒಬ್ಬರು ಶಾಸಕರಾಗಿ ಅಧಿಕಾರ ಚಲಾಯಿಸಿದರೆ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಜನ ಶಾಸಕರಾಗಿ ಅಧಿಕಾರವನ್ನು ಚಲಾಯಿಸುತ್ತಿದ್ದು ಇದು ನಮ್ಮ ಕ್ಷೇತ್ರದ ಜನತೆಯ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಮತ್ತು ಸಾಮಾನ್ಯ ಜನರು ಶಾಸಕ ಡಿ ರವಿಶಂಕರ್ ಅವರನ್ನು ನಮ್ಮ ಕೆಲಸವನ್ನು ಮಾಡಿಕೊಡಿ ಎಂದು ಕೇಳಿದರೆ ಅವರು ಕೆಸ್ತೂರು ಕೊಪ್ಪಲುನ ನಮ್ಮ ತೋಟದ ಮನೆಗೆ ಬನ್ನಿ ಅಲ್ಲಿ ನಮ್ಮ ತಂದೆಯವರ ಬಳಿ ಮಾತನಾಡಿ ಎಂದು ಹೇಳುತ್ತಾರೆ ಹಾಗಾದರೆ ಈ ಕ್ಷೇತ್ರದ ಶಾಸಕರು ಯಾರು ಎಂದು ಹೇಳಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕ ಸ್ಥಾನಕ್ಕೆ ಅಪಮಾನ ಮಾಡಿರುವ ಇಂಥ ಶಾಸಕರ ಅವಶ್ಯಕತೆ ಈ ಕ್ಷೇತ್ರಕ್ಕೆ ಇದೇಯೇ ಎಂದು ಪ್ರಶ್ನಿಸಿದರು.

ರಾಜಕಾರಣ ಏನೇ ಇರಲಿ 15 ವರ್ಷ ಶಾಸಕರಾಗಿದ್ದ ಸಾರಾ ಮಹೇಶ್ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮಹಿಳಾ ಸಂಘಗಳಿಗೆ ಸಹಾಯಧನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣ ಸಹಾಯ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಆಸ್ಪತ್ರೆಗಳಿಗೆ ಹಣ ಸಹಾಯ ಬಡ ಅಂಗವಿಕಲ ಮಕ್ಕಳಿಗೆ ವಿಮಹಣ ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ಮತ್ತು ಮೃತರಾದ ಕುಟುಂಬಗಳಿಗೆ ಇಪ್ಪತೈದು ಸಾವಿರ ಸಹಾಯಧನ ಬರಗಾಲ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿ ಮೂರು ತಿಂಗಳ ಉಚಿತ ಪಡಿತರ ಆಹಾರ ಸ್ವತಃ ಗಾರ್ಮೆಂಟ್ಸ್ ತೆರೆದು ಮಹಿಳೆಯರಿಗೆ ಉದ್ಯೋಗ ಸೇರಿದಂತೆ ಇನ್ನಿತರ ಸಹಾಯವನ್ನು ಮಾಡುವ ವೇಳೆ ಯಾವುದೇ ಜಾತಿ ಧರ್ಮ ಯಾವ ಗ್ರಾಮ ಎಂದು ಕೇಳದೆ ಎಲ್ಲರಿಗೂ ಸಹಾಯ ಮಾಡಿದ್ದಾರೆ ಎಂಬುದನ್ನು ಮರೆಯುವಂತಿಲ್ಲ ಎಂದು ಸ್ಮರಿಸಿದರು.

ಚುನಾವಣೆಯಲ್ಲಿ ಕಾಲು ಕೈ ಕಟ್ಟುವ ಮೂಲಕ ಅನುಕಂಪದಲ್ಲಿ ಶಾಸಕರಾದ ಡಿ ರವಿಶಂಕರ್ ಅವರು ಸಾರಾ ಮಹೇಶ್ ಅವರು ಹಾಕಿಕೊಟ್ಟ ಯಾವುದಾದರೂ ಒಂದೇ ಒಂದು ಯೋಜನೆಯನ್ನು ಮುಂದುವರಿಸಿದ್ದಾರೆಯೇ ಅಥವಾ ವಾರದಲ್ಲಿ ಒಂದು ದಿನ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಮಾಡಿದ್ದಾರೆಯೇ ಅವರ ಅಧಿಕಾರದಲ್ಲಿ ಮಾಡಿರುವುದು ಒಂದೇ ಒಂದು ಅವರ ತಂದೆಯನ್ನು ಎಂಡಿಸಿಸಿ ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಿರುವುದು ಮತ್ತು ವರ್ಗಾವಣೆ ಮಾಡಿಸಿರುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವನ್ನು ಮಾಡಿಲ್ಲ ಎಂದು ತಿಳಿಸಿದರು.

ಆದರೆ ನನ್ನ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಈಗ ಜೆಡಿಎಸ್ ಸೇರುತ್ತಾರೆ ಚುನಾವಣೆಯಲ್ಲಿ ಕಾಂಗ್ರೆಸಿಗೆ ಮತ್ತೆ ಮರಳುತ್ತಾರೆ ಎಂಬ ಸಾರ್ವಜನಿಕರ ಮಾತಿಗೆ ಆಹಾರವಾಗಬೇಡಿ ನೀವು ಮತ್ತು ನಿಮ್ಮ ಕುಟುಂಬದವರು ಗಟ್ಟಿಯಾಗಿ ನಿಲ್ಲುವ ಮೂಲಕ ಜೆಡಿಎಸ್ ಗೆ ಬೆಂಬಲಿಸಿ ನಾನು ನನ್ನ ಕುಟುಂಬ ನಿಮ್ಮ ಜೊತೆಯಲ್ಲಿ ಇರುತ್ತೇವೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ಎಚ್ ಡಿ ಕುಮಾರಸ್ವಾಮಿ ಸಚಿವರಾಗಿ ಸಾರಾ ಮಹೇಶ್ ಆಗುವುದರಿಂದ ನಿಮಗೆ ಸಹಾಯ ಸಹಕಾರ ಕೊಡಿಸುವ ಜವಾಬ್ದಾರಿ ನನ್ನದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಮಾಜಿ ಸಚಿವ ಸಾರಾ ಮಹೇಶ್ ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಜಾತಿ ಮತ್ತು ಯಾವುದೇ ಪಕ್ಷಪಾತ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಮತ್ತು ನನ್ನಲ್ಲಿಗೆ ಸಹಾಯ ಕೇಳಿ ಬಂದವರಿಗೆ ನನ್ನಿಂದಾಗುವ ಸಹಾಯವನ್ನು ಮಾಡಿದ್ದೇನೆ ನನ್ನನ್ನು ನಂಬಿ ಬರುತ್ತಿರುವ ನಿಮ್ಮನ್ನು ಗೌರವಹಿತವಾಗಿ ನಡೆಸಿಕೊಳ್ಳುವ ಜೊತೆಗೆ ಒಳ್ಳೆಯ ಸ್ನಾನಮಾನವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆಯ ಸಮಯದಲ್ಲಿ ಅಪಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡರು ಈಗೇಕೆ ಮಾಡುತ್ತಿಲ್ಲ ನಾವು ನೀಡಿದ ಕುಕ್ಕರ್ ಸ್ಪೋಟವಾಗಿದೆ ಎಂದು ಹೇಳುತ್ತಿದ್ದರು ಮೂರು ವರ್ಷಗಳಿಂದ ಒಂದೇ ಒಂದು ಕುಕ್ಕರ್ ಸ್ಪೋಟಗೊಂಡಿಲ್ಲಏಕೆ ಮೃತ ಕುಟುಂಬಗಳಿಗೆ ಸೀರೆ ಅರಿಶಿಣ ಕುಂಕುಮ ಮತ್ತು ಮದುವೆ ಸೇರಿದಂತೆ ಇನ್ನಿತರ ಶುಭ ಕಾರ್ಯಗಳಿಗೆ ಸಹಾಯ ಮಾಡುತ್ತಿರುವ ನನ್ನನ್ನು ಅಪಪ್ರಚಾರ ಮಾಡುವ ಮೂಲಕ ಮತವನ್ನು ಪಡೆದ ಕಾಂಗ್ರೆಸ್ಸಿನ ಶಾಸಕರು ಈಗ ಮಾಡುತ್ತಿರುವುದೇನು ಇದಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ಈ ಕ್ಷೇತ್ರದ ಜನರೇ ನೀಡುತ್ತಾರೆ ಎಂದು ತಿಳಿಸಿದರು.

ನಾನು ಯಾರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಒತ್ತಾಯ ಮಾಡುತ್ತಿಲ್ಲ ಚುನಾವಣೆ ಹತ್ತಿರ ಬರಲಿ ಎಂದು ಹೇಳಿದರು ಇಲ್ಲ ಈಗಲೇ ನಾವು ಪಕ್ಷವನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ ನಮಗೆ ಕಾಂಗ್ರೆಸ್ಸಿನಲ್ಲಿ ಉಸಿರು ಕಟ್ಟುವ ವಾತಾವರಣವಿದೆ ಅಪ್ಪ ಮಕ್ಕಳ ರಾಜಕೀಯ ಮತ್ತು ದ್ವೇಷದ ರಾಜಕೀಯಕ್ಕೆ ಬೇಸತ್ತು ನಾವು ಜೆಡಿಎಸ್ ಸೇರುತಿದ್ದೇವೆ ಎಂದು ಸೇರುತ್ತಿರುವ ನಿಮ್ಮನ್ನು ಸ್ವಾಗತಿಸುವುದಾಗಿ ತಿಳಿಸಿದರು.

 ಕಾರ್ಯಕ್ರಮದಲ್ಲಿ ತಾಲೂಕ್ ಪಂಚಾಯತಿ ಮಾಜಿ ಅಧ್ಯಕ್ಷ ನಾಗಣ್ಣ ಹಂಪಾಪುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಗುರುಪ್ರಸಾದ್ ಬಡಕನ ಕೊಪ್ಪಲು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಜಲೇಂದ್ರ ರವಿಕುಮಾರ್ ಮತ್ತು ಜೆ ಡಿ ಎಸ್ ಪಕ್ಷ ಸೇರ್ಪಡೆಗೊಂಡ 

ಬಡಕನಕೊಪ್ಪಲು ಗ್ರಾಮದ ಕುರುಬ ಸಮಾಜದ ಮುಖಂಡರಾದ ಪ್ರಮೋದ್, ಪ್ರಸನ್ನ, ಗೋವಿಂದ, ಕಿರಣ್, ಮಹದೇವ, ಚಂದನ್, ಮಹೇಂದ್ರ, ಸಂಜಯ್, ರಾಜೇಶ್, ವಿನಯ್, ಪ್ರತಾಪ್, ಜಯರಾಮ್, ಮಹೇಶ್, ಅಕ್ಕಮಹದೇವಿ, ಮಂಜು, ಕುಮಾರ್, ಪ್ರದೀಪ್, ಶ್ರೀನಿವಾಸ್, ನಾಗೇಗೌಡ, ಜಯಪಾಲ, ಪುಟ್ಟೇಗೌಡ, ರೇಖಾ, ರುದ್ರೇಶ್, ಸಾಗರ್, ಬಸವ, ಗಿರೀಶ್, ದೇವರಾಜು, ಪ್ರವೀಣ, ಬಿ.ಎಸ್.ಮಹದೇವ, ಬಿ.ಎಸ್.ಮಹದೇವ, ಬಿ.ಕೆ.ಪ್ರಮೋದ, ಕಾರ್ತಿಕ್, ಮೋಹನ್, ಕೀರ್ತಿರಾಜ್, ಶಿವು, ಮಲ್ಲೇಗೌಡ, ರಾಘವ, ವಿಶ್ವನಾಥ, ಬಿ.ಎನ್.ಚೇತನ್, ಬಿ.ಆರ್.ಮಹೇಶ, ಅಶೋಕ, ಯೋಗೇಶ, ಕಾಂತರಾಜು, ನಾಗರಾಜು, ದರ್ಶನ್, ನಿತಿನ್, ಪುಟ್ಟೇಗೌಡ, ಲಂಕೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.