
ಮೈಸೂರು : ಮಾ. 12 : ಕಿಡ್ನಿಯ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕರೆ ನೀಡಿದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂತರರಾಷ್ಟ್ರೀಯ ಕಿಡ್ನಿ ದಿನದ ಅಂಗವಾಗಿ ಮೈಸೂರು ಆರ್ಗನೈಜೇಷನ್ ಆಫ್ ಜೈನೈಟೋ ಯೂರಿನರಿ ಸರ್ಜನ್ಸ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಾಕತಾನ್ ಮತ್ತು ಸೈಕ್ಲೋತಾನ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯವೇ ಆಸ್ತಿ ಇದ್ದ ಹಾಗೆ ಆದ್ದರಿಂದ ಪ್ರತಿಯೊಬ್ಬರು ಆರೋಗ್ಯವನ್ನು ಕಡೆಗಣಿಸದೆ ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಕ್ಯಾನ್ಸರ್, ಕಿಡ್ನಿ, ಹೃದಯ ಸಮಸ್ಯೆ ಹಾಗೂ ಇತರೆ ಯಾವುದೇ ಸಮಸ್ಯೆ ಇದ್ದರೂ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಬೇಗ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಇದರಿಂದ ಜನರು ಜಾಗೃತರಾಗಿ ಆರೋಗ್ಯವಂತರಾಗಿರಲು ಅನುಕೂಲವಾಗುತ್ತದೆ ಎಂದರು.

ಸೆಂಟ್ ಜೋಸೆಫ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಎಕ್ಸ್.ಎ. ಡಿಸೋಜ ಮಾತನಾಡಿ ಕಿಡ್ನಿ ಒಮ್ಮೆ ಹಾನಿಗೊಳಗಾದರೆ ಜೀವನಪರ್ಯಂತ ತೊಂದರೆಯಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಸಕ್ಕರೆಕಾಯಿಲೆ ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಕಿಡ್ನಿಯನ್ನು ಕಾಪಾಡಿಕೊಳ್ಳಬಹುದು ಎಂದರು.
ಅಪೊಲೋ ಆಸ್ಪತ್ರೆಯ ಹಿರಿಯ ನೆಪ್ರೋಲಜಿಸ್ಟ್ ಆದ ಡಾ.ಶ್ರೀನಿವಾಸ್ ನಲ್ಲೂರ್ ಮಾತನಾಡಿ ಸಾರ್ವಜನಿಕರು ಪ್ರತಿ ವರ್ಷ ಬಿ.ಪಿ., ಕ್ರಿಯಾಟಿನ್ ಟೆಸ್ಟ್, ಯೂರಿನ್ ಟೆಸ್ಟ್, ಸ್ಕಾö್ಯನ್ ಟೆಸ್ಟ್ಗಳನ್ನು ಮಾಡಿಸಿಕೊಂಡರೆ ಬಹುತೇಕ ಕಿಡ್ನಿ ತೊಂದರೆ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು. ಕಿಡ್ನಿ ತೊಂದರೆ ವೈಫಲ್ಯದಿಂದ ಕೊನೆಹಂತಕ್ಕೆ ಹೋದಾಗ ಡಯಾಲಿಸೀಸ್‌ಗೆ ಹೋಗುತ್ತೇವೆ. ಕಿಡ್ನಿ ತೊಂದರೆಗೆ ಬಹುತೇಕ ಉತ್ತಮ ಚಿಕಿತ್ಸೆಗಳು ಬರುತ್ತಿವೆ. ಕಿಡ್ನಿಯಲ್ಲಿ ಜಾಗೃತರಾಗಿರಿ ಎಂದರು.
ಹಿರಿಯ ವೈದ್ಯರಾದ ಡಾ|| ಪ್ರಕಾಶ್ ಪ್ರಭು ಮಾತನಾಡಿ ಎಲ್ಲಾ ಕಿಡ್ನಿ ಕಾಯಿಲೆಗಳಿಗೆ ಹೆಚ್ಚು ನೀರು ಸೇವಿಸುವುದು ಪರಿಹಾರವಲ್ಲ. ಕಿಡ್ನಿ ವೈಪಲ್ಯದ ರೋಗಿಗಳಿಗೆ ಸೀಮಿತವಾದ ದ್ರವ ಪದಾರ್ಥ ಆಹಾರ ಸೇವನೆ, ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಂಡರೆ ಕಿಡ್ನಿ ಸುರಕ್ಷಿತವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಜೆನಿಟೋಯೂರಿನರಿ ಸರ್ಜನ್‌ಗಳ ಸಂಘದ ಅಧ್ಯಕ್ಷ ಡಾ. ಜೆ.ಬಿ. ನರೇಂದ್ರ, ಕಾರ್ಯದರ್ಶಿ ಡಾ. ಪ್ರಸಾದ್, ಹೆಚ್.ಎಲ್., ಹಿರಿಯ ವೈದ್ಯರಾದ ಡಾ|| ಮಾದಪ್ಪ ಕೆ.ಎಂ., ಡಾ. ದಿನೇಶ್, ಡಾ. ಅಮೃತ್‌ರಾಜ್, ಜಿ. ಗೌಡ, ಡಾ. ಕುಮಾರ್‌ರಾಜ್‌ಅರಸ್, ಡಾ. ಪ್ರಕಾಶ್ ಹೆಚ್.ಎಸ್., ಡಾ. ಶಶಿಕಿರಣ್, ಸದಸ್ಯರಾದ ಡಾ. ಅಭಿಜಿತ್, ಡಾ. ಸುಹಾಸ್, ಖಜಾಂಚಿ ಡಾ|| ಉಮೇಶ್ ಕೆ. ಮತ್ತಿತರರು ಹಾಜರಿದ್ದರು.





