News

ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಗಾಗಿ ಕೂಡಲೇ ಮೂಗನಹುಂಡಿ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹ : ಜಿ ಟಿ ದೇವೇಗೌಡ

ಬೋರ್ ವೆಲ್ ಗಳನ್ನು ಸಾವಿರ ಅಡಿ ಆಳ ಕೊರೆದರು ಅಂತರ್ಜಲವಿಲ್ಲದೆ ನೀರು ಸಿಗುತ್ತಿಲ್ಲ, ಜಾನುವಾರು ಗಳಿಗೆ ಕುಡಿಯಲು ನೀರಿಲ್ಲ ಆದ್ದರಿಂದ ತುರ್ತಾಗಿ ಮೂಗನಹುಂಡಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನ ಗೊಳಿಸುವಂತೆ ಸಚಿವರಾದ ಶ್ರೀ ಬೋಸರಾಜ್ ರವರಲ್ಲಿ ಶಾಸಕರಾದ ಜಿ ಟಿ ದೇವೇಗೌಡರು ಮನವಿ ಮಾಡಿದರು… ಇಂದು ವಿಧಾನಸಭೆ ಅಧಿವೇಶನ ದಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಶಾಸಕರು, ನಮ್ಮದು ಖುಷ್ಕಿ ಪ್ರದೇಶವಾಗಿದ್ದು ಯಾವಾಗಲು ಮಳೆ ಬರವುದಿಲ್ಲ..

ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕೆ ಆರ್ ಎಸ್ ಆಣೆಕಟ್ಟಿನಿಂದ ಬಹಳಷ್ಟು ಹಳ್ಳಿಗಳು ಮುಳುಗಡೆಯಾಗಿರುತ್ತವೆ.. ಕೆ ಆರ್ ಎಸ್ ನದಿ ತುಂಬಿದೆ..  ಆದರೆ ಕೆರೆಗಳಲ್ಲಿ ನೀರಲ್ಲದೆ ಅಂತರ್ಜಲ ಕುಸಿದ್ದಿದ್ದು ಮೈಸೂರು ತಾಲ್ಲೂಕಿನ ಮೂಗನಹುಂಡಿ ಕಮರಹಳ್ಳಿ, ಅನಗಳ್ಳಿ, ದೊಡ್ಡಮಾರಗೌಡನಹಳ್ಳಿ, ಮಾದಳ್ಳಿ, ನುಗ್ಗಳ್ಳಿ, ಶೆಟ್ಟಿನಾಯಕನಹಳ್ಳಿ, ಮೈದನಹಳ್ಳಿ, ಕೆ ಜಿ ಮೆಲ್ಲಹಳ್ಳಿ, ಕುಮಾರಬೀಡು ಹಳ್ಳಿಗಳ 13 ಕೆರೆ ಹಾಗೂ ಹುಣಸೂರು ತಾಲ್ಲೂಕು, ಬಿಳಿಕೆರೆ ಹೋಬಳಿಯ ಮನುಗನಹಳ್ಳಿ, ಮೂಗನಹಳ್ಳಿ ಕಟ್ಟೆ, ಅಂಕನಹಳ್ಳಿ, ಹಂದನಹಳ್ಳಿ, ದೊಡ್ಡ ಬೀಚನಹಳ್ಳಿ, ದಲ್ಲಾಳ್ ಕೊಪ್ಪಲು ಗ್ರಾಮಗಳ 07 ಕೆರೆ ಸೇರಿದಂತೆ ಒಟ್ಟು 20 ಕೆರೆ ಗಳಿಗೆ ಕೆ ಆರ್ ಎಸ್ ನಿಂದ ನೀರು ತುಂಬಿಸಲು, ರೂ. 75 ಕೋಟಿ ಮೊತ್ತದ ಪಟ್ಟಿಯನ್ನು ತಯಾರಿಸಿ, ಸರ್ಕಾರಕ್ಕೆ ಕಳುಹಿಸಿದ್ದು, ಮಾನ್ಯ ಮುಖ್ಯಮಂತ್ರಿಗಳಿಗೆ ಈ ಗ್ರಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿರುತ್ತೇನೆ,  ಸಚಿವರಾದ ನಿಮ್ಮ ಮನೆಗೆ, ಕಛೇರಿಗೆ ಎರಡು ಬಾರಿ ಬಂದು ಮನವಿ ಮಾಡಿದ್ದೆ, ಇದರಿಂದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಮಾಡುತ್ತೇವೆ ಎಂದು ಹೇಳಿದ್ದಿರಿ, ಆದರೆ ಕಾರಣಾಂತರಗಳಿಂದ ಆಗಲಿಲ್ಲ, ಇದರಿಂದ 30 ಗ್ರಾಮಗಳಿಗೆ ಅನುಕೂಲವಾಗುತ್ತೆ ಆದ್ದರಿಂದ ಈ ಸಲವಾದರೂ ಸಚಿವ ಸಂಪುಟ ಸಭೆಗೆ ಮಂಡಿಸಿ ಅನುಮೋದನೆ ದೊರಕಿಸಿಕೊಟ್ಟು ತುರ್ತಾಗಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು…. ಸಚಿವರು ಉತ್ತರಿಸುತ್ತ ಈ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸಿ, ಆದಷ್ಟು ಬೇಗ ಏತ ನೀರಾವರಿ ಯೋಜನೆ ಅನುಷ್ಠಾನ ಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು…

Leave a Response