ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ : ಜಿ.ಪಂ. ಮಾಜಿ ಸದಸ್ಯ ಅಮಿತ್ ವಿ ದೇವರಟ್ಟಿ

ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಫೆ.11:- ಜೆಡಿಎಸ್ ಪಕ್ಷದ ವತಿಯಿಂದ ಮತದಾರ ಪರಿಷ್ಕರಣೆ ಮತ್ತು ಬೂತ್ ಮಟ್ಟದ ಏಜೆಂಟ್ರುಗಳ ನೇಮಕ ನೇಮಕ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ವಿ ದೇವರೆಟ್ಟಿ ಮಾತನಾಡುತ್ತಿರುವುದು.
ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಯೊಂದು ಬೂತ್ ಮಟ್ಟದಲ್ಲಿ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವವರು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮೃತರಾದವರು ಗ್ರಾಮದಿಂದ ಹೊರ ಹೋಗಿರುವವರು ಅವರುಗಳನ್ನು ಮತದಾರ ಪಟ್ಟಿಯಿಂದ ಕೈ ಬಿಡಿಸಿ ಮತ್ತು ಹೊಸದಾಗಿ 18 ವರ್ಷ ತುಂಬಿರುವ ಯುವಕರನ್ನು ಸೇರಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ವಿ ದೇವರಟ್ಟಿ ಮಾಹಿತಿ ನೀಡಿದರು.

ಮತದಾರರ ಪರಿಷ್ಕರಣೆ ವಿಚಾರವಾಗಿ ಬಿ ಎಲ್ಎ 2 ನೇಮಕಾತಿಗಾಗಿ ವಕೀಲ ಅಂಕನಹಳ್ಳಿ ತಿಮ್ಮಪ್ಪ ಬಿ ಎಲ್ ಎ 1 ರವರ ನೇತೃತ್ವದಲ್ಲಿ ಹಂಪಾಪುರ ಅಡಗೂರು ಹೊಸ ಅಗ್ರಹಾರ. ಅರ್ಜುನ ಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ ಮುಖಂಡರ ಸಭೆ ಮಾಡಿ ಅವರು ಮಾತನಾಡಿದರು.
ಮುಂಬರುವ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಚುನಾವಣೆಗಳು ನಡೆಯುವ ಮುನ್ಸೂಚನೆ ಇದ್ದು ಇದಕ್ಕಾಗಿ ಈಗಾಗಲೇ ರಾಜ್ಯಮಟ್ಟದಲ್ಲಿ ಪ್ರತಿಯೊಂದು ತಾಲೂಕುಗಳಲ್ಲಿಯೂ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದು ನೀವು ಸಹ ಪ್ರತಿಯೊಂದು ಗ್ರಾಮದಲ್ಲಿಯೂ ಜೆಡಿಎಸ್ ಪಕ್ಷದ ಸದಸ್ಯತ್ವವನ್ನು ಪಡೆಯುವಂತೆ ನಮ್ಮ ಕಾರ್ಯಕರ್ತರಿಗೆ ತಿಳಿ ಹೇಳಬೇಕೆಂದು ತಿಳಿಸಿದರು.
ಈಗಾಗಲೇ ನಮ್ಮ ಕ್ಷೇತ್ರದ ಮಾಜಿ ಸಚಿವರಾದ ಸಾರಾ ಮಹೇಶ್ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಸೇರಿದಂತೆ ಕಾರ್ಯಕರ್ತರು ಮುಖಂಡರು ಸೇರ್ಪಡೆಯಾಗಲು ತಯಾರಾಗಿದ್ದು ಅವರುಗಳನ್ನು ಸೇರಿಸಿಕೊಳ್ಳಲು ವರಿಷ್ಠರ ಅನುಮತಿಗಾಗಿ ಮತ್ತು ಸಮಯವನ್ನು ಕೇಳುತ್ತಿದ್ದೇವೆ ಅವರು ಅನುಮತಿ ನೀಡಿದ ತಕ್ಷಣ ಎಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಮತ್ತು ಅವರನ್ನು ಗೌರವಹಿತವಾಗಿ ನಡೆಸಿಕೊಳ್ಳಲು ನೀವು ಸಹಕರಿಸಬೇಕು ಮತ್ತು ಸಹಕಾರ ನೀಡಬೇಕು ಎಂದು ತಿಳಿಸಿದರು.
ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಮತದಾರ ಪರಿಷ್ಕರಣೆ ನೇತೃತ್ವ ವಹಿಸಿದ ಬಿ ಎಲ್ ಎ 01 ಅಂಕನಹಳ್ಳಿ ವಕೀಲ ತಿಮ್ಮಪ್ಪ ಮಾತನಾಡಿ ನನ್ನನ್ನು ನಾಲ್ಕು ಗ್ರಾಮ ಪಂಚಾಯಿತಿಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವ ಮಾಜಿ ಸಚಿವ ಸಾರಾ ಮಹೇಶಣ್ಣನವರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ನನಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವ ಜೊತೆಗೆ ನೀವು ಯಾವುದೇ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿ ತಿಳಿಸಿದರೆ ಸಾಕು ನಾನು ಬಂದು ನಿಮ್ಮ ಸಮಸ್ಯೆಯ ಬಗೆಹರಿಸುವ ಜೊತೆಗೆ ನಿಮ್ಮ ಜೊತೆಯಲ್ಲೇ ಇರುತ್ತೇನೆ ಎಂದು ತಿಳಿಸಿದರು.
ನಾವುಗಳು ಮೊದಲು ಮತದಾರ ಪಟ್ಟಿಯನ್ನು ಒಂದು ಸಲ ಪರೀಕ್ಷಿಸಿ ಅದರಲ್ಲಿ ಯಾರು ಯಾರು ಗ್ರಾಮದಿಂದ ಹೊರ ಹೋಗಿ ಬೇರೆ ಕಡೆ ಮತದಾರ ಪಟ್ಟಿಯನ್ನು ಸೇರಿಸಿಕೊಂಡು ಎರಡು ಕಡೆ ಮತದಾರರಾಗಿರುವರು ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಬೇಕು ಅನಂತರ ಮೃತರಾದವರ ಪಟ್ಟಿಯನ್ನು ಮಾಡಿಕೊಂಡು ಆ ಇಬ್ಬರನ್ನು ಕೈ ಬಿಡಿಸುವ ಜೊತೆಗೆ ಹೊಸದಾಗಿ ಸೇರಿಸುವವರನ್ನು ಸೇರಿಸುವ ಕೆಲಸವನ್ನು ಮಾಡಬೇಕು ಅಂತ ಸಂದರ್ಭದಲ್ಲಿ ಅಧಿಕಾರಿಗಳು ಸ್ಪಂದಿಸದೆ ಇದ್ದರೆ ಆಗ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೋಕ್ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರನ್ನು ನೀಡೋಣ ಎಂದು ತಿಳಿಸಿದರು.
ಅನಂತರ ನಾಲ್ಕು ಗ್ರಾಮ ಪಂಚಾಯಿತಿಗಳಲ್ಲೂ ಸಭೆ ಮಾಡಿ ಪ್ರತಿಯೊಂದು ಗ್ರಾಮ ಮತ್ತು ಭೂತಗಳ ಬಿ ಎಲ್ ಎ 2ಗಳನ್ನು ನೇಮಕ ಮಾಡಿ ಅವರಿಗೆ ಜವಾಬ್ದಾರಿಯನ್ನು ನೀಡಿದರು ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್. ಯುವ ಜೆಡಿಎಸ್ ಅಧ್ಯಕ್ಷ ಹೊಸ ಹೊಸ ಅಗ್ರಾಹರ ಯೋಗೇಶ್ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಕಗ್ಗೆರೆ ಕುಚೆಲ್ಲ ಮಾಜಿ ತಾಲೂಕ್ ಪಂಚಾಯಿತಿ ಅಧ್ಯಕ್ಷ ನಾಗಣ್ಣ ಹಂಪಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಗುರುಪ್ರಸಾದ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜಣ್ಣ. ಮುಖಂಡರುಗಳಾದ ಮನೋಹರ ಸಂಗಪ್ಪ ಬಾಲಾಜಿ. ಉಪಸ್ಥಿತರು.



