
ಅಭಿವೃದ್ಧಿಗೆ ಹಣವಿಲ್ಲ ಎನ್ನುವುದು ರಾಜಕೀಯ ನಾಟಕ: ಸಚಿವ ವೆಂಕಟೇಶ್ ತಿರುಗೇಟು”
ವರದಿ:ರವಿಚಂದ್ರ ಬೂದಿತಿಟ್ಟು.
ಪಿರಿಯಾಪಟ್ಟಣ :- ಬಿಜೆಪಿ ಮತ್ತು ಜೆಡಿಎಸ್ ನವರು ಕಾಂಗ್ರೆಸ್ ಸರ್ಕಾರ ಪಾಪರ್ ಸರ್ಕಾರ ಅವರ ಬಳಿ ಅಭಿವೃದ್ಧಿ ಕಾಮಗಾರಿ ನಡೆಸಲು ಹಣವಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಾರೆ , ಪಪರ್ ಸರ್ಕಾರ ಆಗಿದ್ದರೆ ಕೋಟ್ಯಂತರರೂ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿತ್ತ ಎಂದು ರೇಷ್ಮೆ ಹಾಗೂ ಪಶುಪಾಲನ ಸಚಿವ ಕೆ ವೆಂಕಟೇಶ್ ಹೇಳಿದರು.
ತಾಲೂಕಿನ ಮಹದೇಶ್ವರ ಮಠದ ಕೊಪ್ಪಲು ಆನಿವಾಳು,ರಾಜನ ಬಿಳಗುಲಿ,ಗಂಗನಕುಪ್ಪೆ ಆವರ್ತಿ, ಸುರಗಹಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮುಂಬರುವ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ಕಾರ್ಯಕರ್ತರು ತಯಾರಿ ನಡೆಸಿಕೊಳ್ಳಬೇಕು ಸರ್ಕಾರ ಬಡವರಿಗಾಗಿ ಏನೇನು ಕೆಲಸಗಳನ್ನು ಮಾಡಿದೆ ಎಂಬುದನ್ನು ಗ್ರಾಮಸ್ಥರೆಲ್ಲರಿಗೂ ಮನದಟ್ಟು ಮಾಡಿ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದರು. ನಾನು ಸ್ಥಳೀಯ ಪ್ರವಾಸ ಕೈಗೊಂಡ ವೇಳೆಯ ಸಮಯದಲ್ಲಿ ಪ್ರತಿ ಗ್ರಾಮಕ್ಕೆ ಏನಾದರು ಒಂದು ಕೊಡುಗೆ ಇದ್ದೇ ಇದೆ ಗ್ರಾಮದಲ್ಲಿ ಮೂಲ ಭೂತ ಸಮಸ್ಯೆಗಳು,ದೇವಾಲಯ, ಸಮುದಾಯ ಭವನ,ಸ್ಮಾರಕ ನಿರ್ಮಾಣ,ಶಾಲೆ,ಬಸ್ ಸಂಚಾರ,ಆಟೋಟಕ್ಕೆ ಜಾಗ ,ಸ್ಮಶಾನಕ್ಕೆ ಜಾಗ,ಇವೆಲ್ಲಾ ಕಲ್ಪಿಸಿ ಅಭಿವೃದ್ಧಿ ಗೊಳಿಸಿದರು ದಿನೇ ದಿನೇ ಬೇಡಿಕೆ ಮಾತ್ರ ಕಡಿಮೆಯಾಗುತ್ತಿಲ್ಲ.ಈ ಹಿಂದೆ ಪ್ರತಿಯೊಂದು ಬೇಡಿಕೆಗೆ ಅರ್ಜಿ ಹಾಕುತ್ತಿದ್ದ ಜನ ಸಾಮಾನ್ಯರು ಈಗ ನೇರವಾಗಿ ಬೇಡಿಕೆ ಹೊಡ್ದುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರು ತಕರಾರು ಮಾಡಿದರೆ ಕಾಮಗಾರಿ ಸ್ಥಗಿತ :ತಾಲೂಕಿನ ಗಂಗನಕುಪ್ಪೆ ಗ್ರಾಮದ ಕೆಂಪುಕೆರೆ ಕೋಡಿ ದುರಸ್ಥಿಕರಣ ನೆಡೆಯುತ್ತಿದ್ದೂ,ಗ್ರಾಮಸ್ಥರು ವಾಸ್ತವವಿರುವ ಅಳತೆ ಮಟ್ಟಕ್ಕಿಂತ ಒಂದು ಅಡಿ ಕೆಳಗಿಳಿಸಿ ಇಲ್ಲವಾದರೆ ನಮ್ಮ ಜಮೀನುಗಳಿಗೆ ನೀರು ಶೇಖರಣೆಯಾಗಿ ಬೇಸಾಯಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ಸಚಿವರ ಮುಂದೆ ಸಮಸ್ಯೆಯನ್ನು ತೋಚಿಕೊಂಡಿದ್ದಕ್ಕೆ ಹಾರಂಗಿ ಎಇಇ ಗೋಕುಲ್ ಮಾತನಾಡಿ ಈಗಾಗಲೇ ಕೆಂಪು ಕೆರೆಯ ಅಸ್ತಿತ್ವದಲ್ಲಿರುವ ಕೋ ಕೋಡಿಯಾಗಿದ್ದು ಅಚ್ಚುಕಟ್ಟು ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಸರ್ವೇಯಾದ ಬಳಿಕವಷ್ಟೇ ಕೋಡಿ ಕಾಮಗಾರಿ ಮಾಡಲಾಗುತ್ತಿದೆ.ಆದರೆ ಗ್ರಾಮಸ್ಥರು ವಾಸ್ತವ ಅರಿಯದೆ ಕೋಡಿ ಅಳತೆ ಕಡಿಮೆ ಮಾಡಲು ಹೇಳುತ್ತಿದ್ದಾರೆ ಎಂದು ಸಚಿವರ ಮುಂದಿಟ್ಟರು.
ತಾಲೂಕಿನ ಗ್ರಾಮಗಳ ಅಭಿವೃದ್ಧಿಗಾಗಿ ಅನುದಾನದಡಿಯಲ್ಲಿ ಹಣ ಮಂಜೂರು ಮಾಡಿಸಿದರೂ ಕಾಮಗಾರಿ ನೆಡೆಯುವ ವೇಳೆ ಗ್ರಾಮಸ್ಥರು ತಂಟೆ ತಕರಾರು ತೆಗೆದರೆ ಕೆರೆ ಕೋಡಿ ಕಾಮಗಾರಿ ಸ್ಥಗಿತಗೊಳ್ಳುತ್ತದೆ. ಕಾಮಗಾರಿ ನೆಡೆಯುವ ವೇಳೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಸುಖಾ ಸುಮ್ಮನೆ ಕೂಗಡಿದರೆ ಸಮಸ್ಯೆಗಳು ಬಗೆ ಹರಿಯುವುದಿಲ್ಲ ಬದಲಾಗಿ ಗ್ರಾಮದ ಎಲ್ಲರೂ ಒಗ್ಗಟ್ಟಾಗಿ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದರು ಹಾಗೂ ಕೆಂಪು ಕೆರೆಯ ಸರ್ವೇ ಕಾರ್ಯವನ್ನು ಆದಷ್ಟು ಬೇಗ ಮುಗಿಸಿ ಕಾಮಗಾರಿಗೆ ಅನುವು ಮಾಡಿಕೊಡಿ ಎಂದು ತಹಸೀಲ್ದಾರ್ ನಿಸರ್ಗ ಪ್ರಿಯಾಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್,ತಹಸೀಲ್ದಾರ್ ನಿಸರ್ಗ ಪ್ರಿಯಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಕೃಷಿ ಇಲಾಖೆ ಅಧಿಕಾರಿ ಕುಸುಮ, ಸಮಾಜ ಕಲ್ಯಾಣ ಇಲಾಖೆ ಚಂದ್ರ ಶೇಖರ್,ನೀರಾವರಿ ಇಲಾಖೆ ಕೃಷ್ಣ ಮೂರ್ತಿ, ಅಭಿಯಂತರರಾದ ಯೋಗಾನಂದ,ಮಲ್ಲಿಕಾರ್ಜುನ,ದಿನೇಶ್, ಲವ ,ಸುಗಂಧ ರಾಜ, ಮುಖಂಡರಾದ
ವೀಣಾ ವೆಂಕಟೇಶ್, ರೆಹಮಾನ್ ಜಾನ್ ಬಾಬು, ಚನ್ನಕಲ್ ಶೇಖರ್, ಈಚೂರು ಲೋಕೇಶ್, ಹೊಲದಪ್ಪ, ಭೀಮಣ್ಣ, ಪುಟ್ಟರಾಜು, ಪ್ರಕಾಶ್ ಪುನಾಡಳ್ಳಿ, ಶಂಕರೇಗೌಡ, ಸುಹೇಲ್ ಪಾಷ, ಡಿ.ಟಿ.ಸ್ವಾಮಿ, ಪಿ ಡಿ ಓ ರವಿ ಕುಮಾರ್ ಸೇರಿದಂತ್ತೆ ಇತರರಿದ್ದರು.





