HOMENews

ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನಲ್ಲಿ ಜಿಐಎಸ್ ಮ್ಯಾಪಿಂಗ್ ತಂತ್ರಗಳ ಕಾರ್ಯಾಗಾರ ಆರಂಭ

ಜಿಐಎಸ್ ಕೌಶಲ್ಯ ಭವಿಷ್ಯದ ಉದ್ಯೋಗಾವಕಾಶಕ್ಕೆ ದಾರಿ: ಡಾ. ರವಿಕುಮಾರ್

ಮೈಸೂರು:- ಎಸ್.ಬಿ.ಆರ್.ಆರ್ ಮಹಾಜನ ಪ್ರಥಮದರ್ಜೆ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ರೀಸೆಂಟ್ ಟ್ರೇಂಡ್ಸ್ ಅಂಡ್ ಅಡ್ವಾನ್ಸ್ ಮ್ಯಾಪಿಂಗ್ ಟೆಕ್ನಿಕ್ಸ್ ಇನ್ ಜಿಐಎಸ್ ಎಂಬ ವಿಷಯ ಕುರಿತು ಎರಡು ದಿನಗಳ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ನಾಗಮಂಗಲದ ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವಿಕುಮಾರ್ ಎಂ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಭೌಗೋಳಿಕ ಮಾಹಿತಿ ವ್ಯವಸ್ಥೆಯ ಉಗಮ ಮತ್ತು ಅದನ್ನು ಯಾವ ರೀತಿಯಾಗಿ ವರ್ಗೀಕರಿಸಬಹುದು, ಅದರ ಘಟಕಾಂಶಗಳು ಹಾಗೂ ಅನ್ವಯ ಕ್ಷೇತ್ರಗಳು, ಅದರ ಬಳಕೆಯಿಂದ ನೈಜ ಪ್ರಪಂಚದಲ್ಲಿ ಯಾವ ರೀತಿ ಅನುಕೂಲವಾಗುತ್ತದೆ ಎಂಬುವುದನ್ನು ತಿಳಿಸಿದರು. GIS ಸಾಫ್ಟ್ ವೇರ್  ಮೂಲಕ ಅದನ್ನು ಹೇಗೆ ಅಭ್ಯಾಸ ಮಾಡಲಾಗುತ್ತದೆ ಹಾಗೂ ಈ GPS ತಂತ್ರಜ್ಞಾನದಿಂದ ಜಾಗತಿಕ ಸ್ಥಾನ ನಿರ್ಧರಣೆ ಮಾಡಲು ಹೇಗೆ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಪದವಿ ಮುಗಿದ ನಂತರ ಸರ್ಕಾರಿ ಕಛೇರಿಗಳಲ್ಲಿ, ವಿವಿಧ ಕಂಪನಿಗಳಲ್ಲಿ GIS & GPS ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಭೂಗೋಳಶಾಸ್ತ್ರದ ವಿದ್ಯಾರ್ಥಿಗಳು ಏನನ್ನು ಕಲಿಯುತ್ತೀರೋ ಅದು ಪರಿಪೂರ್ಣವಾಗಿರಬೇಕು. ಅದರ ಬಗ್ಗೆ ನಿಮಗೆ ಸಂಪೂರ್ಣ ತಿಳಿದಿರಬೇಕು. ಇಂದಿನ ಸಂದರ್ಭದಲ್ಲಿ ಒಂದು ಕಡೆ ಮಾಹಿತಿ ತಂತ್ರಜ್ಞಾನ ಹೇಗೆ ಪ್ರತಿನಿತ್ಯದ ಬದುಕಿನಲ್ಲಿ ಬೆರೆತುಹೋಗಿದೆ. ಎಂಬುವುದು ಬಹಳ ಮುಖ್ಯ. ಪ್ರಮುಖವಾಗಿ ಪರಿಸರ ಎಲ್ಲಾ ಕಾಲಕ್ಕೂ ಮೂಲಭೂತವಾದುದ್ದು. ತಂತ್ರಜ್ಞಾನವನ್ನು ಪರಿಸರಕ್ಕೆ ಪೂರಕವಾಗಿ ಅಳವಡಿಸಿಕೊಂಡರೆ ಸಬಲೀಕರಣವಾಗಬಹುದು. ಆ ನಿಟ್ಟಿನಲ್ಲಿ ಈ ರೀತಿಯ ಕಾರ್ಯಾಗಾರಗಳು GIS ತಂತ್ರಜ್ಞಾನದೊಂದಿಗೆ ಉದ್ಯೋಗಕ್ಕೆ, ಬದುಕಿಗೆ, ಸಮಾಜಕ್ಕೆ ಮತ್ತು ಪರಿಸರಕ್ಕೆ ಪೂರಕವಾಗಿರುತ್ತದೆ, ಇದರಿಂದ ನಗರಾಭಿವೃದ್ಧಿ, ಆರೋಗ್ಯ ಕ್ಷೇತ್ರ ಮತ್ತು ವಿಪತ್ತುಗಳ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ನಿಷ್ಠೆಯಿಂದ ಬದ್ದತೆಯಿಂದ ಮತ್ತು ಕೌಶಲ್ಯದಿಂದ ಕಲಿತರೆ ಬದುಕು ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೋಮಶೇಖರ ಕೆ.ಕೆ. ಅವರು ಎಲ್ಲರನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ದೊಡ್ಡರಸಯ್ಯ ಜಿ ಅವರು ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಸಿದ್ದರಾಜು ಸಿ.ಎಸ್., ಡಾ. ಭುವನೇಶ್ ಜಿ ಹಾಜರಿದ್ದರು ಹಾಗೂ ಅಧ್ಯಾಪಕಿ ಕು. ಯಶಸ್ವಿನಿ ಪಂಡಿತ್ ಅವರು ಪ್ರಾರ್ಥಿಸಿದರು. ಕು. ಅಂಕಿತ ಅವರು ನಿರೂಪಿಸಿದರು. ಭೂಗೋಳಶಾಸ್ತ್ರದ ಅಂತಿಮ ಬಿಎ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.