ಲಯನ್ಸ್ ಕ್ಲಬ್‌ವತಿಯಿಂದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ವಿಶೇಷಚೇತನರಿಗೆ ಕೃತಕ ಅಂಗಗಳ ವಿತರಣೆ
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮೈಸೂರು ಲಯನ್ಸ್ ಕ್ಲಬ್, ವತಿಯಿಂದ ೪೦ ವಿಶೇಷಚೇತನರಿಗೆ ಉಚಿತವಾಗಿ ಕೃತಕ ಅಂಗಗಳನ್ನು ವಿತರಿಸಲಾಯಿತು.
ಜೆಎಸ್‌ಎಸ್ ಆಸ್ಪತ್ರೆಯ ಸಂದರ್ಶಕ ಸಮಿತಿ ಸದಸ್ಯರಾದ ಲಯನ್ ಶ್ರೀ ಜೈ ಪ್ರಕಾಶ್‌ರವರು ಲಯನ್ಸ್ ಕ್ಲಬ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಈ ಬಾರಿ ಲಯನ್ಸ್ ಸಂಸ್ಥೆಯ ಸದಸ್ಯರುಗಳು ಮತ್ತು ದಾನಿಗಳಿಂದ ಅರ್ಹ ಫಲಾನುಭವಿಗಳಿಗೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೃತಕಾಂಗಗಳನ್ನು ತಯಾರಿಸಿ ವಿಶೇಷಚೇತನರಿಗೆ ಉಚಿತವಾಗಿ ನೀಡಲು ತಿರ್ಮಾನಿಸಿದ್ದೆವು ದಾನಿಗಳ ಸಹಾಯದಿಂದ ಇಂದು ೪೦ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ನೀಡಿದ್ದೇವೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಶ್ರೀ ಆರ್. ಮಹೇಶ್‌ರವರು ಇಂದು ಮೈಸೂರಿನ ಲಯನ್ಸ್ ಕ್ಲಬ್‌ವತಿಯಿಂದ ಅರ್ಹರಿಗೆ ಕೃತಕ ಅಂಗಗಳನ್ನು ನೀಡುತ್ತಿರುವುದು ಸಂತೋಷದ ಸಂಗತಿ. ಲಯನ್ಸ್ ಸಂಸ್ಥೆಯವರು ಮಾಡುತ್ತಿರುವ ಸಮಾಜಸೇವೆ ಶ್ಲಾಘನೀಯ. ಕೋವಿಡ್ ಸಮಯದಲ್ಲಿ ಆಹಾರ ಕಿಟ್ ವಿತರಣೆ, ಪತ್ರಿ ತಿಂಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಇನ್ನು ಮುಂತಾದ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವಶ್ಯಕತೆ ಇರುವವರಿಗೆ ಮುಂದೆಯು ಇವರ ಸೇವೆ ದೊರೆಯುವಂತಾಗಲಿ ಎಂದರು.
ಬನ್ಸಾಲಿ ಗ್ರೂಪ್‌ನ ಶ್ರೀ ಹೇಮಂತ್ ಕುಮಾರ್ ಬನ್ಸಾಲಿಯವರು ನಮ್ಮ ತಂದೆ ಹಾಕಿಕೊಟ್ಟ ಸಮಾಜ ಸೇವಾ ಕಾರ್ಯವನ್ನು ಅವರ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತಿದ್ದೇನೆ. ಯಾರಿಗಾದರು ಉಚಿತ ಕೃತಕ ಅಂಗಗಳ ಅವಶ್ಯಕತೆ ಇದ್ದರೆ ಯಾವಾಗಬೇಕಾದರು ನಮ್ಮ ಕಛೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಹಣಕಾಸು ಅಧಿಕಾರಿಗಳಾದ ಶ್ರೀ ಕೆ.ಎಂ. ಭಗವಾನ್, ಲಯನ್ಸ್ ಸಂಸ್ಥೆಯ ಶ್ರೀ ಪುಟ್ಟೆಗೌಡ, ಶ್ರೀ ಪಿ. ಹೊನ್ನರಾಜು, ಶ್ರೀ ಹೆಚ್.ಎಸ್. ರಾಜು, ಶ್ರೀ ಜಯಕುಮಾರ್, ಶ್ರೀ ಧನಂಜಯ್, ದಾನಿಗಳಾದ ಡಾ. ರಮೇಶ್, ಜೆಎಸ್‌ಎಸ್ ಆಸ್ಪತ್ರೆಯ ಪ್ರಭಾರ ಆಡಳಿತಾಧಿಕಾರಿಯಾದ ಶ್ರೀ ಎಂ. ಭಾನುಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಎಸ್. ಜೀವನ್ ಹಾಗೂ ಕೃತಕ ಅಂಗಗಳ ವಿಭಾಗದ ಮುಖ್ಯಸ್ಥರಾದ ಶ್ರೀ ಸಂಜೀವ್ ಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೈಸೂರಿನ ಲಯನ್ಸ್ ಕ್ಲಬ್ ವತಿಯಿಂದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ೪೦ ವಿಶೇಷಚೇತನ ಫಲಾನುಭವಿಗಳಿಗೆ ಉಚಿತವಾಗಿ ಕೃತಕ ಅಂಗಗಳನ್ನು ಲಯನ್ ಶ್ರೀ ಜೈ ಪ್ರಕಾಶ್ ಮತ್ತು ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕರಾದ ಶ್ರೀ ಆರ್ ಮಹೇಶ್‌ರವರು ವಿತರಿಸಿದರು. ಶ್ರೀ ಕೆ.ಎಂ. ಭಗವಾನ್, ಶ್ರೀ ಪುಟ್ಟೆಗೌಡ, ಶ್ರೀ ಪಿ. ಹೊನ್ನರಾಜು, ಶ್ರೀ ಹೆಚ್.ಎಸ್. ರಾಜು, ಶ್ರೀ ಜಯಕುಮಾರ್, ಶ್ರೀ ಧನಂಜಯ್, ಡಾ. ರಮೇಶ್, ಶ್ರೀ ಎಂ. ಭಾನುಮೂರ್ತಿ, ಶ್ರೀ ಎಸ್. ಜೀವನ್ ಹಾಗೂ ಶ್ರೀ ಸಂಜೀವ್ ಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.



