
ಮೈಸೂರು, ಮಾ.7, 2026: ಜೀವದ ಹಂಗುತೊರೆದು ಕಾರ್ಯನಿರ್ವಹಿಸುವ ಲೈನ್‌ಮ್ಯಾನ್‌ಗಳಿಗೆ ಶುಭಕೋರಿದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) N. R. ಮೊಹಲ್ಲ ವಿಭಾಗ ಹರ್ಷ ರಸ್ತೆ ಮೈಸೂರು
ಗ್ರಾಹಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಿಬ್ಬಂದಿ ಸುರಕ್ಷತೆ ಮತ್ತು ಎಚ್ಚರಿಕೆಯ ಕೆಲಸ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವತಿಯಿಂದ ಮೈಸೂರಿನ ಎನ್. ಆರ್. ಮೊಹಲ್ಲಾದಲ್ಲಿರುವ ಸೆಸ್ಕ್‌ನ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಲೈನ್‌ಮ್ಯಾನ್ ದಿವಸ್ ಕಾರ್ಯಕ್ರಮವನ್ನು ಶ್ರೀಮತಿ ಅನಿತಾ ಎಸ್. ಬಿ. ಕಾರ್ಯನಿರ್ವಾಹಕ ಇಂಜಿನಿಯರ್ (ವಿ )ರವರು ಉದ್ಘಾಟಿಸಿ ಮಾತನಾಡಿದರು.
“ಸಂಸ್ಥೆ ಮತ್ತು ಸಿಬ್ಬಂದಿ ನಡುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಕೆಲಸ ನಡೆಯುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾವುದೇ ಅವಘಡಗಳು ಸಂಭವಿಸದಂತೆ ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ. ಆದ್ದರಿಂದ ವಿದ್ಯುತ್ ಅವಘಡಗಳನ್ನು ತಗ್ಗಿಸುವಲ್ಲಿ ಹಾಗೂ ಲೈನ್‌ಮ್ಯಾನ್‌ಗಳ ಸುರಕ್ಷತೆಯ ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು” ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯನಿರ್ವಹಿಸಿ, ಗ್ರಾಹಕರುಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಿ ಸೆಸ್ಕ್‌ನ ವಿಶ್ವಾಸಾರ್ಹತೆ ಹೆಚ್ಚಿಸಿರುವ 18ಕ್ಕೂ ಹೆಚ್ಚು ಲೈನ್‌ಮ್ಯಾನ್‌ಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಲೈನ್‌ಮ್ಯಾನ್‌ಗಳಿಗೆ ಸುರಕ್ಷತೆ ಮತ್ತು ಜವಾಬ್ದಾರಿಯ ಕುರಿತಂತೆ ಸುರಕ್ಷತಾ ಮಂತ್ರವನ್ನು ಬೋಧಿಸಲಾಯಿತು.
ಸಮಾರಂಭದಲ್ಲಿ ಎನ್. ಆರ್. ಮೊಹಲ್ಲಾ ವಿಭಾಗದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ(659) ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸೇರಿದಂತೆ ಇತರೆ ಹಾಗೂ ಲೈನ್‌ಮ್ಯಾನ್‌ಗಳು ಇದ್ದರು.

ಈ ಸಂದರ್ಭದಲ್ಲಿ ಎನ್. ಆರ್. ವಿಭಾಗೀಯ ಕಚೇರಿಯಿಂದ ಕೋಟೆ ಶ್ರೀ ಆಂಜನೇಯ ವೃತ್ತದಿಂದ ಶ್ರೀ ಹರ್ಷ ರಸ್ತೆಯವರೆಗೆ ಪವರ್ ಮ್ಯಾನ್ ಗಳು ಜಾತ ಮಾಡಲಾಗಿರುತ್ತದೆ ಮತ್ತು ಈ ಕಾರ್ಯಕ್ರಮದಲ್ಲಿ
ಡಿ ಆರ್ ಎಂ ಆಸ್ಪತ್ರೆಯ ವೈದ್ಯರಿಂದ ಯಾವುದೇ ಸಾರ್ವಜನಿಕ ಯಾಂತ್ರಿಕ ಅಪಘಾತ ಮತ್ತು ವಿದ್ಯುತ್ ಅವಘಡ ಸಂಭವಿಸಿದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಸ್ಥಳದಲ್ಲೇ ಪ್ರಾಯೋಗಿಕವಾಗಿ ಅರಿವು ಮೂಡಿಸಲಾಯಿತು
ಈ ಸಂದರ್ಭದಲ್ಲಿ ಚಾಮರಾಜನಗರ ಕೊಡಗು ವೃತ್ತದ ಅಧೀಕ್ಷಕ ಇಂಜಿನಿಯರ್ (ವಿ) ಶ್ರೀ ಎಂ. ಸೋಮಶೇಖರ್ ರವರು ಪವರ್ ಮ್ಯಾನ್ ಗಳಿಗೆ ವಿದ್ಯುತ್ ಅವಘಡ ತಪ್ಪಿಸುವ ಸಲುವಾಗಿ ಕರ್ತವ್ಯ ನಿರ್ವಹಿಸಲು ಸುರಕ್ಷತಾ ಸಾಧನಗಳನ್ನು ಉಪಯೋಗಿಸಿಕೊಂಡು ಕಡ್ಡಾಯವಾಗಿ ವಿದ್ಯುತ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಪವರ್ ಮ್ಯಾನ್ ಗಳಿಗೆ ಸಲಹೆ ನೀಡಿದರು.





