HOMENews

ಬೇಸಾಯದ ಜಮೀನಿಗೆ ತೊಂದರೆ ನೀಡುತ್ತಿದ್ದು ಸೂಕ್ತ ರಕ್ಷಣೆ ನೀಡುವಂತ್ತೆ ಒತ್ತಾಯಿಸಿದ ನೊಂದ ಮಾಲೀಕ

 

 

 ಪಿರಿಯಾಪಟ್ಟಣ : ಇಲ್ಲ ಸಲ್ಲದ ಆರೋಪ ಮಾಡುತ್ತ ಬೇಸಾಯ ಮಾಡುವ ಜಮೀನಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜಮೀನಿನ ಮಾಲೀಕರಾದ ಮಧು ಆರೋಪಿಸಿದರು.  ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನಗೆ ಹಾರನಹಳ್ಳಿ ಹೋಬಳಿ ಬೈಲುಕುಪ್ಪೆ ಸರ್ವೇ ನಂಬರ್ 32/1ರಲ್ಲಿ 4 ಎಕರೆ 27 ಗುಂಟೆ  ಜಮೀನಿದ್ದು, ಈ ಜಮೀನಿಗೆ ಸೂಕ್ತ ದಾಖಲೆಯನ್ನು ಕೂಡ ಹೊಂದಿದ್ದೇವೆ ಆದರೆ ನನಗೆ ಗ್ರಾಮದ ಸರ್ವೆ ನಂಬರ್ 31ರಲ್ಲಿರುವ ಸುಶೀಲಮ್ಮ ಎಂಬುವರು ಜಮೀನಿನಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದು ಇವರು ಸಮೀಪದ ಅರಣ್ಯ ಇಲಾಖೆಯ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ  ಇದನ್ನು ಕೂಡ ಅರಣ್ಯ ಇಲಾಖೆಯವರು ತೆರವುಗೊಳಿಸಲು ಸರ್ವೇ ಮಾಡಿರುತ್ತಾರೆ ಮತ್ತು ಇವರ ದಾಖಲೆ ಯಲ್ಲಿರುವ ಜಮೀನಿಗೂ ನಮ್ಮ ಜಮೀನಿಗೂ ಯಾವುದೇ ಸಂಬಂಧವಿಲ್ಲ. ಇವರು ನೀಡುತ್ತಿರುವ ತೊಂದರೆಯನ್ನು ಪ್ರಶ್ನಿಸಲು ಹೋದರೆ ಇಲ್ಲಸಲ್ಲದ ಆರೋಪ ಮಾಡುತ್ತಾ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದು, ದಲಿತ ದೌರ್ಜನ್ಯ ಪ್ರಕರಣವನ್ನು ಹಾಕಿ ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ನನಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶೀಲಾ ಡಿಸೋಜಾ, ನಾವು ಸುಮಾರು ನೂರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಿದ್ದು, ಎಲ್ಲ ಸಮುದಾಯದವರೊಂದಿಗೂ ಸಹೋದರತ್ವದಿಂದ ಬದುಕುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಜಾತಿ ಭೇದಭಾವ ಇಲ್ಲ. ಆದರೆ ಕೆಲವರು ಜಾತಿಯನ್ನು ಮುಂದಿಟ್ಟು ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ  ಎಂದು ಹೇಳಿದರು.

ಹಾಗೂ, ಹಲವು ವರ್ಷಗಳಿಂದ ಸಂಚಾರಕ್ಕಾಗಿ ಬಳಸುತ್ತಿರುವ ಸರ್ವೇ ನಂಬರಿನ ಸರ್ಕಾರಿ ರಸ್ತೆಯನ್ನು ನಿರ್ಬಂಧವಿಲ್ಲದೆ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗೋಪಾಲ, ಮಹೇಶ್, ಪ್ರದೀಪ್, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply