HOMENews

 ಬಿಸಿಲಿನಿಂದ ಬರಿದಾದ ಕೆರೆಗಳು, ಸಂಕಷ್ಟದಲ್ಲಿ ರೈತರು  : ಸರ್ಕಾರದ ನಿರ್ಲಕ್ಷ್ಯಕ್ಕೆ ಕುಮಾರಸ್ವಾಮಿ ಗರಂ : ಗೃಹಲಕ್ಷ್ಮಿ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ

ವರದಿ :-ವಡ್ಡರಕೊಪ್ಪಲು ಶಿವರಾಮು. 

 ಕೆ ಆರ್ ನಗರ. ಏ. 25:- ರಾಜ್ಯದ ಅಭಿವೃದ್ಧಿಗಾಗಿ ಕೃಷಿಯ ಜೊತೆಗೆ ಹೈನುಗಾರಿಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ಕೇಂದ್ರ ಸಚಿವರಾದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಸಾಲಿಗ್ರಾಮ ತಾಲ್ಲೂಕಿನ ಹೆಬ್ಸೂರ್ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ಮಹಿಳೆಯರು ಹೈನುಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಅವರ ಬದುಕಿಗೆ ದಾರಿಯಾಗಬೇಕು ಎಂಬ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರದಿಂದ ಇಂದು ಹೈನುಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರು, ಯುವಕರು, ರೈತರೂ ಸೇರಿದಂತೆ ಇತರರು ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಆದಾಯದ ಮಟ್ಟವನ್ನು ಹೆಚ್ಚಿಸಿಕೊಂಡು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ ಎಂದರು.

ರಾಜ್ಯ ರಾಜ್ಯ ಸರ್ಕಾರ ಅತಿಹೆಚ್ಚಿನ ರೀತಿಯಲ್ಲಿ ಜನಸಾಮಾನ್ಯರ ಮೇಲೆ ಸಾಲದ ಹೊರೆಯನ್ನು ಹೊರಿಸಿದೆ. ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಜನರ ಬದುಕನ್ನು ಸರಿಪಡಿಸುವಂತಹ ಕಾರ್ಯಕ್ರಮವನ್ನು ನೀಡಬೇಕು ಎಂದರು.

ಈ ಬಾರಿ ರಾಜ್ಯದಲ್ಲಿ ಅತ್ಯಂತ ಬಿಸಿಲಿನ ತಾಪದಿಂದ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿದೆ ರೈತರ ತಮ್ಮ ಕೃಷಿ ಭೂಮಿಗೆ ನೀರಿಲ್ಲದೆ ಪರದಾಡುತ್ತಿದ್ದು ಕೃಷಿಯ ಜೊತೆಗೆ ಜನರಿಗೆ ಕುಡಿಯುವ ನೀರು ದನ ಕರುಗಳಿಗೆ ಮೇವು ನೀಡುವಂತ ಜವಾಬ್ದಾರಿ ಕೆಲಸವನ್ನು ಮಾಡದ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ತೋರಿಸಿಕೊಂಡು ಅಧಿಕಾರ ಗದ್ದಿಗೆಗಾಗಿ ಪೈಪೋಟಿ ನೀಡುವಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಯಿಂದ ಹಿಡಿದು ಸಚಿವರು ಶಾಸಕರು ಅಧಿಕಾರದ ಹಿಂದೆ ಬಿದ್ದಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನವನ್ನು ದೇವೇಗೌಡರ ಹೆಸರಿನಲ್ಲಿ ಶೀಘ್ರವಾಗಿ ನಿರ್ಮಿಸಲಾಗುವುದು ಹಾಗೂ ನೀವು ನೀಡಿದ ಅಧಿಕಾರ ಅವಧಿಯಲ್ಲಿ ನಿಮ್ಮ ಗ್ರಾಮದ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು ಉಳಿದ ಸಮುದಾಯ ಭವನ ಮತ್ತು ಒಂದು ದೇವಾಲಯದ ಕೆಲಸವನ್ನು ಮಾಡಿಕೊಡುವ ಭರವಸೆಯನ್ನು ನೀಡಿದರು.

ಕೇವಲ ದೇವಾಲಯಗಳನ್ನು ನಿರ್ಮಿಸುವುದರಿಂದ ನೆಮ್ಮದಿ ಮತ್ತು ತೃಪ್ತಿ ಸಿಗುವುದಿಲ್ಲ ತಮಗೆ ಜನ್ಮ ನೀಡಿದ ತಂದೆ ತಾಯಿ ಮತ್ತು ಸಹೋದರರು ಹಾಗೂ ಅಕ್ಕಪಕ್ಕದವರಿಗೆ ತೊಂದರೆ ಕೊಡದೆ ಸೋದರ ಭಾತೃತ್ವದಿಂದ ಬಾಳಿದಾಗ ಮಾತ್ರ ನೆಮ್ಮದಿ ತೃಪ್ತಿ ಸಿಗುತ್ತದೆ ಆದ್ದರಿಂದ ತಾವೆಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಶಾಸಕರು ಅಧಿಕಾರಕ್ಕಾಗಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಿದ್ದರು ಈ ಅಬ್ಸೂರ್ ಗ್ರಾಮದ ಹಿರಿಯರು ಯುವಕರು ಯಾವ ಸಂದರ್ಭದಲ್ಲಿಯೂ ಹಣದ ಹಿಂದೆ ಅಧಿಕಾರದ ಹಿಂದೆ ಹೋಗದೆ ಈ ರಾಜ್ಯ ಕಂಡ ದೇಶ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾಗಿರುವ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ ನಿಮ್ಮೆಲ್ಲರನ್ನು ಮನಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಅಶ್ವಿನ್ ಕುಮಾ‌ರ್, ಕೆ. ಮಹದೇವ್, ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಉಮಾಶಂಕರ್, ಜಿ.ಪಂ. ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಜಾ.ದಳ ರಾಜ್ಯ ಪ್ರಧಾನ ಚಂದ್ರಶೇಖರ್, ತಾಲ್ಲೂಕು ಜಾ.ದಳ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಯುವ ಘಟಕದ ಅಧ್ಯಕ್ಷ ಕರ್ತಾಳ್ ಮದು , ಕುಪ್ಪಳ್ಳಿ ಸೋಮು , ಸಂಘದ ಅಧ್ಯಕ್ಷ ಗೋವಿಂದೇಗೌಡ, ಉಪಾಧ್ಯಕ್ಷೆ ಶಾರದಮ್ಮ, ನಿರ್ದೇಶಕರುಗಳಾದ ಸುನಿಲ್ ಕುಮಾ‌ರ್, ರಮೇಶ್, ಶ್ರೀನಿವಾಸ್, ನಾಗೇಶ್, ರೋಹಿತ್, ರಾಮಶೆಟ್ಟಿ, ರಾಜಮ್ಮ, ಭಾರತಿ, ಗಿರಿಜಮ್ಮ, ಗಿರೀಶ್, , ತಹಸಿಲ್ದಾರ್ ರುಖಿಯಾಬೇಗಂ, ತಾ.ಪಂ. ಇಒ ರವಿಕುಮಾರ್, ಮೈಮುಲ್ ಅಧಿಕಾರಿಗಳು, ಮುಖಂಡರುಗಳಾದ ಮಹೇಂದ್ರ, ಅಶೋಕ್, ಸೇರಿದಂತೆ ಇತರರು ಹಾಜರಿದ್ದರು.

ಈ ಹಿಂದೆಯೂ ಕೂಡ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು . ಮಾಡುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಎಚ್.ಡಿ.ಕುಮಾರಸ್ವಾಮಿ ಅವರ ಸಹಕಾರ ಹಾಗೂ ಆಶೀರ್ವಾದದೊಂದಿಗೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು.”

-ಸಾ.ರಾ.ಮಹೇಶ್, ಮಾಜಿ ಸಚಿವರು”

ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಸಚಿವರನ್ನಾಗಿ ಮಾಡುವಂತೆ ಜಯ ಘೋಷಗಳನ್ನು ಕೂಗುತ್ತಿದಿರಿ ಆದರೆ ಅವರು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕೆಲಸ ಕಾರ್ಯಗಳನ್ನುಮಾಡುವುದರ ಜೊತೆಗೆ ಕಾರ್ಯಕರ್ತರ ಜೊತೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಆದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಬೇಕಾಯಿತು.

ರಾಜ್ಯದಲ್ಲಿ ಸರ್ಕಾರ ಬರಬೇಕಾದರೆ ಸಾರಾ ಮಹೇಶ್ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಜನರು ಸಾ.ರಾ.ಮಹೇಶ್ ಅವರು ಮಂತ್ರಿ ಆಗಲು ಆಶೀರ್ವದಿಸಬೇಕು ಜೊತೆಗೆ ನಿಮ್ಮ ಪಕ್ಕದ ತಾಲೂಕುಗಳಾದ ಅರಕಲಗೂಡು ಪಿರಿಯಾಪಟ್ಟಣ ಹುಣಸೂರು ಸೇರಿದಂತೆ ಇತರ ಭಾಗಗಳಿಗೆ ಹೋಗಿ ಪ್ರಚಾರ ಮಾಡಿ ಗೆಲ್ಲಿಸಿಕೊಡಬೇಕು .”

-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು”

Leave a Reply