HOMEFilm NewsNews

ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಜಯಮಾಲಾ ಗೆಲುವು: ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ

512 ಮತಗಳೊಂದಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೇರಿದ ಹಿರಿಯ ನಟಿ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಜಯಮಾಲಾ ಭರ್ಜರಿ ಜಯಕನ್ನಡ ಚಿತ್ರರಂಗದ ಪ್ರಮುಖ ಅಂಗ ಸಂಸ್ಥೆಯಾದ “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್)” ಗೆ ಇಂದು ನಡೆದ ಚುನಾವಣೆಯಲ್ಲಿ ಹಿರಿಯ ನಟಿ ಜಯಮಾಲಾ ಭರ್ಜರಿ ಜಯ ಸಾಧಿಸಿದ್ದಾರೆ. ತೀವ್ರ ಪೈಪೋಟಿ, ಕುತೂಹಲ ಮತ್ತು ರಾಜಕೀಯ ಲೆಕ್ಕಾಚಾರಗಳ ನಡುವೆ ನಡೆದ ಈ ಚುನಾವಣೆಯ ಫಲಿತಾಂಶ ಸಂಜೆ ತಡವಾಗಿ ಪ್ರಕಟವಾಗಿದ್ದು, 512 ಮತಗಳನ್ನು ಪಡೆದು ಜಯಮಾಲಾ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

ಕನ್ನಡ ಫಿಲ್ಮ್ ಚೇಂಬರ್ ಕಚೇರಿಯ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮತದಾನ ನಡೆದಿದ್ದು, ತದನಂತರ ಮತ ಎಣಿಕೆ ಪ್ರಕ್ರಿಯೆ ಪ್ರಾರಂಬಿಸಲಾಯಿತು. ಸುಮಾರು ರಾತ್ರಿ ಸುಮಾರು ಎಂಟು ಗಂಟೆಯ ಸಮಯಕ್ಕೆ  ಅಂತಿಮ ಫಲಿತಾಂಶ ಬಂತು , ಚಿತ್ರನಟಿ ಜಯಮಾಲಾ ಅವರ ಜಯಶಾಲಿ ಆಗಿರುವ  ಘೋಷಣೆಯೊಂದಿಗೆ ಗುರುರಾಜ ಕಲ್ಯಾಣ ಮಂಟಪದ ಸ್ಥಳದಲ್ಲಿ  ಉಲ್ಲಾಸದಿಂದ ಗದ್ದುಗೆದ್ದಿತು.

ಅತ್ಯಂತ ತೀವ್ರ ಪೈಪೋಟಿಗೆ ಸಾಕ್ಷಿಯಾದ ಚಲನಚಿತ್ರ ಮಂಡಳಿಯಾ ಅಧ್ಯಕ್ಷ ಸ್ಥಾನ

ಈ ಬಾರಿ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ತುಂಬಾ ಕುತೂಹಲಕಾರಿಯಾಗಿತ್ತು. ಕನ್ನಡದ ಹಿರಿಯ ನಟಿ ಜಯಮಾಲಾ ಮತ್ತುಕನ್ನಡ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರಾದ ಭಾ.ಮಾ. ಹರೀಶ್ ನಡುವೆ ಇಬ್ಬರಿಗೂ ನೇರ ಮುಖಾಮುಖಿ ಸ್ಪರ್ಧೆ . ಇವರಿಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸುದೀರ್ಘ ಅನುಭವ ಹೊಂದಿದವರಾಗಿದ್ದು, ಕನ್ನಡ ಚಿತ್ರರಂಗದ ಸದಸ್ಯರ ಬೆಂಬಲಕ್ಕಾಗಿ ಕೊನೆಯ ಕ್ಷಣದವರೆಗೂ ತುಂಬಾ ಪ್ರಯತ್ನ ಪಟ್ಟರು.

ಚಿತ್ರನಟಿ ಜಯಮಾಲಾ ಅವರು ಸುಮಾರು 16 ವರ್ಷಗಳ ನಂತರ ಮತ್ತೆ ವಾಣಿಜ್ಯ ಮಂಡಳಿ  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರಿಂದ ಈ ಬಾರಿ ಚುನಾವಣೆ ಇನ್ನಷ್ಟು ಗಮನ ಸೆಳೆದಿತ್ತು. 2008ರಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷೆಯಾಗಿ ಆಯ್ಕೆಯಾದ ಅವರು, ಆ ಅವಧಿಯಲ್ಲಿ ಚಿತ್ರರಂಗಕ್ಕೆ ಕೈಗೊಂಡ ಹಲವು ಸುಧಾರಣಾ ಕ್ರಮಗಳು ಮತ್ತು ಚಿತ್ರರಂಗದ ಪರ ನಿಲುವುಗಳು ಇವತ್ತಿಗೂ ನೆನಪಾಗುತ್ತಿವೆ. ಇದೇ ಅನುಭವ ಹಾಗೂ ವಿಶ್ವಾಸವನ್ನು ಆಧಾರವಾಗಿ ಇಟ್ಟುಕೊಂಡು ಅವರು ಈ ಬಾರಿ ಮತ್ತೆ ಸ್ಪರ್ಧೆ ಮಾಡಲು ಮುಂದಾದರು.

ಭಾ.ಮಾ. ಹರೀಶ್ ಅವರು 2022ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿದ್ದರು. ಈ ಬಾರಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ದೃಢ ಸಂಕಲ್ಪದೊಂದಿಗೆ ಅವರು ಸ್ಪರ್ಧೆ ಮಾಡಿದ್ದರು. ಚುನಾವಣೆಗೆ ಮುನ್ನ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ಹರೀಶ್, ತಮ್ಮ ಕಾರ್ಯಕ್ಷಮತೆ ಮತ್ತು ಆಡಳಿತ ಅನುಭವವೇ ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿಕೊಂಡಿದ್ದರು.

ಹಿರಿಯಾ ನಟಿ ಜಯಮಾಲಾ ಗೆಲುವಿಗೆ ಕಾರಣವಾದ ಅಂಶಗಳು

ವಾಣಿಜ್ಯ ಮಂಡಳಿಯ ಚುನಾವಣಾ ಫಲಿತಾಂಶದ ವಿಶ್ಲೇಷಣೆ ಮಾಡಿದರೆ, ಹಿರಿಯಾ ನಟಿ ಜಯಮಾಲಾ ಅವರ ಗೆಲುವಿಗೆ ಹಲವು ಅಂಶಗಳು ಸಹಕಾರಿಯಾಗಿವೆ ಎಂದು ಹೇಳಬಹುದು. ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ವಲಯದಲ್ಲಿ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ವಿಶೇಷವಾಗಿ ಹಿರಿಯ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಸಾ.ರಾ. ಗೋವಿಂದ್, ಹಾಗೂ ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷರಾದ ಕೆ.ವಿ. ಚಂದ್ರುಶೇಖರ್ ಸೇರಿದಂತೆ ಹಲವರು ಜಯಮಾಲಾ ಅವರಿಗೆ ಬಹಿರಂಗ ಬೆಂಬಲ ನೀಡಿದ್ದರು.

ಹಿರಿಯಾ ನಟಿ ಜಯಮಾಲಾ  ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಯಮಾಲಾ, “ನಾನು 16 ವರ್ಷಗಳ ಬಳಿಕ ಮತ್ತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ಈ ನನ್ನ ನಿರ್ಧಾರಕ್ಕೆ ಕಾರಣ ನನ್ನ ಮೇಲೆ ಚಿತ್ರರಂಗ ವಿಶ್ವಾಸ ಇಟ್ಟ ನಿರ್ಮಾಪಕರು ಮತ್ತು ಚಿತ್ರರಂಗದ ಹಿರಿಯರು. ಅವರು ನೀಡಿದ ಬೆಂಬಲವೇ ನನಗೆ ಶಕ್ತಿ. ನಾನು ಗೆದ್ದರೆ ಚಿತ್ರರಂಗಕ್ಕೆ ಇನ್ನಷ್ಟು ಅನುಕೂಲವಾಗುವ ಕೆಲಸಗಳನ್ನು ಮಾಡಬೇಕು ಎಂಬುದೇ ನನ್ನ ಉದ್ದೇಶ” ಎಂದು ತಿಳಿಸಿದರು. ಅವರ ಈ ಮಾತುಗಳು ಮತದಾರರ ಮನಸ್ಸಿಗೆ ತಲುಪಿದವು ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಸಿನಿಮಾ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳ ಫಲಿತಾಂಶ

ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ, ಫಿಲ್ಮ್ ಚೇಂಬರ್‌ನ ವಿವಿಧ ಪ್ರಮುಖ ಹುದ್ದೆಗಳಿಗೂ ಇಂದು ಚುನಾವಣೆ ನಡೆಯಿತು. ಫಲಿತಾಂಶದ ಪ್ರಕಾರ,

ಗೌರವ ಉಪಾಧ್ಯಕ್ಷರುಗಳಾಗಿ

ಸುಂದರ್ ರಾಜು (ನಿರ್ಮಾಪಕರ ವಲಯ)

ಕೆ. ಮಂಜು (ವಿತರಕರ ವಲಯ)

ಕಿಶೋರ್ (ಪ್ರದರ್ಶಕರ ವಲಯ)

ಆಯ್ಕೆಯಾಗಿದ್ದಾರೆ.

ಗೌರವ ಕಾರ್ಯದರ್ಶಿಗಳಾಗಿ

ಎ. ಗಣೇಶ್ (ನಿರ್ಮಾಪಕ ವಲಯ)

ರಮೇಶ್ (ವಿತರಕರ ವಲಯ)

ಅಶೋಕ್ (ಪ್ರದರ್ಶಕರ ವಲಯ)

ಗೆಲುವು ಸಾಧಿಸಿದ್ದಾರೆ.

ಇನ್ನು ಖಜಾಂಚಿ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಜಯಸಿಂಹ ಮುಸುರಿ ಆಯ್ಕೆಯಾಗಿದ್ದಾರೆ.

ಮತದಾನ ಪ್ರಕ್ರಿಯೆ ಮತ್ತು ಸ್ಪರ್ಧೆಯ ವಿವರ

ಇಂದಿನ ಚುನಾವಣೆಯಲ್ಲಿ ಫಿಲ್ಮ್ ಚೇಂಬರ್‌ನ ಎಲ್ಲಾ ವಿಭಾಗಗಳಿಂದ ಸದಸ್ಯರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು. ಬೆಳಗ್ಗೆಯಿಂದಲೇ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾರರ ಸಾಲುಗಳು ಕಂಡುಬಂದವು. ಸಂಜೆ ಆರು ಗಂಟೆಯವರೆಗೂ ಮತದಾನ ನಡೆದಿದ್ದು, ನಂತರ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು.

ಈ ಬಾರಿ ಸ್ಪರ್ಧೆ ನಡೆಸಿದ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ಅಧ್ಯಕ್ಷ ಸ್ಥಾನ:

ಹಿರಿಯ ನಟಿ ಜಯಮಾಲಾ

ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್

ಉಪಾಧ್ಯಕ್ಷ ಸ್ಥಾನ:

ಪ್ರಿಯಾ ಹಾಸನ್

ಸುಂದರ್ ರಾಜ್

ಕೆ. ಮಂಜು

ಖಜಾಂಚಿ ಸ್ಥಾನ:

ಜಯಸಿಂಹ ಮುಸುರಿ

ಎ. ನರಸಿಂಹ

ಪಾರ್ಥ ಸಾರಥಿ

ಮೋಹನ್ ಕುಮಾರ್ ಎಸ್.

 

ಗೌರವ ಕಾರ್ಯದರ್ಶಿ:

ಎ. ಗಣೇಶ್

ಟಿ.ಸಿ. ವೆಂಕಟೇಶ್

ಕೆ.ಎಂ. ವೀರೇಶ್

ಟಿ.ಬಿ. ಸಿದ್ಧರಾಜು

ಗೌರವ ಕಾರ್ಯದರ್ಶಿ (ವಿತರಕರ ವಲಯ):

ರಮೇಶ್ ಬಾಬು

ವೆಂಕಟೇಶ್

ಗೌರವ ಕಾರ್ಯದರ್ಶಿ (ಪ್ರದರ್ಶಕರ ವಲಯ):

ಕೆ.ಸಿ. ಅಶೋಕ್

ಸುಂದರ್ ರಾಜ್

ಚಿತ್ರರಂಗದ ನಿರೀಕ್ಷೆಗಳು

ಜಯಮಾಲಾ ಅವರ ಗೆಲುವಿನೊಂದಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ನಿರೀಕ್ಷೆಗಳು ಮೂಡಿವೆ. ಚಿತ್ರರಂಗದ ಸಮಸ್ಯೆಗಳು, ನಿರ್ಮಾಪಕರ ಸಂಕಷ್ಟ, ವಿತರಣೆ ಮತ್ತು ಪ್ರದರ್ಶನ ಸಂಬಂಧಿತ ಅಡಚಣೆಗಳು, ಸರ್ಕಾರದೊಂದಿಗೆ ಸಮನ್ವಯ, ಹೊಸ ಪ್ರತಿಭೆಗಳಿಗೆ ಅವಕಾಶ ಮುಂತಾದ ಹಲವು ವಿಚಾರಗಳಲ್ಲಿ ಅವರು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಹಿಂದಿನ ಅವಧಿಯಲ್ಲಿ ಕೈಗೊಂಡ ಕೆಲಸಗಳ ಅನುಭವವನ್ನು ಬಳಸಿ, ಈ ಬಾರಿ ಇನ್ನಷ್ಟು ಪರಿಣಾಮಕಾರಿ ಆಡಳಿತ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ಚಿತ್ರರಂಗ ವ್ಯಕ್ತಪಡಿಸಿದೆ. ಒಟ್ಟಾರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ನಡೆದ ಚುನಾವಣೆಯು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎನ್ನಬಹುದು.