“ಸಾಲಿಗ್ರಾಮ ಬ್ಲಾಕ್ ಮಾತ್ರ ಅಭಿವೃದ್ಧಿ, ಕೆ.ಆರ್.ನಗರ ಕ್ಷೇತ್ರಕ್ಕೆ ಅನ್ಯಾಯ” – ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ ಮಧು ಆರೋಪ

ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್ ಅಭಿವೃದ್ಧಿ ಹೊಂದಿದ್ದಾರೆಯೇ ವಿನಃ ಕೆ ಆರ್ ನಗರ ವಿಧಾನ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗುತ್ತಿಲ್ಲ : ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ ಮಧು
ಕೆ ಆರ್ ನಗರ. ಫೆ. 02:- ಗ್ಯಾರೆಂಟಿ ಸಮಿತಿಯ ಅಧ್ಯಕ್ಷರು ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್ ಅಭಿವೃದ್ಧಿ ಹೊಂದಿದ್ದಾರೆಯೇ ವಿನಃ ಕೆ ಆರ್ ನಗರ ವಿಧಾನ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗುತ್ತಿಲ್ಲ ಎಂದು ಸಾಲಿಗ್ರಾಮ ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ ಮಧು ವ್ಯಂಗವಾಗಿ ಟೀಕಿಸಿದರು.
ಅವರು ಪತ್ರಿಕಾ ಹೇಳಿಕೆಯನ್ನು ನೀಡಿ ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ಟೀಕಿಸುವ ಬದಲು ಅಧಿಕಾರಕ್ಕೆ ಬಂದು ಮೂರು ವರ್ಷವಾಗುತಿದೆ ಸಾಲಿಗ್ರಾಮ ತಾಲೂಕಿಗೆ ಸಾಮಾಜಿ ಸಚಿವ ಸಾರಾ ಮಹೇಶ್ ಅವರ ಅಧಿಕಾರ ಅವಧಿಯಲ್ಲಿ ತಂದ ಎರಡು ಇಲಾಖೆಗಳನ್ನು ಹೊರತುಪಡಿಸಿದರೆ ಒಂದೇ ಒಂದು ಇಲಾಖೆಯನ್ನು ತರಲು ಸಾಧ್ಯವಾಗಿಲ್ಲ ಮೈಸೂರು ಜಿಲ್ಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಸದಾ ಇರುವ ನಿಮ್ಮ ಶಾಸಕ ಡಿ ರವಿಶಂಕರ್ ಅವರಿಗೆ ಹೇಳಿ ಸಾಲಿಗ್ರಾಮ ತಾಲೂಕಿಗೆ ಬರಬೇಕಾದ ಕಚೇರಿಗಳನ್ನು ತರುವ ಕೆಲಸವನ್ನು ಮೊದಲು ಮಾಡಿ ಎಂದು ತಿಳಿಸಿದರು.
ಸಾಲಿಗ್ರಾಮ ತಾಲೂಕಿಗೆ ನಿಮ್ಮ ಶಾಸಕರ ಕೊಡುಗೆ ಏನು ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರನ್ನು ಕರೆತಂದು 500 ಕೋಟಿಗೂ ಹೆಚ್ಚು ಅನುದಾನದ ಸಂಕುಸ್ಥಾಪನೆ ಸ್ಥಾಪನೆ ಮಾಡಿದ ಅನುದಾನವೆಲ್ಲಿ ಅದನ್ನು ತಿಳಿಸದೆ ಅಭಿವೃದ್ಧಿಯನ್ನು ಸಹಿಸುತ್ತಿಲ ಎಂಬ ಹೇಳಿಕೆ ಹಾಸ್ಯಾಸ್ಪದ ವಾಗಿದ್ದು ಈ ಬಗ್ಗೆ ಚರ್ಚೆಗೆ ಆಹ್ವಾನಿಸಿದರೆ ನಾವು ಸಿದ್ದ ಎಂದು ಘೋಷಿಸಿದರು.
ಮಾಜಿ ಸಚಿವ ಸಾರಾ ಮಹೇಶ್ ರವರ ಕಾಲದಲ್ಲಿ ಸುಮಾರು 25 ಕೋಟಿಗೂ ಹೆಚ್ಚು ಅನು ಅನುದಾನದ ಭೂಮಿ ಪೂಜೆ ಮಾಡಿದ ಕಾಮಗಾರಿಯನ್ನು ವರ್ಗಾವಣೆ ಮಾಡಿಕೊಂಡು ನಮ್ಮದೇ ಅನುದಾನ ಎಂದು ಹೇಳುತ್ತಿರುವ ಅಧ್ಯಕ್ಷರೇ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಶಾಸಕ ಡಿ ರವಿಶಂಕರ್ ಮತ್ತು ಅವರ ತಂದೆ ದೊಡ್ಡ ಸ್ವಾಮಿಗೌಡರ ಓಲೈಕೆಗಾಗಿ ನಮ್ಮ ನಾಯಕರನ್ನು ಟೀಕಿಸುವ ನೈತಿಕತೆ ನಿಮಗಿಲ್ಲ ಈಗಾಗಲೇ ಕ್ಷೇತ್ರದ ಜನತೆ ನಿಮ್ಮಿಂದ ದೂರವಾಗುತ್ತಿದ್ದು ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ನಿಮಗೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷಕ್ಕೆ ಈಗಾಗಲೇ ಕುರುಬ ಸಮುದಾಯ ದಲಿತ ಸಮುದಾಯ ಸೇರಿದಂತೆ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದ ಮುಖಂಡರು ಕಾರ್ಯಕರ್ತರು ಸೇರುತ್ತಿದ್ದು ಅವರನ್ನು ಹಿಡಿದಿಟ್ಟುಕೊಳ್ಳಲು ನಿಮ್ಮಿಂದ ಸಾಧ್ಯವೇ ಎರಡು ಮೂರು ಚುನಾವಣೆಯಲ್ಲಿ ಸೋತೋ ಎಂಬ ಅನುಕಂಪ ಗಿಟಿಸಿ ಯಾವುದೋ ಅಲೆಯಲ್ಲಿ ತೇಲಿ ಹೋದ ಹಾಗೆ ಒಂದು ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ನಿಮಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾರೆ ಆದ್ದರಿಂದ ಸಾರಾ ಮಹೇಶ್ ಅವರನ್ನು ಟೀಕಿಸುವ ಬದಲು ಸಾಲಿಗ್ರಾಮ ತಾಲೂಕಿಗೆ ನಿಮ್ಮಿಂದಾಗುವ ಕೊಡುಗೆಯನ್ನು ನೀಡಿ ಮತ ನೀಡಿದ ಮತದಾರರ ಋಣವನ್ನು ತೀರಿಸಿಕೊಳ್ಳಿ ಎಂದು ಸಾಲಿಗ್ರಾಮ ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ ಮಧು ಸಲಹೆ ನೀಡಿದರು.





