HOMENews

ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಕನ್ನಡ ವೇದಿಕೆಯಿಂದ ಪ್ರತಿಭಟನೆ

ಮೈಸೂರು:- ಬೆಟ್ಟದ ಪ್ರಾಧಿಕಾರದ ಅಧ್ಯಕ್ಷರ ಕೈ ಗೊಂಬೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು,ಸಂಸದರು ನಡೆಯನ್ನು ಖಂಡಿಸಿ ಹಾಗೂ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು

ಮೈಸೂರಿನ ಪಾರಂಪರಿಕ ಉಳಿಸುವ ಜವಾಬ್ದಾರಿ ಸರ್ಕಾರದ ಹೊಣೆಯಾಗಿದ್ದು, ಆದರೆ ಬೇಲಿಯೇ ಎದ್ದು ಹೊಲ ಮೇಯುವಂತೆ ಆಗಿದೆ, ಚಾಮುಂಡಿ ಬೆಟ್ಟ ಸುತ್ತ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಕಾಮಗಾರಿ ಮಾಡುವ ಮುನ್ನ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಆದರೆ ಚಾಮುಂಡಿ ಬೆಟ್ಟ ಪ್ರಾಧಿಕಾರದ ಅಧ್ಯಕ್ಷರ ತುಗಲಕ್ ದರ್ಬಾರ್ ಮಾಡುತ್ತಿದ್ದು, ಇವರ ತಾಳಕ್ಕೆ ಸಚಿವರು ಸಂಸದರು ಶಾಸಕರು ಕುಣಿಯುತ್ತಿದ್ದು , ಮೈಸೂರಿನ ಇತಿಹಾಸ ತಜ್ಞರು ಹೋರಾಟಗಾರರು ಪರಿಸರವಾದಿಗಳು ರಾಜಮನೆತನದವರು, ಹೋರಾಟ ಮಾಡಿದರು ಸಹಾ ಯಾವುದಕ್ಕೂ ಬಗ್ಗದೆ ಪ್ರಸಾದ ದಾಸೋಹ ಭವನದ ಹೆಸರಿನಲ್ಲಿ ಹಣ ಲೂಟಿ ಮಾಡಿ ಪರಿಸರ ಹಾಳು ಮಾಡುತ್ತಿದ್ದಾರೆ, ಈಗಾಗಲೇ ಮಡಿಕೇರಿಯಲ್ಲಿ ಆದಾ ಘಟನೆಗಳು ಮಳೆ ಭೂಕುಸಿತ ಮಾಸುವ ಮುನ್ನವೇ ಚಾಮುಂಡಿ ಬೆಟ್ಟದ ಕಾಮಗಾರಿ ನಡೆಯುತ್ತಿರುವುದು ದುರಂತ,
ಮೈಸೂರಿನಲ್ಲಿ ಪಾರಂಪರಿಕ ತಜ್ಞರು ಇದ್ದರೂ ಸಹಾ ಅವರಿಗೆ ಬಿಡಿಗಾಸಿನ ಬೆಲೆ ಇಲ್ಲದಂತಾಗಿದೆ, ನಮ್ಮ ರಾಜ್ಯವಲ್ಲದೆ ಬೇರೆ ರಾಜ್ಯದವರು ಸಹಾ ಧ್ವನಿ ಎತ್ತುತ್ತಿದ್ದಾರೆ ಇಷ್ಟೆಲ್ಲಾದರೂ ಸಹಾ ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿರುವುದು ಎಷ್ಟು ಸಮಂಜಸ, ಪ್ರಾಧಿಕಾರದ ಅಧ್ಯಕ್ಷರ ತೀರ್ಮಾನವೇ ಅಂತಿಮವಾದರೆ ಜನಪ್ರತಿನಿಧಿಗಳಿಗೆ ಕೆಲಸವಾದರೂ ಏನು? ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಿ, ಪ್ರಾಧಿಕಾರದ ಅಧ್ಯಕ್ಷರನ್ನೇ ಉಸ್ತುವಾರಿ ಸಚಿವರಾಗಿ ನೇಮಿಸಲಿ ,
ಈಗಾಗಲೇ ಚಾಮುಂಡಿ ಬೆಟ್ಟ ಸುತ್ತ ಮುತ್ತ ಭೂ ಕಬಳಿಕೆ ಮಾಡಿ ಮನೆ ನಿರ್ಮಾಣ ಮಾಡಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ, ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ರಿಯಲ್ ಎಸ್ಟೇಟ್ ಕಛೇರಿಯಾಗಿದೆ,
ಅರಣ್ಯ ಇಲಾಖೆಯವರು ಸಂಪೂರ್ಣವಾಗಿ ತಮ್ಮ ಕೆಲಸದಲ್ಲಿ ವಿಫಲವಾಗಿದ್ದಾರೆ, ಈಗಾಗಲೇ ಕಾಡು ಪ್ರಾಣಿಗಳು ಹೆಚ್ಚಾಗಿದ್ದು ಬೆಟ್ಟದಿಂದ ಬಂದು ನಗರ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದು, ಬಂದಂತಹ ಅಧಿಕಾರಿಗಳು ಇದನ್ನು ಗಮನ ಹರಿಸದೇ ಕುಟುಂಬದವರ ಜೊತೆ ರೆಸಾರ್ಟ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ , ಬೆಟ್ಟದ ಸಂಚಾರಿ ಮಾರ್ಗ ಅಲ್ಲಲಿ ಕುಸಿಯುತ್ತಿದೆ ಬೆಟ್ಟದ ವಾಸ್ತವಾಂಶವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಲಿ ಪ್ರಾಧಿಕಾರದ ಅಧ್ಯಕ್ಷರಾಗಲಿ ಸರ್ಕಾರದ ಗಮನಕ್ಕೆ ತಾರದೆ ಅವೈಜ್ಞಾನಿಕ ಕಾಮಗಾರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ಚಾಮುಂಡಿ ಬೆಟ್ಟಕ್ಕೆ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅಧಿಕಾರಿಗಳು ಬ್ರೋಕರ್ ಗಳ ಸಹಾಯದಿಂದ ಹೆಚ್ಚಿನ ಹಣ ವಸೂಲಿ ಮಾಡಿ ದರ್ಶನಕ್ಕೆ ಬಿಡುತ್ತಿದ್ದಾರೆ,ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ, ಮೆಟ್ಟಿಲು ಹೇರಿ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ ಇಲ್ಲದೆ ಪರದಾಡುತ್ತಿದ್ದು ಈ ರೀತಿಯ ಸಮಸ್ಯೆಗಳು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ, ಬೆಟ್ಟದಲ್ಲಿ ಯಾವ ತೀರ್ಮಾನ ಆದರೂ ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳದೆ ಅಂತಿಮ ತೀರ್ಮಾನ ವಾಗಿದೆ .ಇವೆಲ್ಲವನ್ನೂ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷರಾದ ಎಸ್, ಬಾಲಕೃಷ್ಣ ನಾಲಾ ಬೀದಿ ರವಿ,ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಸಾಯಿ ಚಾಮರಾಜು, ಪ್ಯಾಲೇಸ್ ಬಾಬು,ಹರೀಶ್ ಚಿನ್ನಪ್ಪ,ಶಿವುಗೌಡ,ಮಾದಪ್ಪ ಸುನೀಲ್, ಗೋಪಿ,ಗೈಡ್ ಸ್ವಾಮಿ,ಚೆಲುವರಾಯಸ್ವಾಮಿ , ಹೊಣಕೆರೆ ಕೆರೆ ಸ್ವಾಮಿ, ಎಲ್ ಐ ಸಿ ಸಿದ್ದಪ್ಪ, ಗೋವಿಂದರಾಜು,ಬೀಡಾ ಬಾಬು, ರಮೇಶ್, ಮನೋಹರ್, ನಟರಾಜು, ರೈತ ಪರ್ವ ಅಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಡಾ ಉಮಾಪತಿ ಮುಂತಾದವರು ಇದ್ದರು

Leave a Response