
ಶ್ರೀ ಗಂಗಾಧರ ಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಭಕ್ತರ ದಂಡು ಶಿವರಾತ್ರಿ ಅಂಗವಾಗಿ ಜಿ.ಬಸವನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ಹಾಗೂ ಅನ್ನು ಸಂತರ್ಪಣಾ ಕಾರ್ಯಕ್ರಮ.,
ವರದಿ:- ಪಿರಿಯಾಪಟ್ಟಣ ಪ್ರಸನ್ನ
ಪಿರಿಯಾಪಟ್ಟಣ:- ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ಜಿ.ಬಸವನಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಗಂಗಾಧರ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜಾ ಮತ್ತು ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆಡೆಯಿತು.

ಪ್ರತಿ ವರ್ಷ ಸಂಪ್ರದಾಯಕವಾಗಿ ಮಹಾ ಶಿವರಾತ್ರಿ ಹಬ್ಬದಲ್ಲಿ ಆಚರಿಸಿಕೊಂಡು ಬರುತ್ತಿರುವ ಗ್ರಾಮಸ್ಥರು ಶನಿವಾರ ಮುಂಜಾನೆಯಿಂದಲೇ ದೇವಾಲಯವನ್ನು ಶುಚಿಗೊಳಿಸಿ ವಿವಿಧ ರೀತಿಯ ಹೂ,ಹಸಿರು ತೋರಣ,ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಿಸಲಾಗಿತ್ತು.ಭಾನುವಾರ ಮುಂಜಾನೆ 8 ಗಂಟೆಗೆ ದೇವರಿಗೆ ವಿಶೇಷ ಪೂಜೆಯೊಂದಿಗೆ ಅರ್ಚಕರ ಸಮ್ಮುಖದಲ್ಲಿ ಹೋಮ ಹವನ ನೆರವೇರಿಸಲಾಯಿತು.ಬಳಿಕ ಬೆಟ್ಟದ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಮೆರವಣಿಗೆ ದೇವರ ಮಾಡಿ ಅಲ್ಲಿ ನೇರೆದಿದ್ದ ಭಕ್ತರಿಗೆ ಆಶಿರ್ವಾದ ಪಡೆಯಲು ಅನುವುಮಾಡಿಕೋಡಲಾಗಿತ್ತು, ನೂರಾರು ಭಕ್ತರೊಂದಿಗೆ ಕೊಂಡೋತ್ಸವ ನೆಡಸಲಾಯಿತು. ಇದರಿಂದ ಸುತ್ತಮುತ್ತಲಿ ಭಕ್ತರು ಮಹಾಶಿವರಾತ್ರಿಯ ಅಂಗವಾಗಿ ದೇವರ ದರ್ಶನದಿಂದ ಪುನೀತರಾದರು
ಪ್ರತಿವರ್ಷ ಮಹಾಶಿವರಾತ್ರಿಗೆ ಇಲ್ಲಿ ವಿಶೇಷ ಜಾನುವಾರು ಜಾತ್ರೆ

ಈ ಬಾರಿ ವಿಶೇಷವಾಗಿ ಹಳ್ಳಿಕಾರ್ ಹಾಗೂ ಇತರೆ ತಳಿ ಜಾನುವಾರುಗಳ ಜಾತ್ರೆ ನೆರೆದ ಭಕ್ತರಿಗೆ ಕಣ್ಮನ ಸೆಳೆಯುವಂತಿತ್ತು.
ಪ್ರತಿಭಾರಿ ಹಬ್ಬದಲ್ಲಿ ಇಲ್ಲಿ ಬರುವ ಭಕ್ತಾದಿಗಳಿಗೆ ಅನ್ನ ದಾಸೋಹ ಗ್ರಾಮದ ಶ್ರೀ ಗಂಗಾಧರ ಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಶ್ರೀ ಗಂಗಾಧರ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ :- ಮಗುವಿನ ಕುತ್ತಿಗೆಯಿಂದ ಸರ ಕಿತ್ತು ನುಂಗಿದ ಆರೋಪಿ ಆಸ್ಪತ್ರೆಯಲ್ಲಿ ನಿಗಾ
ಈ ದೇವಾಲುದ ಸುತ್ತ ಮುತ್ತ ಇರುವ ಊರಿನ ಗ್ರಾಮಸ್ಥರಿಂದ ದೇವರ ದರ್ಶನ
ಈ ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಹಿಟ್ನೆ ಹೆಬ್ಬಾಗಿಲು, ಕಗ್ಗುಂಡಿ, ತೆಲುಗಿನ ಕುಪ್ಪೆ, ಕಂದೇಗಾಲ, ಹಿಟ್ನಳ್ಳಿ, ಕೋಮಲಾಪುರ, ಬೆಕ್ಕರೆ, ಭುವನ ಹಳ್ಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಭಕ್ತಾದಿಗಳು ಬೆಟ್ಟ ಹತ್ತಿ ದೇವರ ದರ್ಶನ ಪಡೆದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನಾರಾಯಣ್ ಮಾತನಾಡಿ ಬೆಟ್ಟದ ಮೇಲಿರುವ ಶ್ರೀ ಗಂಗಾಧರ ಬಸವೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ಜು, ಈ ದೇವಾಲಯವು ಗ್ರಾಮಸ್ಥರ ಹಾಗೂ ದಾನಿಗಳು ಮತ್ತು ಜನಪ್ರತಿನಿಧಿಗಳ ನೆರವಿನಿಂದ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನೆರವೇರಿಸುತ್ತ ಬಂದಿದ್ದೇವೆ.ಆದರೆ ಜನ ಪ್ರತಿನಿದಿಗಳು ದೇವಾಲಯದ ಅಭಿವೃದ್ಧಿಯತ್ತ ನಿರ್ಲ್ಯಕ್ಷ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸುವುದಲ್ಲದೆ, ಬೆಟ್ಟದ ಮೇಲಿರುವ ದೇವಾಲಯಕ್ಕೆ ಭಕ್ತರು ಬೆಟ್ಟವನ್ನು ಹತ್ತಲು ಇಳಿಯಲು ಅನುಕೂಲವಾಗುವಂತೆ ಈಗಾಗಲೇ ರಸ್ತೆ ಹಾಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಮುಂದಿನ ದಿನಗಳಲ್ಲಿ ಭಕ್ತರು ತಂಗಲು ಸಮುದಾಯ ಭವನ ನಿರ್ಮಾಣ ಮಾಡಬೇಕಿದೆ ಇದಕ್ಕೆ ಸರ್ಕಾರ ಹಾಗೂ ದಾನಿಗಳು ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಯಜಮಾನರಾದ ನಾಗರಾಜು ಜಿ.ಎನ್, ಶಿವಪ್ಪ, ವೆಂಕಟೇಶ್, ಕರಿಯಪ್ಪ, ಪ್ರಕಾಶ್, ಸುರೇಶ್, ಶಿವ, ಸ್ವಾಮಿ, ಶಿವಕುಮಾರ್, ಮಹದೇವಪ್ಪ ಜಿ ಕೆ, ಸುನೀಲ್, ವೆಂಕಟರಾಮ್, ಹರೀಶ, ಮಂಜುನಾಥ್ ಜಿ ಟಿ, ಕುಮಾರ ಜಿ ಬಸವರಾಜ್ ಜಿ ಎಚ್, ಶಿವಕುಮಾರ್ ಜಿ ವಿ, ನಟೇಶ್ ಮುತ್ತುರಾಜ್ ಸೇರಿದಂತೆ ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತ ಸಮೂಹ ಇದ್ದರು.
ಇದನ್ನೂ ಓದಿ :- ಡಿವೈಡರ್ ಹಾರಿ KSRTC ಬಸ್ಸಿಗೆ ನೆಲಮಂಗಲ ಬಳಿ ಗುದ್ದಿದ ಕಾರು: ಐದು ಜನರ ಸಾ*
ಬನ್ನೂರಿನಲ್ಲಿ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕಬ್ಬು ಬೆಳೆಗಾರರಿಂದ ಶಾಂತಿಯುತ ಪ್ರತಿಭಟನೆ



