HOMENews

ಮರ್ಯಾದಾ ಹ* ಬೆಚ್ಚಿಬೀಳಿಸಿದ ಘಟನೆ: ಪ್ರೀತಿಸಿದವನ ಜೊತೆ ಹೋದ ಮಹಿಳೆಗೆ ವಿಷ ಕುಡಿಸಿ ಕೊ*, ಶವ ಸುಟ್ಟು ಸಾಕ್ಷಿ ನಾಶ

ಚಿಕ್ಕೋಡಿ: ಸಮಾಜದ ಕಠಿಣ ಮನೋಭಾವ ಇನ್ನೂ ಜೀವಂತವಿದೆ ಎನ್ನುವಂತೆ ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ಅಮಾನವೀಯ ಮರ್ಯಾದಾ ಹ* ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಮಹಿಳೆಯನ್ನು ಕುಟುಂಬಸ್ಥರೇ ಕರೆತಂದು ವಿಷ ಕುಡಿಸಿ ಕೊ* ಮಾಡಿ, ಬಳಿಕ ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟಿರುವ ಘಟನೆ ಎಲ್ಲೆಡೆ ಆತಂಕ ಹುಟ್ಟಿಸಿದೆ.

ಕೊ* ಯಾದ ಮಹಿಳೆಯನ್ನು ಸತ್ತೆವ್ವಾ ಹೆಳವರ್ ಎಂದು ಗುರುತಿಸಲಾಗಿದೆ. ಆಕೆ ಇದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಕುಟುಂಬಸ್ಥರು ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೇಳವಿ ಎಂಬಾತನೊಂದಿಗೆ ಆಕೆಯ ವಿವಾಹ ಮಾಡಿಸಿದ್ದರು. ಆದರೆ ಮದುವೆಯಾದ ನಂತರವೂ ಸತ್ತೆವ್ವಾ ತನ್ನ ಪ್ರೀತಿಯ ಸಂಬಂಧವನ್ನು ಮುಂದುವರಿಸಿಕೊಂಡಿದ್ದಳು.

ಗಂಡನ ಮದ್ಯಪಾನದ ಅಭ್ಯಾಸ ಹಾಗೂ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ, ಫೆಬ್ರವರಿ 17ರಂದು ಸತ್ತೆವ್ವಾ ಗಂಡನ ಮನೆಯಿಂದ ಹೊರಬಂದು ಕೃಷ್ಣಾ ಪಾಟೀಲ್ ಜೊತೆ ತೆರಳಿದ್ದಳು. ನಂತರ ಸವದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಈ ವಿಚಾರ ತಿಳಿದ ಕುಟುಂಬಸ್ಥರು ಸುಮಾರು 15 ದಿನಗಳ ಹಿಂದೆ ಇಬ್ಬರನ್ನೂ ಕರೆತಂದಿದ್ದರು.

ಆ ನಂತರ ಸತ್ತೆವ್ವಾಳನ್ನು ಆಕೆಯ ಅಣ್ಣ ಶಾನೂರ ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಿದ್ದನು. ಅಲ್ಲಿ ಕೃಷ್ಣಾ ಪಾಟೀಲ್‌ನನ್ನು ಮರೆತುಕೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿತ್ತು. ಆದರೆ ಆಕೆ ಅದಕ್ಕೆ ಒಪ್ಪದಿದ್ದಾಗ, ಶಿರೋಳದಿಂದ ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮಾರ್ಚ್ 21ರಂದು ವಿಷ ಕುಡಿಸಿ ಕೊ* ಮಾಡಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಕೊ* ಮಾಡಿದ ನಂತರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಆಕೆಯ ಶವವನ್ನು ಹಾಸಿಗೆ ಹಾಗೂ ಬಟ್ಟೆಗಳೊಂದಿಗೆ ಸುಟ್ಟು ಹಾಕಲಾಗಿದೆ. ಈ ಕ್ರೂರ ಕೃತ್ಯವು ಕುಟುಂಬ ಮಾನಕ್ಕೆ ಹೆಸರಿನಲ್ಲಿ ನಡೆದಿರುವುದು ಮತ್ತಷ್ಟು ಆಘಾತಕಾರಿಯಾಗಿದೆ.

ಇತ್ತ ಸತ್ತೆವ್ವಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಂಶಯಗೊಂಡಿದ್ದ ಪ್ರಿಯಕರ ಕೃಷ್ಣಾ ಪಾಟೀಲ್ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಸಿಪಿಐ ಜಾವೇದ್ ಮುಶಾಪುರಿ ನೇತೃತ್ವದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಸತ್ತೆವ್ವಾಳ ಅಣ್ಣ ಶಾನೂರ ಕೊ* ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ

Leave a Reply