
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಏ.15:- ಪ್ರತಿಮೆಗಳನ್ನು ನಿರ್ಮಿಸುವುದರ ಜೊತೆಗೆ ಆ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಿದರೆ ಆದರ್ಶಮಯ ಬದುಕು ನಮ್ಮದಾಗಲಿದೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ಸಂಗೋಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಪಡಿಸಿ ನಂತರ ಮಾತನಾಡಿದ ಅವರು ರಾಯಣ್ಣ ಎಂದು ಜಾತಿ ಧರ್ಮಕ್ಕೆ ಸೀಮಿತವಾದವನಲ್ಲ ಅವರು ಸ್ವಾತಂತ್ರ್ಯದ ಮೊದಲ ಹೋರಾಟಗಾರ ಅವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿದರೆ ಸಾಲದು ಅವರ ಜೀವನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಲಕ್ಷ್ಮಿಪುರ ಗ್ರಾಮದಲ್ಲಿ ಹಿಂದಿನಿಂದಲೂ ನನ್ನನ್ನು ಹಾಗೂ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯನಾದ ದಿನದಿಂದಲೂ ಗ್ರಾಮದ ಅಭಿವೃದ್ಧಿಗೆ ಕಟಿಬದ್ಧವಾಗಿದ್ದು ಈ ಹಿನ್ನಲೆಯಲ್ಲಿ ಇಂದು ಗ್ರಾಮಕ್ಕೆ ನೂತನವಾಗಿ ಪಶು ಆಸ್ಪತ್ರೆ ಚಿಕ್ಕನಾಯಕನಹಳ್ಳಿ, ಲಕ್ಷ್ಮೀಪುರ ನಡುವಿನ ಸಂಪರ್ಕ ರಸ್ತೆ ಗುದ್ದಲಿ ಪೂಜೆ ಹಾಗೂ ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡಲಾಗಿದ್ದು ಪಶು ಆಸ್ಪತ್ರೆಯನ್ನು ತಾತ್ಕಾಲಿಕ ಕಟ್ಟಡದಿಂದ ಮುಂದಿನ ದಿನಗಳಲ್ಲಿ 50 ಲಕ್ಷ ರೂಗಳ ವೆಚ್ಚದಲ್ಲಿ ನೂತನ ಕಟ್ಟಡ ಸ್ಥಾಪಿಸಲಾಗುವುದು ಹಾಗೂ ಪಕ್ಕದ ಗ್ರಾಮವಾದ ಬಳ್ಳೂರು ಗ್ರಾಮಕ್ಕೆ ಬೈಲಾಪುರ ಗ್ರಾಮದಿಂದ ಬರುವ ರಸ್ತೆ ಮತ್ತು ಚಿಕ್ಕನಾಯಕನಹಳ್ಳಿ ರಸ್ತೆಗೆ ಪ್ರಗತಿಪಥ ಯೋಜನೆ ಅಡಿ 4 ಕೋಟಿ ಅನುದಾನ ಅನುಮೋದನೆಗೊಂಡಿದೆ ಎಂದು ಮಾಹಿತಿ ನೀಡಿದರು.
ಲಕ್ಷ್ಮಿಪುರ ಗ್ರಾಮದ ಬಹುದಿನಗಳ ಬೇಡಿಕೆಯಾದ ಅಂಬೇಡ್ಕರ್ ಭವನಕ್ಕೆ ಸ್ಥಳ ಪರಿಶೀಲನೆ ಮಾಡುವಂತೆ ತಹಶೀಲ್ದಾರ್ ಅವರಿಗೆ ತಿಳಿಸಿದವರು ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡಕ್ಕೆ ಮೈಮುಲ್ ವತಿಯಿಂದ 5 ಲಕ್ಷ ರೂ ಅನುದಾನ ನೀಡಿದ್ದು ಅದರಂತೆ ಇನ್ನೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಸ್ವಾಮಿಗೌಡ, ತಾಪಂ ಮಾಜಿ ಸದಸ್ಯ ಸಣ್ಣಪ್ಪ, ತಹಸಿಲ್ದಾರ್ ರುಕಿಯ ಬೇಗಂ, ಪಶು ಇಲಾಖೆಯ ಡಿ ಡಿ ಡಾ. ನಾಗರಾಜ್, ಸಹಾಯಕ ನಿರ್ದೇಶಕ ಡಾ. ರಾಮು,ಡಾ ಸುರೇಂದ್ರ ಮುಖಂಡರಾದ ಸಣ್ಣೆಗೌಡ, ಪಾಪಣ್ಣ, ಬೆರ್ಯ ಕಿರಣ್,ಮಂಜಣ್ಣ, ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಸದಸ್ಯರು ಹಾಜರಿದ್ದರು.
” ಬಾಕ್ಸ್ ಕಾಲಂ”
ಶಾಸಕ ರವಿಶಂಕರ್ ಅವರು ನೀಡಿದ ಭರವಸೆಯಂತೆ ಹಿಂದೆ ಆರ್‌ಟಿಸಿಯಲ್ಲಿ ತೊಂದರೆಯಾಗಿ ಜಮೀನನ್ನು ಪೋಡಿ ಮಾಡಿಸಲು ಸಾಧ್ಯವಾಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ರಂಗೇಗೌಡ ಅವರ ತೊಂದರೆಯನ್ನು ಬಗೆಹರಿಸಿ ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಲಾಯಿತು





