ಸಾಲಿಗ್ರಾಮ ಹಾಲುಉತ್ಪಾದಕರ ಸಹಕಾರ ಸಂಘಕ್ಕೆ ಹೊಸ ನಾಯಕತ್ವ: ಎಸ್‌ಆರ್ ಮಹೇಂದ್ರ ಅಧ್ಯಕ್ಷ, ಮಹೇಶ್ ಉಪಾಧ್ಯಕ್ಷ ಅವಿರೋಧ ಆಯ್ಕೆ

ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಏ.23:- ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್ ಆರ್ ಮಹೇಂದ್ರ ಉಪಾಧ್ಯಕ್ಷರಾಗಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ರವಿ ಕುಮಾರ್ ಘೋಷಿಸಿದ್ದಾರೆ.
ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್ ಆರ್ ಮಹೇಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ್ ಹೊರತುಪಡಿಸಿದರೆ ಮತ್ತಾರು ನಾಮಪತ್ರ ಸಲ್ಲಿಸದೆ ಇದ್ದುದರಿಂದ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸುಗಮವಾಯಿತು.
ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನಿರ್ದೇಶಕರು ಮತ್ತು ಜೆಡಿಎಸ್ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾರಾ ನಂದೀಶ್ ನೇತೃತ್ವದಲ್ಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸುವ ಜೊತೆಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.

ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾರಾ ನಂದೀಶ್ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿಯೇ ಅತ್ಯಂತ ದೊಡ್ಡ ಮತ್ತು ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರ ಸಂಘ ಸಾಲಿಗ್ರಾಮವಾಗಿದ್ದು ಇದು ಉತ್ತಮ ಮತ್ತು ಅತ್ಯುತ್ತಮವಾಗಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಮತ್ತು ಯಶಸ್ವಿಗೆ ಕಾರಣವಾಗಿದ್ದು ಈ ಸಂಘವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.
ಯಾವುದೇ ಸಹಕಾರ ಸಂಘ ಅಭಿವೃದ್ಧಿ ಹೊಂದಬೇಕಾದರೆ ರಾಜಕೀಯ ಮತ್ತು ಸ್ವಪ್ರತಿಷ್ಠ ತರಬಾರದು ಯಾರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಾರೋ ಅವರಿಗೆ ಸಹಕಾರ ನೀಡಬೇಕು ನಾನು ಮತ್ತು ನನ್ನ ಅಣ್ಣ ಮಾಜಿ ಸಚಿವ ಸಾರಾ ಮಹೇಶ್ ಅವರು ಯಾವಾಗಲೂ ಸಹಕಾರ ಕ್ಷೇತ್ರಕ್ಕೆ ಹಸ್ತಕ್ಷೇಪ ಮಾಡದೆ ಚುನಾಯಿತರಾಗಿ ಆಯ್ಕೆಯಾದ ಸದಸ್ಯರಿಗೆ ಆಡಳಿತ ನಡೆಸಲು ಸಹಕಾರ ನೀಡಿದ್ದೇವೆ ಅದನ್ನು ಮುಂದೆಯೂ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಈಗ ಆಯ್ಕೆ ಆಗಿರುವ 12 ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಲು ಅರ್ನರಿದ್ದು ಅವರೆಲ್ಲರಿಗೂ ಈಗ ಒಡಂಬಡಿಕೆ ಮಾಡಿಕೊಂಡಿರುವಂತೆ ಅಧಿಕಾರ ನೀಡಲಾಗುವುದು ಹಾಗೂ ಈಗ ಅಧಿಕಾರ ಪಡೆದಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತೀರ್ಮಾನದಂತೆ ನಡೆದುಕೊಂಡು ಬೇರೆಯವರಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಎಸ್ ಆರ್ ಮಹೇಂದ್ರ ಮಾತನಾಡಿ ಈ ತಾಲೂಕಿನ ಜನಪ್ರಿಯ ನಾಯಕರಾದ ಮಾಜಿ ಸಚಿವ ಸಾರಾ ಮಹೇಶಣ್ಣನವರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾರಾ ನಂದೀಶಣ್ಣನವರು ನನ್ನನ್ನು ನಂಬಿ ಇಂತಹ ಒಂದು ದೊಡ್ಡ ಜವಾಬ್ದಾರಿಯನ್ನು ನೀಡಿರುವುದರಿಂದ ಅವರಿಗೆ ಮನಪೂರ್ವಕವಾಗಿ ಅಭಿನಂದಿಸುತ್ತೇನೆ ಹಾಗೂ ಅವರ ನಂಬಿಕೆಗೆ ಮತ್ತು ಸಂಘದ ಅಭಿವೃದ್ಧಿಗೆ ಯಾವುದೇ ರೀತಿಯ ಚುತ್ತಿ ಬರದಂತೆ ನಡೆಯುತ್ತೇನೆ ಎಂದು ತಿಳಿಸಿದರು.
ನನ್ನ ಆಡಳಿತ ಅವಧಿಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಮತ್ತು ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಸಂಘದ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಅಭಿವೃದ್ಧಿಪಡಿಸುವ ಜೊತೆಗೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಅವುಗಳನ್ನು ಜಾರಿಗೆ ತರುವ ಮೂಲಕ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಾರಣರಾದ ಆಡಳಿತ ಮಂಡಳಿಯ ಸದಸ್ಯರು ಮತ್ತು ಉತ್ಪಾದಕರಿಗೆ ಕೊಡುಗೆಯನ್ನು ನೀಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಮಹೇಶ್ ನಿರ್ದೇಶಕರಾದ ಲೋಕೇಶ್ ಎಸ್ಆರ್, ವೆಂಕಟೇಶ್ ಎಸ್ ಪಿ, ಸೀತಣ್ಣ ಎಸ್ ಕೆ, ಶಿವರಾಮ ಎಸ್ ಸಿ, ಮಧುಚಂದ್ರ ಎಸ್ ಕೆ, ಜಗದೀಶ್, ಅರುಣ್ ರಾಜ್ ಎಸ್ ಎನ್, ರಾಣಿ, ಅಶ್ವಿನಿ ಹೆಚ್ ವೈ, ರಾಮನಾಯಕ ಮುಖಂಡರುಗಳಾದ ಸಾರಾ ಸತೀಶ್ , ರಾಮು,ರೇವಣ್ಣ, ಅನಂತ, ಪಾಪಣ್ಣ ವಿಎಸ್ಎಸ್ ಮಾಜಿ ಅಧ್ಯಕ್ಷ ಸತೀಶ್ ಕರ್ಪೂರಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪುರುಷೋತ್ತಮ್ ಚುನಾವಣಾ ಅಧಿಕಾರಿ ರವಿಕುಮಾರ್ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿಗಳು ಹಾಜರಿದ್ದರು
“. ಬಾಕ್ಸ್ ಕಾಲಂ” ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪೈಪೋಟಿಯಿಂದ ಇದ್ದು ಅಧಿಕಾರಕ್ಕಾಗಿ ಎರಡು ಗುಂಪುಗಳ ನಡುವೆ ನೇರ ಹಣ ಹಣೆ ನಡೆಯುವುದನ್ನು ಅರಿತ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾರಾ ನಂದೀಶ್ ತನ್ನ ಚಾಣಾಕ್ಷತನದಿಂದ ಎಲ್ಲಾ 12 ಸದಸ್ಯರನ್ನ ಜೊತೆಗೂಡಿಸಿಕೊಂಡು ಸಂಧಾನ ಮತ್ತು ಒಪ್ಪಂದದ ಮೂಲಕ ಎರಡು ಗುಂಪುಗಳ ಮನವೊಲಿಸಿ ಒಂದುಗೂಡಿಸಿ ಸಾಲಿಗ್ರಾಮದಲ್ಲಿ ಸಹಕಾರ ಸಂಘಗಳ ಚುನಾವಣೆ ನನ್ನ ನೇತೃತ್ವದಲ್ಲಿಯೇ ಒಮ್ಮತದಿಂದ ನಡೆಯುತ್ತದೆ ಎಂಬುದನ್ನು ತೋರಿಸಿಕೊಟ್ಟರು” ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸಾರಾ ನಂದೀಶ್.





