HOMEFilm News

ಮೈಸೂರು: ಯುವ ನಟ ನಿಖಿಲ್ ಹೀರೋ ಆಗಿ ಅಭಿನಯಿಸಿರುವ ‘ವಿಕ್ರಂ ಆನ್ ಡ್ಯೂಟಿ’ ಎಂಬ ವೆಬ್ ಸೀರೀಸ್ ಇದೀಗ ಜಿಯೋ ಹಾಟ್‌ಸ್ಟಾರ್ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಬಹುಭಾಷೆಗಳಲ್ಲಿ ನಿರ್ಮಿತವಾಗಿರುವ ಈ ಸೀರೀಸ್ ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಕರಿಗೆ ಲಭ್ಯವಾಗಿದ್ದು, ಈಗಾಗಲೇ ಮೊದಲ ನಾಲ್ಕು ಎಪಿಸೋಡ್‌ಗಳನ್ನು ಪ್ರೇಕ್ಷಕರು ವೀಕ್ಷಿಸಬಹುದು.

ಈ ವೆಬ್ ಸೀರೀಸ್‌ ಮೂಲಕ ನಿಖಿಲ್ ತಮ್ಮ ಅಭಿನಯ ಕೌಶಲ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದು, ಕಥೆಯಲ್ಲಿ ರೋಚಕ ತಿರುವುಗಳು ಮತ್ತು ಕುತೂಹಲ ಮೂಡಿಸುವ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ ಎಂದು ನಿರ್ಮಾಪಕ ವಲಯ ತಿಳಿಸಿದೆ. ಕಥೆಯ ಹಂದರದಲ್ಲಿ ಸಾಹಸ, ತನಿಖೆ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದ್ದು, ಯುವ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ಸೀರೀಸ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿಖಿಲ್ ಅವರ ಅಭಿನಯ ಹಾಗೂ ಕಥಾ ನಿರೂಪಣೆ ಕುರಿತು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಮುಂದಿನ ಎಪಿಸೋಡ್‌ಗಳಿಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.

ಇದೀಗ ನಾಲ್ಕು ಎಪಿಸೋಡ್‌ಗಳು ಪ್ರಸಾರವಾಗಿದ್ದು, ಮುಂದಿನ ಭಾಗಗಳು ಕ್ರಮವಾಗಿ ಬಿಡುಗಡೆ ಆಗಲಿವೆ ಎಂದು ತಿಳಿದುಬಂದಿದೆ. ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಈ ವೆಬ್ ಸೀರೀಸ್ ಅನ್ನು ವೀಕ್ಷಿಸಿ ನಿಖಿಲ್ ಅವರಿಗೆ ಆಶೀರ್ವಾದ ಹಾಗೂ ಪ್ರೋತ್ಸಾಹ ನೀಡುವಂತೆ ವಿನಮ್ರ ಮನವಿ ಮಾಡಿದ್ದಾರೆ.

Leave a Reply