HOMENews

ಮೈಸೂರಿನ ಕಲಾಮಂದಿರದಲ್ಲಿ ಸಂಗೀತ–ನೃತ್ಯ–ನಾಟಕ ಸಂಭ್ರಮಿಸಿದ ಜನತೆ: ಆಯಾಮೋತ್ಸವ ಯಶಸ್ವಿ

ಕಲಾಮಂದಿರದಲ್ಲಿ ಆಯಾಮೋತ್ಸವ ಕಂಗೊಳಿಸಿತು: ಮಕ್ಕಳ ಕಲಾಪ್ರತಿಭೆಗೆ ವೇದಿಕೆ: ಮೈಸೂರು ಸಂಗೀತ:ನೃತ್ಯ:ನಾಟಕ: ಸಂಭ್ರಮ: ಆಯಾಮೋತ್ಸವ ಯಶಸ್ವಿ

ಮೈಸೂರು: ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಫೆಬ್ರವರಿ 7ರಂದು ಆಯೋಜಿಸಲಾದ “ಆಯಾಮೋತ್ಸವ – ಸಂಗೀತ, ನೃತ್ಯ ಮತ್ತು ನಾಟಕ ಉತ್ಸವ” ಮೈಸೂರಿನ ಕಲಾಪ್ರೇಮಿಗಳ ಗಮನ ಸೆಳೆಯುವಂತಾಯಿತು. ನಮ್ಮ ಆಯಾಮ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ಈ ಉತ್ಸವವು ಮಕ್ಕಳಲ್ಲಿರುವ ಸಾಂಸ್ಕೃತಿಕ ಸಾಮರ್ಥ್ಯವನ್ನು ಹೊರಹಾಕುವ ವೇದಿಕೆಯಾಗಿದ್ದು, ಕಾರ್ಯಕ್ರಮವು ಇಲ್ಲಿ ನೇರದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ನಿರ್ದೇಶಕರಾದ ವಿ. ಎಸ್. ಮಲ್ಲಿಕಾರ್ಜುನ ಸ್ವಾಮಿ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಎಲ್ಲಾರ ಜೀವನ ಮೊಬೈಲ್ ಆಧಾರಿತ ಜೀವನಶೈಲಿಯ ಮಧ್ಯೆ ಸಂಗೀತ, ನೃತ್ಯ, ನಾಟಕ ಹಾಗೂ ಸಾಹಿತ್ಯದ ಮೂಲಕ ಮಕ್ಕಳ ಸಾಂಸ್ಕೃತಿಕ ಬೆಳವಣಿಗೆಗೆ ಉತ್ತಮ ವಾತಾವರಣವನ್ನು ನಿರ್ಮಿಸುತ್ತಿರುವ ವಿದುಷಿ ಡಾ. ಶಾಂಭವಿ ಸ್ವಾಮಿ ಹಾಗೂ ಆಯಾಮ ಸಂಸ್ಥೆ ಕಾರ್ಯವನ್ನು ಶ್ಲಾಘಿಸಿದರು

ಈಗಿನ ಮಕ್ಕಳನ್ನು ಕೇಂದ್ರದಲ್ಲಿಟ್ಟುಕೊಂಡು ನಡೆಯುವ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಮಾತ್ರ ಸೀಮಿತವಾಗದೆ, ಎಲ್ಲಾ ಸಮಾಜಕ್ಕೂ ಸ್ಪೂರ್ತಿಯಾಗುತ್ತದೆ ಎಂದು ಅವರು ಹೇಳಿದರು. ಸಾಹಿತ್ಯ ಕಲೆಗಳ ಮೂಲಕ ಜನರಲ್ಲಿ ಶಾಂತಿ, ಸಹನೆ ಹಾಗೂ ಸಹಜ ಸಹವಾಸದ ಮೌಲ್ಯಗಳನ್ನು ಬೆಳೆಸುವ ಸಂಸ್ಕೃತಿಪರ ಸಮಾಜವನ್ನು ನಿರ್ಮಿಸಲು ಅಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

 

ಈಗಿನ“ಮಕ್ಕಳ ಮನಸ್ಸಿನಲ್ಲಿ ಕಲೆ- ಸಂಸ್ಕೃತಿ ಎಂಬ ಬೀಜವನ್ನು ಬಿತ್ತಿದರೆ ಅದು ಮುಂದಿನ ಭವಿಷ್ಯದಲ್ಲಿ ಸೃಜನಶೀಲತೆಯ ದೊಡ್ಡ ಹೆಮ್ಮರವಾಗಿ ಬೆಳೆಯುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತಾನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ. ಸುಧರ್ಷನ್, ಮಕ್ಕಳೇ ನೀವು ಮುನ್ನಡೆಸಿದ ಹಲವು ವೈಶಿಷ್ಟ್ಯಪೂರ್ಣ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಆಯಾಮ ಅಕಾಡೆಮಿಯ ಕಾರ್ಯವನ್ನು ಅಭಿನಂದಿಸಿದರು . ಪ್ರಸ್ತುತ ಈಗಿ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುತ್ತಿರುವುದರಿಂದ ಅವರ ಸಹಜ ಆಸಕ್ತಿ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದರು.

ಮಕ್ಕಳು ಗಿಡಗಳಂತೆ ಸಹಜವಾಗಿ ಬೆಳೆಯಬೇಕು; ದೊಡ್ಡವರ ನಿರೀಕ್ಷೆಗಳ ಕಟ್ಟಳೆಗೆ ಸೀಮಿತಗೊಳಿಸಬಾರದು ಎಂದು ಅವರು ಹೇಳಿದರು. ಮಕ್ಕಳ ಸಮಗ್ರ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಪೋಷಕರು, ಶಿಕ್ಷಕರು ಮತ್ತು ಸಮಾಜದ ಒಟ್ಟಾರೆ ಜವಾಬ್ದಾರಿ ಎಂದು ಒತ್ತಿಹೇಳಿದರು.

ಮಕ್ಕಳಿಗೆ“ಶೈಕ್ಷಣಿಕ ಸಾಧನೆಯಷ್ಟೇ ಮುಖ್ಯವಲ್ಲ, ಕಲಾತ್ಮಕ ಅಭಿವ್ಯಕ್ತಿ ಕೂಡ ಮಕ್ಕಳ ಮನೋವಿಕಾಸಕ್ಕೆ ಅವಶ್ಯಕ” ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಅಮೆಚೂರ್ ಥಿಯೇಟರ್ ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಎಚ್. ಅವರು ಆಯಾಮ ಅಕಾಡೆಮಿ ಕೈಗೊಂಡಿರುವ ಸಾಂಸ್ಕೃತಿಕ ಹಾಗೂ ಕಲಾತ್ಮಕ ಚಟುವಟಿಕೆಗಳನ್ನು ಮೆಚ್ಚಿದರು. ಈಗಿನ ಮಕ್ಕಳಲ್ಲಿ ನಾಟಕ ಮತ್ತು ಪ್ರದರ್ಶನಕಲೆಗಳ ಆಸಕ್ತಿಯನ್ನು ಬೆಳೆಸುವ ಈ ಪ್ರಯತ್ನವು ಮುಂದಿನ ತಲೆಮಾರಿಗೆ ನಮ್ಮ ಸಾಂಸ್ಕೃತಿಕ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಆಯಾಮ ಸಂಸ್ಥೆಯ ಕಾರ್ಯದರ್ಶಿಯಾದ ಶಾಂಭವಿ ಸ್ವಾಮಿ ಎಲ್ಲಾ ಅತಿಥಿಗಳು ಹಾಗೂ ಕಲಾಭಿಮಾನಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಸ್ಥೆಯ ಅಯಾಮ ಸಂಸ್ಥೆಯ  ಉದ್ದೇಶ, ಈಗಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳೆಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಅವರು ವಿವರಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದ್ದು, ನಮ್ಮ ಕಲೆಗಳ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸುವುದೇ ನಮ್ಮಅಯಾಮಾ ಸಂಸ್ಥೆಯ ಧ್ಯೇಯ ಎಂದು ತಿಳಿಸಿದರು.

ಉತ್ಸವದ ಅಂತಿಮ ಹಂತದಲ್ಲಿ ಮಕ್ಕಳಿಂದ ದೇಶಭಕ್ತಿಗೀತೆಗಳು ಹಾಗೂ ನೃತ್ಯ ಪ್ರದರ್ಶನಗಳು ನಡೆದವು. ತಮ್ಮ ಕಲೆಗಳ ಮೂಲಕ ವೇದಿಕೆಯನ್ನು ಜೀವಂತಗೊಳಿಸಿದ ಮಕ್ಕಳ ಪ್ರತಿಭೆ ಪ್ರೇಕ್ಷಕರ ಮನಸೆಳೆದಿತು. ಸಂಗೀತದ ಲಯ, ನೃತ್ಯದ ಹೆಜ್ಜೆ ಹಾಗೂ ಅಭಿನಯದ ಅಭಿವ್ಯಕ್ತಿಗಳಿಂದ ತುಂಬಿದ ಈ ಪ್ರದರ್ಶನಗಳು ಸಭಾಂಗಣದಲ್ಲಿ ವಿಶೇಷ ಉತ್ಸಾಹದ ವಾತಾವರಣ ಸೃಷ್ಟಿಸಿತು.

ಪೋಷಕರು ತಮ್ಮ ಮಕ್ಕಳ ಪ್ರದರ್ಶನವನ್ನು ಹೆಮ್ಮೆಯಿಂದ ವೀಕ್ಷಿಸಿದರೆ, ಕಲಾಭಿಮಾನಿಗಳು ಭರ್ಜರಿ ಚಪ್ಪಾಳೆಗಳಿಂದ ಪ್ರೋತ್ಸಾಹಿಸಿದರು.

ಒಟ್ಟಿನಲ್ಲಿ, “ಆಯಾಮೋತ್ಸವ” ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಷ್ಟೇ ಅಲ್ಲದೆ, ಮಕ್ಕಳಲ್ಲಿ ಕಲೆಗಳ ಮೂಲಕ ವ್ಯಕ್ತಿತ್ವ ಬೆಳವಣಿಗೆಗೆ ಉತ್ತೇಜನ ನೀಡುವ ವೇದಿಕೆಯಾಗಿ ರೂಪುಗೊಂಡಿತು. ಇಂದಿನ ಜೀವನದಲ್ಲಿ ತಂತ್ರಜ್ಞಾನಾಧಾರಿತ ಯುಗದಲ್ಲಿ ಮಕ್ಕಳನ್ನು ಪರಂಪರೆಯ ಕಲೆಗಳೊಂದಿಗೆ ಸಂಪರ್ಕಿಸುವ ಪ್ರಯತ್ನವು ಸಮಾಜದಲ್ಲಿ ಸಕಾರಾತ್ಮಕ ಸಂದೇಶ ಎಲ್ಲರಿಗೂ ತಿಳಿಸುವಂತಾಯಿತು

ಅಯಾಮ ಉತ್ಸವವು ಮೈಸೂರು ನಗರದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತೊಂದು ಹಿರಿಮೆಯನ್ನು ಸೇರಿಸಿದಂತೆ ಕಾಣಿಸಿಕೊಂಡಿತು.

ಕಾರ್ಯಕ್ರಮದಲ್ಲಿ ನಿರಂತರದ ಸಂಸ್ಥೆಯ ಶ್ರೀನಿವಾಸ್ ಪಾಲಹಳ್ಳಿ, ಧರ್ಮರಾಜ್ ಎಲ್ಲದಕರೆ, ರವಿಕುಮಾರ್, ಶ್ರೀ ಎಸ್. ವಿ. ಆರ್. ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಕ್ಕಳ ಪೋಷಕರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.