HOMENews

 ಪ್ರಜ್ಞಾ ಮರಾಠೆ ರಸಮಂಜರಿ ಕಾರ್ಯಕ್ರಮ

ಮೈಸೂರು: ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಭಗವತಿ ಚಿತ್ಪಾವನ ಮಹಿಳಾ ಟ್ರಸ್ಟ್ ವತಿಯಿಂದ ನಗರದ ಕೃಷ್ಣಮೂರ್ತಿ ಪುರಂನ ಬಿಎಸ್ಎಸ್ ವಿದ್ಯೋದಯ ಶಾಲೆಯಲ್ಲಿ ಮಾಚ್೯ 28ರಂದು ಸಂಜೆ 5 ಗಂಟೆಗೆ ಗಾಯಕಿ ಪ್ರಜ್ಞಾ ಮರಾಠೆ ಅವರ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರಿನ ಪ್ರಜ್ಞಾ ಮರಾಠೆ ಅವರು ಝಿ ಕನ್ನಡ ವಾಹಿನಿಯ ಸರಿಗಮಪ 20ನೇ ಸೀಜನ್ನಿನಲ್ಲಿ ಸೆಮಿ ಫೈನಲ್ ಸ್ಪರ್ಧಿಯಾಗಿದ್ದರು ಎಂದು ಶ್ರೀ ಭಗವತಿ ಚಿತ್ಪಾವನ ಮಹಿಳಾ ಟ್ರಸ್ಟ್ ಕಾರ್ಯದರ್ಶಿ ಸುಜಲಾ ಗೋರೆ ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

28ರಂದು ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮರ್ಪಣ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸುಧಾ ಫಣೀಶ್ ಹಾಗೂ ವಿಜಯ ವಿಠಲ ವಿದ್ಯಾಶಾಲಾ ಪ್ರಾಂಶುಪಾಲರಾದ ಎಸ್.ಎ.ವೀಣಾ ಭಾಗವಹಿಸುವರು. ನಂತರ ಪ್ರಜ್ಞಾ ಮರಾಠೆ ಅವರು ಸುಗಮ ಸಂಗೀತ ಹಾಗೂ ಚಿತ್ರಗೀತೆಗಳನ್ನು ಹಾಡುವರು. ಅವರೊಂದಿಗೆ ಅನ್ವಿತ್ ರಾಜ್ ಕೂಡಾ ಭಾಗವಹಿಸುವರು ಎಂದು ವಿವರಿಸಿದರು.

ಮಹಿಳೆಯರಿಂದ ಮಹಿಳೆಯರಿಗಾಗಿ

ಭಗವದ್ಗೀತೆ ಚಿತ್ಪಾವನ ಮಹಿಳಾ ಟ್ರಸ್ಟ್ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಪ್ರಜ್ಞಾ ಮರಾಠೆಯವರದು ನಾಲ್ಕನೆಯ ಕಾರ್ಯಕ್ರಮ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷೆ ವೀಣಾ ಡೋಂಗ್ರೆ, ಕೋಶಾಧಿಕಾರಿ ದೀಪಾ ಹೆಬ್ಬಾರ ಹಾಗೂ ಸದಸ್ಯೆ ಮಧುರಾ ತಾಮ್ಹನ್ ಕರ್ ಭಾಗವಹಿಸಿದ್ದರು.

Leave a Reply