HOMENews

ಆಸ್ತಿ ವಿವಾದ: ತಂಗಿ ಮಗನ ಕೊಲ್ಲಲು ಸುಪಾರಿ ಕೊಟ್ಟ ಮಾವ, ಅಳಿಯನ ವಿರುದ್ಧ ದೂರು ದಾಖಲು.,

 ವರದಿ: ರವಿಚಂದ್ರ ಬೂದಿತಿಟ್ಟು.

ಪಿರಿಯಾಪಟ್ಟಣ : ತಂಗಿಗೆ ಆಸ್ತಿಯನ್ನು ನೀಡಲೇ ಬಾರದು ಎಂದು ತೀರ್ಮಾನಿಸಿ ತನ್ನ ಸೋದರ ಅಳಿಯನನ್ನು ಕೊಲ್ಲಲು ಸುಪಾರಿ ಕೊಟ್ಟ ಮಾವ ಹಾಗೂ ಆತನ ಅಳಿಯನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.

ಪಿರಿಯಾಪಟ್ಟಣ ಟೌನ್ ಬೆಟ್ಟದಪುರ ರಸ್ತೆಯಲ್ಲಿ ಟಿಂಬರ್ ಅಂಗಡಿ ಇಟ್ಟಿಕೊಂಡು ವ್ಯಾಪಾರ ನಡೆಸಿಕೊಂಡಿದ್ದ ಪ್ರವೀಣ್ ಕುಮಾರ್ (33 ವರ್ಷ) ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಈತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

ಪ್ರವೀಣ್ ಕುಮಾರ್ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬಿದರಹಳ್ಳಿ ಹುಂಡಿ ಗ್ರಾಮದವರಾಗಿದ್ದು, ಇವರ ತಾಯಿ ಜಯಮಣಿ ಎಂಬುವವರನ್ನು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಿಂದ ಶ್ರೀರಂಗಪಟ್ಟಣ ತಾಲೂಕಿನ ಬಿದರಹಳ್ಳಿ ಹುಂಡಿ ಗ್ರಾಮದ ಬಸವಣ್ಣ ಎಂಬುವವರಿಗೆ ಮದುವೆ ಮಾಡಿ ಕೊಡಲಾಗಿತ್ತು, ಜಯಮಣಿ  ಹಾಗೂ ಆಕೆಯ ಪುತ್ರ ಪ್ರವೀಣ್ ಕುಮಾರ್ ನೊಂದಿಗೆ   ಪಿರಿಯಾಪಟ್ಟಣ ಟೌನಿನಲ್ಲಿ ವಾಸವಿದ್ದು, ಪಿರಿಯಾಪಟ್ಟಣ ಟೌನ್ ಬೆಟ್ಟದಪುರ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡು ಟಿಂಬರ್ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದು ಇದರ ನಡುವೆ ಜಯಮಣಿ ತನ್ನ ತಂದೆಯ ಮನೆಯಿಂದ ತನಗೆ ಬರಬೇಕಾದ ಆಸ್ತಿಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವ್ಯಾಜ್ಯ ನಡೆಯುತ್ತಿದೆ. ಹೀಗಿರುವಾಗ  ಪ್ರವೀಣ್ ಕುಮಾರ್ ಸೋದರ ಮಾವ ಜಯಮಣಿಯ ಅಣ್ಣ ರಾಜು ಎಂಬುವವರ ನಡುವೆ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಪ್ರವೀಣ್ ಕುಮಾರ್ ಬೈಕಿನಲ್ಲಿ ಬರುತ್ತಿರುವಾಗ ಸೋದರ ಮಾವ ರಾಜು ಎಂಬುವವರು ಕಾರಿನಲ್ಲಿ ಬಂದು ಆಕ್ಸಿಡೆಂಟ್ ಮಾಡಿ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಂತರ ರಾಜಿ ಸಂಧಾನ ನಡೆದು ಇಂತಿಷ್ಟು ಆಸ್ತಿಯನ್ನು ಜಯಮಣಿ ಯವರಿಗೆ ನೀಡುವಂತೆ ಅಂದಿನ ಹುಣಸೂರು ಡಿವೈಎಸ್ಪಿ ಸಮ್ಮುಖದಲ್ಲಿ ತೀರ್ಮಾನವಾಗಿತ್ತು.

 

ಹೀಗಿದ್ದರೂ ಇವರಿಗೆ ಆಸ್ತಿ ನೀಡಲೇ ಬಾರದು ಎಂದು ಜಯಮಣಿ ಅಣ್ಣ ರಾಜು ಹಾಗೂ ರಾಜುವಿನ ಅಳಿಯ ಮಹಾಲಿಂಗ ಸ್ವಾಮಿ ಎಂಬುವವರು ಪ್ರವೀಣ್ ಕುಮಾರ್ ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಏಪ್ರಿಲ್ 13 ರ ರಾತ್ರಿ 9 :30 ರ ಸುಮಾರಿಗೆ ಟಿಂಬರ್ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗುತ್ತಿದ್ದಾಗ ಬೈಕನ್ನು ದೂರದಲ್ಲಿ ನಿಲ್ಲಿಸಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೈ ಹಾಗೂ ದೇಹದ ಭಾಗಗಳಿಗೆ ಹೊಡೆದಿದ್ದು ನಂತರ ಇವರಿಂದ ತಪ್ಪಿಸಿಕೊಳ್ಳಲು ಓಡಿ ಬಂದಾಗ ಅಪರಿಚಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಪ್ರವೀಣ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply