HOME

ಕಲುಷಿತ ನೀರಿನ ವಿರುದ್ಧ ಕ್ರಮವಿಲ್ಲದಿದ್ದರೆ ಪ್ರತಿಭಟನೆ: ಮಾಜಿ ಗ್ರಾ ಪಂ. ಅಧ್ಯಕ್ಷೆ ಸುಧಾರೇವಣ್ಣ ಎಚ್ಚರಿಕೆ

ಕಲುಷಿತ ನೀರಿನ ವಿರುದ್ಧ ಕ್ರಮವಿಲ್ಲದಿದ್ದರೆ ಪ್ರತಿಭಟನೆ: ಮಾಜಿ ಗ್ರಾ.ಪಂ. ಅಧ್ಯಕ್ಷೆ ಸುಧಾರೇವಣ್ಣ ಎಚ್ಚರಿಕೆ

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ. 03:-  ಸಾಲಿಗ್ರಾಮ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸದಿದ್ದರೆ ಸಾರ್ವಜನಿಕರು ಮತ್ತು ಸಂಘಟನೆಗಳನ್ನು ಸೇರಿಸಿಕೊಂಡು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ರೇವಣ್ಣ?

ಸಾಲಿಗ್ರಾಮದಲ್ಲಿ ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯ ಭೀತಿ ಉಂಟಾಗುವ ಸಾಧ್ಯತೆ ಇದೆ ಆದ್ದರಿಂದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸದೆ ಇದ್ದರೆ , ಸಂಘಟನೆ ಗಳೊಂದಿಗೆ ಪ್ರತಿಭಟನೆ ಮಾಡುವುದಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸುಧಾರೇವಣ್ಣ ಎಚ್ಚರಿಕೆ ನೀಡಿದರು.

 ಅವರು ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ಸಾಲಿಗ್ರಾಮವು ಸುಮಾರು 15 ರಿಂದ 20 ಸಾವಿರಕ್ಕೂ ಅಧಿಕವಾಗಿ ಜನ ಸಂಖ್ಯೆ ಇದ್ದು, ಗ್ರಾಮದಲ್ಲಿರುವ ನೀರು ವಿತರಣಾ ಕೇಂದ್ರದಲ್ಲಿ ಅಳವಡಿಸಿರುವ ರೈಸಿಂಗ್ ಮೈನ್ ಪೈಪ್ 5 ಕಡೆಗಳಲ್ಲಿ ಹೊಡೆದು ಹೋಗಿರುವ ಕಾರಣದಿಂದ ಅದರೊಳಗೆ ಚರಂಡಿ ನೀರು ಸೇರಿಕೊಂಡು ಕುಡಿಯುವ ನೀರಿನೊಂದಿಗೆ ಸರಬರಾಜಾ ಗುತ್ತಿದೆ, ಈ ವಿಷಯದ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಎಷ್ಟೇ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ನಾನು ಒಬ್ಬ ಗ್ರಾಮ ಪಂಚಾಯತಿ ಪ್ರತಿನಿಧಿಯಾಗಿ ಹಲವು ಭಾರಿ ಗ್ರಾಮ ಸಭೆಗಳಲ್ಲಿ ಚರ್ಚೆ ಮಾಡಿರುತ್ತೇನೆ.

ಒಂದು ಲಕ್ಷ ಮತ್ತು ಎರಡು ಲಕ್ಷ ಒಟ್ಟು ಮೂರು ಲಕ್ಷ ಲೀಟರ್ ನೀರು ಟ್ಯಾಂಕಿನಿಂದ ಹರಿಯುವಾಗ, ಚರಂಡಿ ಒಳಗಡೆ ರೈಸಿಂಗ್ ಮೈನ್ ಪೈಪ್ ಅನ್ನು ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಅಳವಡಿಸಿರುತ್ತಾರೆ.

ಇತ್ತೀಚಿಗೆ ಇದೇ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಎಷ್ಟೆಲ್ಲಾ ತೊಂದರೆಯನ್ನು ಅಲ್ಲಿಯ ಗ್ರಾಮಸ್ಥರು ಅನುಭವಿಸಿರುತ್ತಾರೆ, ಹಾಗೆಯೇ ಮಧ್ಯಪ್ರದೇಶದ ಇಂದೋರ್ ನಲ್ಲಿ ಕಲುಷಿತ ನೀರು ಸೇವನೆಯಿಂದ 20 ಕ್ಕೂ ಅಧಿಕವಾಗಿ ಸಾವನಪ್ಪಿದ್ದು, 250 ಕ್ಕೂ ಹೆಚ್ಚು ಜನರು ಅವ್ಯಸ್ಥರಾಗಿರುತ್ತಾರೆ ಇದೆಲ್ಲಾ ಗಮನಹರಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ತಿಳಿಸಿದರು.

ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟ ರಿಣಾಮವಾಗುತ್ತಿದೆ, ದೊಡ್ಡ ಅವಘಡಗಳು ನಡೆಯುವ ಮುನ್ನ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಎಚ್ಚರಗೊಂಡು ರೈಸಿಂಗ್ ಮೈನ್ ಪೈಪ್ ಅನ್ನು ಬದಲಾವಣೆ ಮಾಡುವ ಮೂಲಕ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಇಲ್ಲದಿದ್ದರೆ ಸಾರ್ವಜನಿಕರು ಹಾಗೂ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ಮಾಡುವುದಾಗಿ ಪತ್ರಿಕಾ ಹೇಳಿಕೆಯ ಮೂಲಕ ಎಚ್ಚರಿಕೆ ನೀಡಿದರು.