HOMENews

ಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್

ಮೈಸೂರು:- ನಗರದ ಎಂ ಜಿ ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್ ನ ವಿದ್ಯಾರ್ಥಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಪೌಷ್ಟಿಕಾಂಶದ ಬಗ್ಗೆ ಅರಿವು,ಸೇವಾ ಕಾರ್ಯಕ್ರಮದಲ್ಲಿ ಎನ್.ಆರ್. ಐ. ರವಿ ಮಹದೇವ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಡ್ರೈ ಫ್ರೂಟ್ಸ್, ಹಣ್ಣು ಹಂಪಲು ವಿತರಿಸಿ ಹಣ್ಣಿನ ಮಹತ್ವ,ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಆರ್.ಐ. ರವಿ ಮಹದೇವ್ ಹಣ್ಣುಗಳು ನಮ್ಮ ದೈನಂದಿನ ಆಹಾರದ ಅತ್ಯವಶ್ಯಕ ಭಾಗವಾಗಿರಬೇಕು. ಇವುಗಳು ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್‌ಗಳ ನೈಸರ್ಗಿಕ ಮೂಲಗಳಾಗಿವೆ ಎಂದು ಹೇಳಿದರು. ಅವರು ಮಕ್ಕಳ ಆರೋಗ್ಯಕ್ಕೆ ಸಮತೋಲಿತ ಪೋಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು.
ವಿದ್ಯಾರ್ಥಿಗಳಿಗೆ ಅಪೌಷ್ಟಿಕತೆಯ ಸಮಸ್ಯೆಗಳ ಹಲವು ಅಂಶಗಳನ್ನು ತಿಳಿಸಿದರು ಪ್ರಮುಖವಾಗಿ
ಅಪೌಷ್ಟಿಕತೆಯಿಂದಾಗಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ,ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ, ಕಲಿಕೆಯ ಸಾಮರ್ಥ್ಯ ಮತ್ತು ಏಕಾಗ್ರತೆಯಲ್ಲಿ ಕುಸಿತ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.
ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸುವುದರಿಂದ ಅಪೌಷ್ಟಿಕತೆಯ ಸಮಸ್ಯೆ ತಡೆಗಟ್ಟಬಹುದು. ಪೋಷಕರು ಮತ್ತು ಶಿಕ್ಷಕರು ಈ ವಿಷಯದಲ್ಲಿ ಜಾಗೃತರಾಗಿ, ಮಕ್ಕಳಿಗೆ ಸರಿಯಾದ ಪೋಷಣೆ ಸಿಗುವಂತೆ ನೋಡಿಕೊಳ್ಳಬೇಕ ಎಂದು ಸಲಹೆ ನೀಡಿದರು.
ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗವು ನಿರಂತರವಾಗಿ ಹಣ್ಣುಗಳ ವಿತರಣೆ, ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ
ಈ ನಿಸ್ವಾರ್ಥ ಸೇವೆ ಅಪೂರ್ವ ಮತ್ತು ಅನುಕರಣೀಯವಾಗಿದೆ. ಸಮಾಜದಲ್ಲಿ ಪೌಷ್ಟಿಕಾಂಶದ ಜಾಗೃತಿ ಮೂಡಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇಂತಹ ಸಾಮಾಜಿಕ ಸೇವಾ ಕಾರ್ಯಗಳು ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಬೆಳೆಸುವ ನಿಜವಾದ ಮಾರ್ಗವಾಗಿದೆ.
ಇನ್ನಷ್ಟು ಜನರು ಈ ರೀತಿಯ ಉಪಕ್ರಮಗಳಲ್ಲಿ ಮುಂದೆ ಬರಬೇಕು ಮತ್ತು ಸಮಾಜದಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಟದಲ್ಲಿ ಪಾಲುದಾರರಾಗಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಪ್ರತಿಯೊಬ್ಬ ವಿದ್ಯಾರ್ಥಿಯು ಓದಿನ ಸಮಯದಲ್ಲಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ತಂದೆ ತಾಯಿಗೆ ಕೀರ್ತಿ ತರಬೇಕು. ಹಾಗೆಯೇ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವರಿಸಿ ನೈಸರ್ಗಿಕವಾಗಿ ಸಿಗುವ ಹಣ್ಣುಹಂಪಲನ್ನು ಶುದ್ಧ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಆರ್.ಐ. ರವಿ ಮಹದೇವ್, ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹಾದೇವ್ ,ರಾಜೇಶ್ ಕುಮಾರ್, ಮಹೇಶ್, ನಿಲಯ ಪಾಲಕಿ ಗೀತಾ,ದತ್ತ ಇನ್ನಿತರರು ಇದ್ದರು