ಅತ್ಯಂತ ಸರಳ ಮತ್ತು ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ ನಿವೃತ್ತ ಪತ್ರಕರ್ತ ಎಚ್ ಪಿ ಶಿವಣ್ಣ ನವರಿಗೆ ಸಮಾನ ಮನಸ್ಕರ ಬಳಗದಿಂದ ಸನ್ಮಾನ

ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಫೆ. 04:- ಅತ್ಯಂತ ಸ್ವಾಭಿಮಾನಿ ವ್ಯಕ್ತಿಯಾಗಿ ಪತ್ರಕರ್ತನಾಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ತಮ್ಮ ಲೇಖನದ ಮೂಲಕ ಜನಮನವನ್ನು ಗೆದ್ದು ಜನರ ಕಷ್ಟಕ್ಕೆ ಸ್ಪಂದಿಸಿದ ವ್ಯಕ್ತಿ ಹೆಚ್‌ಪಿ ಶಿವಣ್ಣ ಎಂದು ನಾಮಧಾರಿ ಗೌಡರ ತಾಲೂಕ್ ಸಂಘದ ಗೌರವಾಧ್ಯಕ್ಷ ಡೈರಿ ಪ್ರಕಾಶ್ ಹೇಳಿದರು.

ಪಟ್ಟಣದ ಸಮಾನಮಸ್ಕಾರ ಸಂಘದ ಕಚೇರಿಯಲ್ಲಿ ನಡೆದ ಹೆಬ್ಬಾಳ್ ಶಿವಣ್ಣನವರ ಹುಟ್ಟು ಹಬ್ಬದ ಅಂಗವಾಗಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಸುಮಾರು 25 ರಿಂದ 30 ವರ್ಷಕ್ಕೂ ಹೆಚ್ಚು ಪತ್ರಿಕಾ ರಂಗದಲ್ಲಿ ವರದಿಗಾರರಾಗಿ ಕೆಲಸ ಮಾಡಿ ತಾಲೂಕು ಪತ್ರಕರ್ತರ ಸಂಘದಲ್ಲಿ ಅಧ್ಯಕ್ಷರಾಗಿ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿಯಾಗಿ ತಾಲೂಕು ಒಕ್ಕಲಿಗರ ಸಂಘದ ಖಜಾಂಚಿಯಾಗಿ ಸಮಾನ ಮನಸ್ಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿರುವ ಜೊತೆಗೆ ಕೆ.ಆರ್ ನಗರದಲ್ಲಿ ಜನಮನ್ನಣೆ ಗೊಳಿಸಿದ್ದಾರೆ ಎಂದು ತಿಳಿಸಿದರು.
ಅತ್ಯಂತ ಸರಳ ಜನಸಾಮಾನ್ಯರ ಜನ ಸಾಮಾನ್ಯರ ಕಷ್ಟ ಸುಖಕ್ಕೆ ಸ್ಪಂದಿಸುವ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಹೆಬ್ಬಾಳ್ ಶಿವಣ್ಣ ಇನ್ನೂ ಹೆಚ್ಚು ದಿನ ಆರೋಗ್ಯವಂತರಾಗಿ ಇನ್ನು ಹೆಚ್ಚು ಅಧಿಕಾರ ಸಿಗುವಂತಾಗಲಿ ಎಂದ ಅವರು ಇನ್ನು ಹೆಚ್ಚು ಹೆಚ್ಚು ಕೆಲಸವನ್ನು ಮಾಡಲು ಆ ದೇವರು ಅವರಿಗೆ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ಮಾತನಾಡಿ ಇವತ್ತಿನ ಯುವ ಪತ್ರಕರ್ತರಿಗೆ ಶಿವಣ್ಣನವರು ಮಾದರಿಯಾಗಿದ್ದಾರೆ ಇನ್ನೂ ಕೆಲವು ದಿನಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸುವ ಮೂಲಕ ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಬೇಕಾಗಿತ್ತು ಆದರೆ ಅವರು ಪತ್ರಿಕೆಯಿಂದ ನಿವೃತ್ತಿಯಾಗಿದ್ದಾರೆಯೇ ವಿನಃ ಅನುಭವ ಮತ್ತು ಆದರ್ಶದಿಂದ ನಿವೃತ್ತಿಯಾಗಿಲ್ಲ ಆದ್ದರಿಂದ ಈಗಿನ ಪತ್ರಕರ್ತರಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಎಂದು ಸಲಹೆ ನೀಡಿದರು.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಸ್ವಾಮೀಜಿಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ಸಹಜ ಆದರೆ ಪತ್ರಿಕಾ ರಂಗದಿಂದ ನಿವೃತ್ತಿಯಾಗಿದ್ದರು ಅವರ ಹಿತೈಷಿಗಳು ಅಭಿಮಾನಿಗಳು ಸ್ನೇಹಿತರು ಅವರ ಮೇಲೆ ಅಭಿಮಾನದಿಂದ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಅತ್ಯಂತ ಸಂತೋಷ ಹಾಗೂ ಇತರರಿಗೆ ಮಾದರಿಯಾಗಿದ್ದೀರಿ ಎಂದು ವರ್ಣಿಸಿದರು.
ಸಭೆಯನ್ನು ಉದ್ದೇಶಿಸಿ ಸಮಾನಮನಸ್ಕಾರ ಬಳಗದ ಅಧ್ಯಕ್ಷ ಕೃಷ್ಣ ಶೆಟ್ಟಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಡ್ಡರ ಕೊಪ್ಪಲು ಶಿವರಾಮು. ಗ್ರಾಮ ಪಂಚಾಯತಿ ಮಾಜಿ ಸದಸ್ಯ ಡಿಂಡಿಮಶಂಕರ್ ಚಾಮುಂಡೇಶ್ವರಿ ಬಾರ್ ಮಾಲಿಕ ಮನು ಗೌಡ ಗ್ರಾಮ ಪಂಚಾಯತಿ ಸದಸ್ಯ ಮನು ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಜಿಲ್ಲಾ ಕಾಂಗ್ರೆಸ್ ಹಿರಿಯ ಸದಸ್ಯ ಹೆಚ್‌ಪಿ ಗೋಪಾಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಕುಪ್ಪೆ ಮಹದೇವಸ್ವಾಮಿ. ಶ್ರೀನಿವಾಸ್. ಸಿದ್ದೇಗೌಡ. ಸುಬ್ಬೇಗೌಡ. ಮಹದೇವ್. ಡಾ ಶಂಕರ್. ರಂಗನಾಥ್ ಚಂದ್ರು ಮರಿ ಗೌಡ ಅವಿನಾಶ್ ಸಿದ್ದನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು.



