HOMENews

ಸಿರೇನ್ ಇಂಡಿಯಾ ಕಂಪೆನಿ ಆಯೋಜನೆ ಜೀವಕ್ಕಾಗಿ ಹೆಲ್ಮೆಟ್ ಧರಿಸಲು ಸಲಹೆ

ಮೈಸೂರು: ಪೊಲೀಸರಿಗೆ ಹೆದರಿ  ಹೆಲ್ಮೆಟ್ ಧರಿಸದೆ ನಿಮ್ಮ ಕುಟುಂಬ ಹಾಗೂ ಪ್ರಾಣದ ಸಲುವಾಗಿ ಹೆಲ್ಮೆಟ್ ಧರಿಸಿ ಎಂದು ನಗರದ ವಿವಿ ಪುರಂ ಸಂಚಾರ ಠಾಣೆಯ ಇನ್ ಸ್ಪೆಕ್ಟರ್ ಎಂ.ಆರ್.ಲವ ಸಲಹೆ ನೀಡಿದರು.

ಕಡಕೊಳದ ಸಿರೇನ್ ಇಂಡಿಯಾ ಕಂಪೆನಿಯು ರಸ್ತೆ ಸುರಕ್ಷತಾ ಅಭಿಯಾನ ಅಂಗವಾಗಿ ಗುರುವಾರ ನಗರದ ವಿಶ್ವವಿದ್ಯಾಲಯ ಸಂಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಸಮಾರಂಭದಲ್ಲಿ ಹೆಲ್ಮೆಟ್ ವಿತರಿಸಿ ಅವರು ಮಾತನಾಡಿದರು.

ನಗರದಲ್ಲಿ 27 ಕಡೆ ಎಐ (ಕೃತಕ ಬುದ್ಧಿಮತ್ತೆ) ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೀಗಾಗಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡರೂ ಕ್ಯಾಮರಾಗಳ ಕಣ್ಗಾವಲಿನಿಂದ‌ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

 ಅಪಘಾತ ಪ್ರಕರಣಗಳಲ್ಲಿ ಶೇ.40ರಷ್ಟು

ವಿಮೆ ಇರುವುದಿಲ್ಲ. ಇದರಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ಸಿಗುವುದಿಲ್ಲ. ಸ್ವಯಂ ಅಪಘಾತವಾದರೆ ರೂ. 15 ಲಕ್ಷ ಪರಿಹಾರ ಸಿಗುತ್ತದೆ ಎಂಬುದನ್ನು ಅರಿಯಿರಿ ಎಂದು ಹೇಳಿದರು.

ಸಂಚಾರ ಪೊಲೀಸರನ್ನು ಕಂಡರೆ ಗಾಬರಿಯಾಗದೆ, ಭಯಪಡದೆ ವೇಗ ಹೆಚ್ಚಿಸಿಕೊಂಡು ಬೈಕ್ ಓಡಿಸಬೇಡಿ. ಶೇ. 80-90ರಷ್ಟು ಅಪಘಾತಗಳು ನಮ್ಮ ತಪ್ಪಿನಿಂದ, ಕಾನೂನಿನ ಅಸಡ್ಡೆಯಿಂದ ಸಂಭವಿಸುತ್ತವೆ. ಇದಕ್ಕಾಗಿ ಹೆಲ್ಮೆಟ್ ಧರಿಸದೆ ಸಂಚರಿಸಬೇಡಿ ಜೊತೆಗೆ ಕಾಣಿಕೆಯಾಗಿ ಹೆಲ್ಮೆಟ್ ಕೊಡಿ ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾದ ವಿವಿ ಪುರಂ ಸಂಚಾರ ಠಾಣೆಯ ಸಬ್ ಇನ್ ಸ್ಪೆಕ್ಟರ್ ವಿ.ಆರ್.ಶಬರೀಶ್ ಮಾತನಾಡಿ, ನಮ್ಮ ‌ಮೊಬೈಲ್ ಫೋನ್ ಬಿದ್ದರೆ ಒಡೆಯುತ್ತದೆ ಎಂದು ಬ್ಯಾಕ್ ಕವರ್ ಹಾಕಿಸುತ್ತೇವೆ. ಆದರೆ ಬೈಕ್ ಓಡಿಸುವಾಗ ಬಿದ್ದರೆ ತಲೆಗೆ ಪೆಟ್ಟಾಗುತ್ತದೆ ಎಂದು ಗೊತ್ತಿದ್ದರೂ ಹೆಲ್ಮೆಟ್ ಧರಿಸಲ್ಲ. ಯಾವುದೇ ಸಂದರ್ಭದಲ್ಲೂ ಹೆಲ್ಮೆಟ್ ಧರಿಸದೆ ವಾಹನಗಳನ್ನು ಓಡಿಸಬೇಡಿ ಎಂದರು.

ಸಿರೇನ್ ಇಂಡಿಯಾ ಕಂಪೆನಿಯ ನಿರ್ದೇಶಕ ಕೋಝೋ ಅಸಕುರ ಮಾತನಾಡಿ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸುರಕ್ಷಿತವಾಗಿರಬೇಕು. ಸುರಕ್ಷತೆ ಎನ್ನುವುದು ನಿಯಮವಲ್ಲ; ನಮ್ಮ ಬದುಕು ಎಂದು ಮನದಟ್ಟು ಮಾಡಿಕೊಳ್ಳಿ ಎಂದರು.

ಕಡಕೊಳದ ಸಿರೇನ್ ಇಂಡಿಯಾ ಕಂಪೆನಿಯು ರಸ್ತೆ ಸುರಕ್ಷತಾ ಅಭಿಯಾನ ಅಂಗವಾಗಿ ಮೈಸೂರಿನ ವಿಶ್ವವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ

ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಗಳನ್ನು ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಎಂ‌.ಆರ್.ಲವ ವಿತರಿಸಿದರು. ಡಾ.ತಿಮ್ಮಯ್ಯ ಕೆ., ಸಿರೇನ್ ಇಂಡಿಯಾ ಕಂಪೆನಿಯ ನಿರ್ದೇಶಕ ಕೋಝೋ ಅಸಕುರ, ವಿವಿ ಪುರಂ ಸಂಚಾರ ಠಾಣೆಯ ಸಬ್ ಇನ್ ಸ್ಪೆಕ್ಟರ್ ವಿ.ಆರ್.ಶಬರೀಶ್, ಸಿರೇನ್ ಇಂಡಿಯಾ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಎನ್.ಪದ್ಮನಾಭ ಇದ್ದಾರೆ.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ತಿಮ್ಮಯ್ಯ ಕೆ. ಮಾತನಾಡಿ, ಕಾನೂನಿಗೆ ಮಾನ್ಯತೆ ಕೊಟ್ಟರೆ ಬದುಕಿಗೆ ಮಾನ್ಯತೆ ಕೊಟ್ಟ ಹಾಗೆ ಎಂದರು.

ಇಂಡಿಯಾ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಎನ್.ಪದ್ಮನಾಭ ಸ್ವಾಗತಿಸಿದರು.

 

Leave a Reply