
ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕದಲ್ಲಿ ಯಾವಾಗಲೂ ಅತುರದಿಂದ ಕಾಯುವ ವಿಷೇಶ ಪಂದ್ಯ ಅಂದರೆ ಅದುವೆ ಭಾರತ ಮತ್ತು ಪಾಕಿಸ್ತಾನ ನಡುವಿನ ನೇರಾ ನೇರಾ ಪಂದ್ಯ . ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಇದೇ ರೀತಿಯ ತೀವ್ರ ನಿರೀಕ್ಷೆ ಮೂಡಿಸಿದ್ದ ಈ ಹೈವೋಲ್ಟೇಜ್ ಪಂದ್ಯ ನಡೆಯುವುದೇ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಚರ್ಚೆಗೆ ಹಲವು ತಜ್ಞರ ಚರ್ಚೆಗೆ ಕಾರಣವಾಗಿತ್ತು. ಆದರೆ ಇತ್ತೀಚೆಗೆ ನಡೆದ ತ್ರಿಪಕ್ಷೀಯ ಮಾತುಕತೆಗಳ ನಂತರ ಪಂದ್ಯ ನಡೆಯುವುದು ಬಹುತೇಕ ಗ್ಯಾರೆಂಟಿ ಅಗಿದೆ ಎಂಬ ಮಹತ್ವದ ಬೆಳವಣಿಗೆಯೊಂದು ಸುದ್ದಿ ಹೊರಬಿದ್ದಿದೆ.
ಪಾಕಿಸ್ತಾನ ಸರ್ಕಾರ ಪಂದ್ಯಕ್ಕೂ ಮೊದಲು ಭಾರತ ಆಟ ಆಡುವುದಿಲ್ಲ ಭಾರತದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿತ್ತು. ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿ ಬಾಂಗ್ಲಾದೇಶ ತಂಡದ ಟೂರ್ನಿಯಿಂದ ಹಿಂದೆ ಸರಿತದ್ದು ಹಾಗೂ ಭದ್ರತಾ ವಿಚಾರಗಳ ಕುರಿತ ಅಸಮಾಧಾನವನ್ನು ಉಲ್ಲೇಖಿಸಲಾಗಿತ್ತು. ಇದರ ಹಿನ್ನೆಲೆ ಪಾಕಿಸ್ತಾನ ತಂಡ ಭಾರತ ವಿರುದ್ಧ ಮೈದಾನಕ್ಕಿಳಿಯುವುದಿಲ್ಲ ಎಂಬ ಮಾತುಗಳು ತುಂಬಾ ಜೋರಾಗಿದ್ದವು. ನಂತರ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಡುವೆ ನಡೆದ ಚರ್ಚೆಗಳು ಪರಿಸ್ಥಿತಿಗೆ ತಹಬದಿಗೆ ತಂದಿವೆ.
ಪಾಕಿಸ್ತಾನದ ಲಾಹೋರ್ನಲ್ಲಿ ನಡೆದ ಸಭೆಯಲ್ಲಿ ಹಲವು ರಾಷ್ಟ್ರಗಳ ವಿನಂತಿ ಹಾಗೂ ಕ್ರಿಕೆಟ್ ಆಟವನ್ನು ಕಾಪಾಡುವ ಉದ್ದೇಶದಿಂದ ಪಾಕಿಸ್ತಾನ ಸರ್ಕಾರ ತನ್ನ ನಿರ್ಧಾರವನ್ನು ಮತ್ತೆ ಮರುಪರಿಶೀಲಿಸಿತು. ಈ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ನ ಅಧಿಕಾರಿಗಳು ತಿಳಿಸಿದ್ದಾರೆ.
ಪಂದ್ಯದಿಂದ ಹಿಂದೆ ಸರಿಯುವ ಈ ನಿರ್ಧಾರವು ಟೂರ್ನಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡದ್ದಾಗಿದ್ದು, ಪಂದ್ಯವನ್ನು ಕೈಬಿಟ್ಟರೆ ಪಾಕಿಸ್ತಾನ ತಂಡಕ್ಕೆ ಅಂಕ ಕಳೆದುಕೊಳ್ಳುವ ಸಾಧ್ಯತೆ ಜೊತೆಗೆ ಟೂರ್ನಿಯ ವ್ಯಾಪಾರಿಕ ಮೌಲ್ಯಕ್ಕೂ ದೊಡ್ಡ ಹೊಡೆತ ಬೀಳಬಹುದಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ಟಿ20 ಐಸಿಸಿ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಬಹು ನಿರೀಕ್ಷಿತ ಗುಂಪು ಹಂತದ ಪಂದ್ಯ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಯುಎಸ್ಎ, ನೆದರ್ಲೆಂಡ್ಸ್ ಮತ್ತು ನಮೀಬಿಯಾ ತಂಡಗಳೊಂದಿಗೆ ಒಂದೇ ಗುಂಪಿನಲ್ಲಿ ಸೇರಿವೆ.
ಪಂದ್ಯಕ್ಕೆ ಸಂಬಂಧಿಸಿದ ರಾಜಕೀಯ ಹಾಗೂ ಕ್ರೀಡಾ ಹಿನ್ನೆಲೆಯ ಕಾರಣದಿಂದಲೇ ಇದು ಕೇವಲ ಕ್ರೀಡಾ ಕಾರ್ಯಕ್ರಮವಲ್ಲ, ಜಾಗತಿಕ ಮಟ್ಟದ ಗಮನ ಸೆಳೆಯುವ ಘಟನೆ ಎಂದೇ ಪರಿಗಣಿಸಲಾಗಿದೆ. ಭಾರತ-ಪಾಕಿಸ್ತಾನ ಪಂದ್ಯಗಳು ಪ್ರಸಾರ ಹಕ್ಕುಗಳು, ಜಾಹೀರಾತು ಆದಾಯ ಹಾಗೂ ಪ್ರೇಕ್ಷಕರ ಆಸಕ್ತಿ ದೃಷ್ಟಿಯಿಂದ ಅತ್ಯಂತ ಮೌಲ್ಯಮಯವಾಗಿದ್ದು, ಈ ಪಂದ್ಯ ನಡೆಯುವುದು ಟೂರ್ನಿಗೆ ದೊಡ್ಡ ಬಲ ನೀಡಲಿದೆ ಎಂದು ತಜ್ಞರು ಹೇಳಿದ್ದಾರೆ.
ಇನ್ನು ಭಾರತ ತಂಡ ಈಗಿನ ಚಾಂಪಿಯನ್ ತಂಡವಾಗಿದ್ದು ಭಾರತ ತಂಡ ತನ್ನ ಪಟ್ಟವನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಟಿ20 ಟೂರ್ನಿಗೆ ಕಾಲಿಡುತ್ತಿದೆ.
ಕ್ರಿಕೆಟ್ ನಲ್ಲಿ ಭಾರತ ತನ್ನ ಗೆಲುವಿನ ಅಭಿಯಾನವನ್ನು ಫೆಬ್ರವರಿ 7ರಂದು ಯುಎಸ್ಎ ವಿರುದ್ಧ ಆರಂಭಿಸಿದೆ , ನಂತರ ಫೆಬ್ರವರಿ 12ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ.
ಟಿ20 ವಿಶ್ವಕಪ್ ವೇಳಾಪಟ್ಟಿಯ ಮಧ್ಯೆ ಭಾರತ-ಪಾಕಿಸ್ತಾನ ಪಂದ್ಯವು ಗುಂಪು ಹಂತದ ಫಲಿತಾಂಶಗಳ ಮೇಲೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿಕೆಯಿಂದ ಸೂಚಿಸುತ್ತವೆ.
ಟ20 ವಿಶ್ವಕಪ್ ನಲ್ಲಿ, ಸುಮಾರು ದಿನಗಳ ಅನಿಶ್ಚಿತತೆ ಮತ್ತು ರಾಜಕೀಯ ಒತ್ತಡಗಳ ನಡುವೆ ನಡೆದ ಮಾತುಕತೆಗಳು ಈಗ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಳತೆ ತಂದಿವೆ. ಫೆಬ್ರವರಿ 15ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯ ವಿಶ್ವದ ಗಮನ ಸೆಳೆಯುವುದು ಖಚಿತವಾಗಿದ್ದು, ಎರಡು ತಂಡಗಳ ನಡುವಿನ ಸ್ಪರ್ಧೆ ಮತ್ತೊಮ್ಮೆ ಕ್ರೀಡಾ ಇತಿಹಾಸದ ಪ್ರಮುಖ ಕ್ಷಣವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



