ಮೇಷ: ಕೆಲಸಗಳಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಪರಿಶ್ರಮಕ್ಕೆ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಕುಟುಂಬದ ವರೊಂದಿಗೆ ಕುಲದೇವರ ಭೇಟಿ. ಶುಭಸಂಖ್ಯೆ: 6
ವೃಷಭ: ಮನೆಯಲ್ಲಿ ಶಾಂತ ವಾತಾವರಣ. ಹಣಕಾಸಿನ ವಿಷಯದಲ್ಲಿ ಯೋಚಿಸಿ ನಿರ್ಧರಿಸಿ. ಸೂಕ್ತ ಚಿಕಿತ್ಸೆಯಿಂದ ಅನಾರೋಗ್ಯ ದೂರ. ಶುಭಸಂಖ್ಯೆ:9
ಮಿಥುನ: ಹೊಸ ಸಂಪರ್ಕಗಳು ಪ್ರಗತಿಗೆ ಸಹಕಾರಿಯಾಗಲಿವೆ. ಮಾತಿನಲ್ಲಿ ಸಂಯಮ ಅಪೇಕ್ಷಣೀಯ. ವಿದೇಶಪ್ರಯಾಣ ಯೋಗವಿದೆ. ಶುಭಸಂಖ್ಯೆ:3
ಕಟಕ: ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಆತ್ಮೀಯರ ಸಹಕಾರದಿಂದ ಕೆಲಸ ಸುಗಮ. ಹಳೆಯ ಚಿಂತೆಗಳು ಕಡಿಮೆಯಾಗುತ್ತವೆ. ಶುಭಸಂಖ್ಯೆ:8
ಸಿಂಹ: ಜವಾಬ್ದಾರಿಗಳು ಹೆಚ್ಚಾದರೂ ಸಾಮರ್ಥ್ಯದಿಂದ ಮುನ್ನಡೆಸುವಿರಿ. ಗೃಹ ನಿರ್ಮಾಣ ಪೂರ್ಣ. ಉದ್ಯೋಗ ದೊರೆಯುವುದು. ಶುಭಸಂಖ್ಯೆ:5
ಕನ್ಯಾ: ಯೋಜಿತ ಕಾರ್ಯಗಳು ಯಶಸ್ವಿಯಾಗಲಿವೆ. ಆರೋಗ್ಯದ ಕಡೆ ಸ್ವಲ್ಪ ಗಮನವಿರಲಿ. ಹೊಸ ವಾಹನ ಖರೀದಿಗೆ ನಿರ್ಧರಿಸುವಿರಿ. ಶುಭಸಂಖ್ಯೆ: 2
ತುಲಾ: ಸ್ನೇಹಿತರು, ಕುಟುಂಬದವರ ಬೆಂಬಲ. ಲೋಹಗಳ ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ಹೂವು ಹಣ್ಣು ವ್ಯಾಪಾರ ಜೋರಾಗಲಿದೆ. ಶುಭಸಂಖ್ಯೆ:7
ವೃಶ್ಚಿಕ: ತಾಳ್ಮೆ,ಧೈರ್ಯದಿಂದ ನಡೆದುಕೊಂಡರೆ ಲಾಭ. ಸಂಗೀತಗಾರರ ಮನಸ್ಸು ಸ್ಥಿರವಾಗಿರುತ್ತದೆ. ಗುಪ್ತ ಚಿಂತನೆಯಿಂದ ಧನಲಾಭ. ಶುಭಸಂಖ್ಯೆ:2
ಧನಸ್ಸು: ಮಹಿಳೆಯರ ಪ್ರಯತ್ನಗಳಿಗೆ ಶುಭ ಫಲ ದೊರೆಯುವ ದಿನ. ಚಲನಚಿತ್ರ ನಿರ್ದೇಶಕರಿಗೆ ಅವಕಾಶಗಳು ಹರಿದು ಬರಲಿವೆ. ಶುಭಸಂಖ್ಯೆ: 6
ಮಕರ: ಹೊಸ ಉದ್ಯೋಗದಲ್ಲಿ ಸ್ಥಿರತೆ. ಹಣಕಾಸು ವಿಷಯಗಳಲ್ಲಿ ನಿಧಾನವಾದರೂ ಪ್ರಗತಿ. ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 4
ಕುಂಭ: ನಿಮ್ಮ ಹೊಸ ಆಲೋಚನೆಗಳು ಸಾರ್ವಜನಿಕವಾಗಿ ಮೆಚ್ಚುಗೆ ಪಡೆಯುತ್ತವೆ. ಆಹಾರ ಧಾನ್ಯಗಳ ಬೇಸಾಯಗಾರರಿಗೆ ಧನ ಲಾಭ.ಶುಭಸಂಖ್ಯೆ: 6
ಮೀನಾ: ಭಾವನಾತ್ಮಕವಾಗಿ ಉತ್ತಮ ದಿನ. ಪ್ರಮುಖ ವಿಷಯದಲ್ಲಿ ಕುಟುಂಬದ ಪ್ರೀತಿ ಹಾಗೂ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಶುಭಸಂಖ್ಯೆ: 8





