HOMENews

ಹೋಳಿಗೆ ವಿತರಿಸಿ : ಯದುವೀರ್ ಒಡೆಯರ್ ಜನ್ಮದಿನ ಆಚರಣೆ

ನಗರದ ಪಂಪಾಪತಿ ರಸ್ತೆಯಲ್ಲಿರುವ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಹೋಳಿಗೆ,ಡ್ರೈ ಫ್ರೂಟ್ಸ್,ಹಣ್ಣು ಹಂಪಲ, ವಿತರಿಸುವ ಸೇವಾ ಕಾರ್ಯದೊಂದಿಗೆ ಸಂಸದರಾದ ಶ್ರೀ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲ ಪ್ರತಿಭೆ ಅಭಿಜ್ಞಾ ಸಾಯಿಯನ್ನು ಸ್ನೇಹ ಬಳಗದ ವತಿಯಿಂದ ಅಭಿನಂದಿಸಲಾಯಿತು. ನಂತರ ಮಾತನಾಡಿದ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಮೈಸೂರು ಸಂಸ್ಥಾನದ ಮಹಾರಾಜರು ಆಗಿರುವ ಗೌರವಾನ್ವಿತ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಹಾಗೂ ಇನ್ನಷ್ಟು ಸುಧೀರ್ಘಕಾಲ ಜನಸೇವೆ ಮಾಡುವ ಚೈತನ್ಯ ಶಕ್ತಿಯನ್ನು ಕರುಣಿಸಲಿ.ಮಹಾರಾಜರಾದರೂ ಕೂಡ ಜನಸೇವೆಗೆ ಕಂಕಣ ಬದ್ಧರಾಗಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನಸೇವೆ ಮಾಡುತ್ತಿರುವ ಅವರ ಕಾರ್ಯವೈಕರಿ ಇತರರಿಗೆ ಸಹಾಯ ಮಾಡುವ ಗುಣ ಶ್ಲಾಘನೀಯವಾದದ್ದು.ಅವರ ಜನಪರ ಕಾಳಜಿ ಸರಳ ವ್ಯಕ್ತಿತ್ವ ಎಲ್ಲರಿಗೂ ಅನುಕರುಣಿಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ನೇಹ ಬಳಗದ ಸದಸ್ಯರು ಹಾಗೂ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳು ಯದುವೀರ್ ಒಡೆಯರ್ ರವರ ಜನ್ಮ ದಿನಕ್ಕೆ ಶುಭ ಕೋರಿದರು
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಸಿಂಚನಗೌಡ (ಮಂಗಳಮುಖಿ), ಗಾಯಕ ಯಶ್ವಂತ್ ಕುಮಾರ್, ಬಿಜೆಪಿ ಮುಖಂಡ ಪುರುಷೋತ್ತಮ್, ಸಮಾಜ ಸೇವಕಿ ವಿದ್ಯಾ, ಎಂ ಎಂ ಗ್ರೂಪ್ಸ್ ಮಹಾನ್ ಶ್ರೇಯಸ್, ಬಾಲ ಪ್ರತಿಭೆ ಅಭಿಜ್ಞಾ ಸಾಯಿ, ಆಶಾ,ಭಾಗೀರಥಿ, ರಾಜೇಶ್ವರಿ, ರಾಜೇಶ್ ಕುಮಾರ್,ಮಹೇಶ, ಸಾನಿಧ್ಯ ನಿಲಯದ ಚಂದ್ರಶೇಖರ್, ದತ್ತ, ಇನ್ನಿತರರು ಇದ್ದರು.

Leave a Reply