
ಮೈಸೂರು:- ಸಂಚಲನ ಮೈಸೂರು (ರಿ) – ಮಕ್ಕಳಿಗಾಗಿ, ಮಕ್ಕಳಿಂದ, ಮಕ್ಕಳಿಗೋಸ್ಕರ, ಮಕ್ಕಳ ಸಕಾರಾತ್ಮಕ ಬೆಳವಣಿಗೆಗಾಗಿ ಸದಾ ಚಲನಶೀಲವಾಗಿ ದುಡಿಯುವ ಮಕ್ಕಳ ರಂಗ ತಂಡವಾಗಿದೆ. ಜಾಗತೀಕ ಯುಗದಲ್ಲಿ ಮಕ್ಕಳ ಬದುಕು ಯಾಂತ್ರಿಕವಾಗುವುದರ ಜೊತೆಗೆ ಸ್ಥಿರತೆಯೆಡೆಗೆ (ಸಿದ್ಧ ಮಾದರಿ) ಸಾಗುತ್ತಿದೆ. ಹಲವು ರೀತಿಯ ಸಹಜತೆಗಳಿಂದ ದೂರವಾಗಿ ಕೃತಕ ವರ್ತನೆಗಳನ್ನು ಅಳವಡಿಸಿಕೊರ್ಳಳುವುದರ ಜೊತೆಗೆ ಅಂತರ್ಮುಖಿಯಾಗುತ್ತಿದ್ದಾರೆ. ಅನಾರೋಗ್ಯಕರ ಸ್ಪಧೆsಯಿಂದ ಅನಾರೋಗ್ಯಕರ ಬೆಳವಣಿಗೆಯು ಮಾಧ್ಯಮಗಳಿಂದ ನಡೆಯುತ್ತಿದೆ.ಸಾಮಾಜೀಕರಣವು ಯಂತ್ರಗಳಿಂದ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಸಹಜವಾಗಿ ಅಗತ್ಯವಾದುದನ್ನು ಕಲಿಸುವ ಕೆಲಸವನ್ನು “ಸಂಚಲನ ಮೈಸೂರು” ರಂಗ ಮಾಧ್ಯಮದ ಮೂಲಕ ಮಾಡುತ್ತದೆ.

ಜನಪದ ಪ್ರಕಾರಗಳು, ರಂಗಭೂಮಿ,ಕಲೆ,ಪರಿಸರ,ಸಮಾಜದ ಮುಂತಾದ ಸಂವೇದನಾಶೀಲ ವಿಷಯಗಳನ್ನು ಕ್ರಿಯಾಶೀಲವಾದ ರಂಗಚಟುವಟಿಕೆಗಳ ಮೂಲಕ ಮಕ್ಕಳಿಗೆ ಅರಿವು ಮೂಡಿಸಿ ಸೃಜನಶೀಲ ಸಮಾಜಕ್ಕೆ ಅವರನ್ನು ಕೊಡುಗೆಯಾಗಿ ಕೊಡುವುದೇ ಸಂಚಲನದ ಮುಖ್ಯ ಉದ್ದೇಶವಾಗಿದೆ.ಅದರ ಜೊತೆಗೆ ಮಕ್ಕಳ ಹಾಡು, ನೃತ್ಯ, ನಾಟಕ, ಮಕ್ಕಳ ಕುರಿತ ಪುಸ್ತಕಗಳ ಪ್ರಕಾಶನ, ಮಕ್ಕಳ ಕವಿಗೋಷ್ಠಿ, ಚಿತ್ರಕಲೆ.ಮಕ್ಕಳ ರಂಗಹಬ್ಬ, ಮಕ್ಕಳ ನಾಟಕೋತ್ಸವ, ಹೀಗೆ ಹತ್ತು-ಹಲವು ಮಕ್ಕಳ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಸಕಾರತ್ಮವಾಗಿ ಹೊರತೆಗೆಯುವ ಮಹತ್ತರವಾದ ಕೆಲಸವನ್ನು ಕೈಗೆತ್ತಿಕೊಂಡು ಸಂಚಲನ ಮೈಸೂರು (ರಿ) ಜಾಗತಿಕ ಸಮಾಜದಲ್ಲಿ ಸಂಚಲನೆಯನ್ನುಂಟು ಮಾಡುವ ಉದ್ದೇಶವನ್ನು ಸಹ ಹೊಂದಿದೆ.
ಪ್ರತಿ ವರ್ಷ ಸಂಚಲನ ಮಕ್ಕಳ ನಾಟಕೋತ್ಸವ, ಮಕ್ಕಳಿಗಾಗಿ ಕುಣಿಯೋಣು ಬಾರಾ.. ಮಕ್ಕಳ ರಂಗ ತರಬೇತಿ ಶಿಬಿರ, ಯುಜನರಿಗಾಗಿ ಸಂಚಲನ ಯುವರಂಗ ತರಬೇತಿ ಶಿಬಿರ, ವಿಚಾರ ಸಂಕಿರಣ ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತದೆ.

ಸಹಯೋಗ- ಬೆಂಗಳೂರುಅರಳಿ ಸೇವಾ ಟ್ರಸ್ಟ್
“ಅರಳಿ ಸೇವಾ ಟ್ರಸ್ಟ್” ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಉದ್ಯಮಿಯಾಗಿರುವ ಶ್ರೀ ಎ ವೆಂಕಟೇಶ್ ಹಗೂ, Dr ಏಕ್ತಾವೆಂಕಟೇಶ ರವರು ಈ ಸಂಸ್ಥೆಯಸ್ಥಾಪಕರಾಗಿದ್ದು, ಸಮಾಜಮುಖಿ ಕೆಲಸ ಮಾಡಬೇಕೆಂಬ ಹಂಬಲದಿಂದ ಅರಳಿ ಸೇವಾ ಟ್ರಸ್ಟ್ವತಿಯಿಂದ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಶಿಕ್ಷಣ, ಕಲೆ, ಸಂಸ್ಕೃತಿ, ರಂಗಭೂಮಿಸೇರಿದಂತೆ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಸೇವಾ ಮನೋಭಾವದಿಂದ ಅನೇಕ ಸಮಾಜಮುಖಿ ಕೆಲಸಮಾಡುತ್ತಿದ್ದಾರೆ. ಮೈಸೂರಿನ ಸಂಚಲನ ಸೇರಿದಂತೆ ರಾಜ್ಯದ ಹಲವಾರು ಸಂಘ-ಸಂಸ್ಥೆಗಳ ಒಡಗೂಡಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಂಚಲನ ದಶಮಾನೋತ್ಸವ – ರಂಗ ಸಂಭ್ರಮ
ಕರ್ನಾಟಕ ಕಲಾ ಪರಂಪರೆಯಲ್ಲಿ ರಂಗಭೂಮಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಜನರ ನೋವು ನಾವು ಸುಖ ದುಃಖದುಮ್ಮಾನ, ಸಿಟ್ಟು ಸೆಡವು ಎಲ್ಲವುಗಳ ನೇರ ಅಭಿವ್ಯಕ್ತಿ ರಂಗಭೂಮಿಯಲ್ಲಿ ಸಾಧ್ಯ. ಅಂತಯೇ ಮನುಷ್ಯನ ಅಂತರಂಗಕ್ಕೂ ಬಹಿರಂಗಕ್ಕೂ ನೇರ ಮುಖಾಮುಖಿ ಈ ರಂಗಭೂಮಿ, ಜನಪದ ಪ್ರಕಾರಗಳು, ಸಂಗೀತ, ನೃತ್ಯ, ಕಲೆ, ಸಾಹಿತ್ಯ, ಪರಿಸರ ಮುಂತಾದ ಸಂವೇದನಾಶೀಲ ವಿಷಯಗಳ ಬಗ್ಗೆ ಕ್ರಿಯಾಶೀಲ ರಂಗಚಟುವಟಿಕೆಗಳ ಮೂಲಕ ಅರಿವು ಮೂಡಿಸಿ ಸೃಜನಶೀಲ ಸಮಾಜಕ್ಕೆ ಯುವಜನಾಂಗವನ್ನು ಕೊಡುಗೆಯಾಗಿ ಕೊಡುವುದೇ ಸಂಚಲನದ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಹಾಡು, ನೃತ್ಯ, ನಾಟಕ, ಮಕ್ಕಳ ಕುರಿತ ಪುಸ್ತಕಗಳ ಪ್ರಕಾಶನ, ಮಕ್ಕಳ ಕವಿಗೋಷ್ಠಿ, ಚಿತ್ರಕಲೆ, ಮಕ್ಕಳ ರಂಗಹಬ್ಬ, ಕುಣಿಯೋಣು ಬಾರಾ, ಸಂಚಲನ ಮಕ್ಕಳ ರಂಗತರಬೇತಿ ಶಿಬಿರ, ಸಂಚಲನ ಯುವರಂಗ ಶಿಬಿರ, ಸಂಚಲನ ಮಹಿಳಾ ರಂಗತರಬೇತಿ ಶಿಬಿರ, ವಿಚಾರ ಸಂಕಿರಣ, ಸಂಚಲನ ಮಕ್ಕಳ ನಾಟಕೋತ್ಸವ, ಹೀಗೆ ಹತ್ತು-ಹಲವು ಕಾರ್ಯಕ್ರಮಗಳನ್ನ ಆಯೋಜಿಸುವುದು ಸಂಚಲನದ ಉದ್ದೇಶ.

ಹಾಗಾಗಿಯೇ ಇದು ಮನುಷ್ಯನ ಸಾಧ್ಯತೆಗಳ ತಿಳಿವಿನ ವಿಸ್ತರಣೆಯೂ ಹೌದು. ಸಂಚಲನದ “ದಶಮಾನೋತ್ಸವ – ರಂಗ ಸಂಭ್ರಮ” ಇಂಥ ಸಾಧ್ಯತೆಗಳ ವಿಸ್ತರಣೆಯಾಗಿದೆ. ರಾಜ್ಯದ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ರಂಗ ಚಟುವಟಕೆಗಳನ್ನು ಮೈಸೂರಿನಲ್ಲಿ ಒಟ್ಟಿಗೆ ಸೇರಿಸುವ ಒಂದು ಪ್ರಯತ್ನವಿದು, ಕರ್ನಾಟಕದ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯಲ್ಲಿ ಈ “ದಶಮಾನೋತ್ಸವ – ರಂಗ ಸಂಭ್ರಮ” ಮಹತ್ವದ ಸ್ಥಾನ ನಿಭಾಯಿಸಲಿದೆ. ಭಿನ್ನ ಭಿನ್ನ ಪ್ರಾದೇಶಿಕ ನೆಲೆಗಳಲ್ಲ ರೂಪು ತಳೆಯುವ ಬಗೆಯನ್ನು ಅದು ವ್ಯಕ್ತಪಡಿಸುವ ಸಾಂಸ್ಕೃತಿಕ ಚಲನಶೀಲತೆಯನ್ನು ಕಾಣುವ, ಕಂಡು ಅರಿಯುವ ಪ್ರಯತ್ನವೇ ಸಂಚಲನದ “ದಶಮಾನೋತ್ಸವ – ರಂಗ ಸಂಭ್ರಮ.”





