
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್.ನಗರ : ಕಳೆದ 3 ವರ್ಷಗಳಿಂದ ಶಾಸಕರಾಗಿರುವ ಡಿ.ರವಿಶಂಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಸ್ವಜಾತಿಯವರನ್ನೆ ವಂಚಿಸುತ್ತಿದ್ದಾರೆ ಎಂದು ಜಿ.ಪಂ.ಮಾಜಿ ಸದಸ್ಯ ಅಮಿತ್ ವಿ ದೇವರಹಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಕುರುಬ ಸಮಾಜದ ಪ್ರಮುಖ ನಾಯಕರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಮತ್ತು ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ತನಗೆ ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳದೆ ಕ್ಷೇತ್ರವನ್ನು ಅಭಿವೃದ್ಧಿ ಯಿಂದ ವಂಚಿತವನ್ನಾಗಿ ಮಾಡಿರುವ ಶಾಸಕರು ತಮ್ಮ ರಾಜಕೀಯ ಜೀವನದುದ್ದಕ್ಕು ಅವರಿವರನ್ನು ಎತ್ತಿಕಟ್ಟು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದು ಇದಕ್ಕೆ ಮುಂದಿನ ವಿಧಾನ ಸಭಾ ಚುನಾವಣೆಲ್ಲಿ ಕ್ಷೇತ್ರದ ಮತದಾನ ಪ್ರಭುಗಳು ತಕ್ಕ ಉತ್ತರ ನೀಡುವರು ಎಂದರು.

ಶಾಸಕರ 3 ವರ್ಷಗಳ ದುರಾಡಳಿತ ಮತ್ತು ಅಭಿವೃದ್ಧಿ ವಿರೋಧಿ ನಿತ್ತಿಂದ ಬೇಸತ್ತಿರುವ ಕುರುಬ ಸಮಾಜದ ನೂರಾರು ಮುಖಂಡರು ಕಾಂಗ್ರೆಸ್ ತ್ಯಜಿಸಿದ ಸ್ವಯಂ ಪ್ರೇರಿತರಾಗಿ ಜೆಡಿಎಸ್ ಸೇರ್ಪಡೆ ಯಾಗುತ್ತಿರುವ ಮುಖಂಡರುಗಳಿಗೆ ತಮ್ಮಹಿಂಬಾಕರ ಮೂಲಕ ಅನಗತ್ಯ ತೊಂದರೆ ನೀಡುತ್ತಿರುವ ಶಾಸಕ ಡಿ.ರವಿಶಂಕರ್ ರಣ ಏಡಿ ರಾಜಕಾರಣ ಎಂದು ಜರಿದರು.
ಇಂತಹ ಗೊಡ್ಡು ಬೇದರಿಕೆ ಮತ್ತು ದಡ್ಡ ರಾಜಕಾರಣಕ್ಕೆ ಎದುರಿಕೊಳ್ಳಲು ನಾನು ಫಲಾನುಭವಿ ರಾಜಕಾರಣಿ ಅಲ್ಲ ಅದಕ್ಕೆ ಪ್ರತಿರೋಧವೊಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸಲ್ಪಡುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ತೊಡ್ಡೆ ತಟ್ಟಿ ಸ್ವಾಭಿಮಾನದ ರಾಜಕಾರಣ ಮಾಡುತ್ತಿರುವ ಹೆಚ್.ವಿಶ್ವನಾಥ್ ಅವರ ರಕ್ತದ ಕುಡಿ ಎಂದು ಸವಾಲೆಸೆದರು.
ರಾಜಕೀಯವಾಗಿ ಅನಾಥವಾಗಿ ಎಚ್.ವಿಶ್ವನಾಥ್ ಅವರಿಗೆ ಮೋಸ ಮಾಡಿ ಕಾಂಗ್ರೆಸ್ ತೊರೆದು ಬಿಜೆಪಿ ಮತ್ತು ಕೆಜೆಪಿ ಸುತ್ತುತ್ತಿದ್ದ ಶಾಸಕರು ಮತ್ತು ಅವರ ತಂದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ರಾಜಕೀಯ ಪುನರ್ ಜನ್ಮ ನೀಡಿದ ನಮ್ಮ ತಂದೆಯವರಿಗೆ ಮೋಸ ಮಾಡಿದ್ದರು ರಾಜಕೀಯವಾಗಿ ಉದ್ದಾರವಾಗಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಶಾಪ ಹಾಕಿದರು.
ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜಾತಿ ಮತ್ತು ದ್ವೇಷ ರಾಜಕಾರಣ ಮಾಡದೆ ಮಾಜಿ ಸಚಿವ ದಿ.ಎಸ್.ನಂಜಪ್ಪ ಮತ್ತು ನಮ್ಮ ತಂದೆ ಎಚ್.ವಿಶ್ವನಾಥ್ ಅವರು ಸಾಮರಸ್ಯದ ರಾಜಕಾರಣ ಮಾಡಿ ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ ಆದರೆ ಅವರು ಮತ್ತು ಮಾಜಿ ಸಚಿವ ಸಾ.ರಾ.ಮಹೇಶ್ ಅವರನ್ನು ಹಿಂಬಾಲಿಸದ ನಾವು ಭವಿಷ್ಯದಲ್ಲಿ ರಾಜಕೀಯ ನಿರ್ನಾಮವಾಗುತ್ತೀರಿ ಎಂದು ಶಪಥಗೈದರು.

ರಾಜಕೀಯವಾಗಿ ಪುನರ್ ಜನ್ಮ ನೀಡಿದ ಎಚ್.ವಿಶ್ವನಾಥ್ ಅವರಿಗೆ ಮೋಸ ಮಾಡಿದವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಶಾಸಕ ಡಿ.ರವಿಶಂಕರ್ ಮತ್ತು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಕುಟುಕಿದರು.
ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಕುರುಬ ಸಮಾಜದ ಮುಖಂಡರ ಸೇರ್ಪಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ನನ್ನ 22 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಜಾತಿ ಮತ್ತು ಪಕ್ಷ ರಾಜಕಾರಣ ಮಾಡಿಲ ಎಂದು ಸ್ಪಷ್ಟನೆ ನೀಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಸಾಲಿಗ್ರಾಮವನ್ನು ತಾಲೂಕು ಮಾಡಿಸುವುದರ ಜತೆಗೆ ಬಡ ವಿದ್ಯಾರ್ಥಿಗಳು, ವಿಕಲಚೇತನರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ತೃಪ್ತಿ ನನ್ನಗಿದೆ ಎಂದರು.
ಗ್ರಾಮದ ಕೆಲವು ಕುರುಬ ಸಮಾಜದ ಸಹೃದಯ ಕಿರಿಯರು ಮತ್ತು ಯುವನಾಯಕರು ಸ್ವಯಂ ಸ್ಪೂರ್ತಿ ಯಿಂದ ಪಕ್ಷ ಸೇರ್ಪಡೆಯಾಗುವುದನ್ನು ಸಹಿಸದ ಶಾಸಕರು ತಮ್ಮ ಹಿಂಬಾಲಕರ ಮೂಲಕ ಕಾರ್ಯಕ್ರಮ ಕ್ಕೆ ತೊಂದರೆ ನೀಡುತ್ತಿದ್ದು ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ನುಡಿದರು.
ನನಗೆ ಸಿಕ್ಕ ಅಧಿಕಾರವಧಿಯಲ್ಲಿ ನಿರ್ವಚನೆಯಿಂದ ಜನ ಪರ ಕೆಲಸ ಮಾಡಿದ್ದು ಇದಕ್ಕೆ ಸಾಕ್ಷಿ ಎಂಬಂತೆ ವಿಧಾನ ಸಭಾ ಚುನಾವಣೆ ಎರಡು ವರ್ಷ ಬಾಕಿ ಇರುವಂತೆ ಶಾಸಕರ ಸ್ವಜಾತಿ ಬಾಂಧವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿರುವುದು ಸಾಕ್ಷಿ ಎಂದರು.
15 ವರ್ಷಗಳ ಶಾಸಕ ಮತ್ತು ಸಚಿವ ಸ್ಥಾನದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಸಮುದಾಯದ ಜನರಿಗೆ ಅನಗತ್ಯ ತೊಂದರೆ ನೀಡದೆ ಎಲ್ಲರನ್ನು ಸೋದರರಂತೆ ಕಂಡಿದ್ದು ಅಧಿಕಾರವಿಲ್ಲದಿದ್ದರು ಪ್ರತಿ ವಾರ ಮೈಸೂರು ಗೃಹ ಕಚೇರಿಯಲ್ಲಿ ಸಾವಿರಾರು ಜನರ ಸಮಸ್ಯೆ ಆಲಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿ.ಪಂ.ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ತಾ.ಪಂ.ಮಾಜಿ ಅಧ್ಯಕ್ಷ ನಾಗಣ್ಣ, ಗ್ರಾ.ಪಂ.ಮಾಜಿ ಸದಸ್ಯ ಮೇಲೂರು ಗೌತಮ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಯಾದ ಕುರುಬ ಸಮಾಜದ ಕೆಂಚನಹಳ್ಳಿ ಗ್ರಾಮದ ಮುಖಂಡರಾದ ಜೆ.ಸತೀಶ್, ಕೆ.ಮಹದೇವ, ಕೆ.ಸಿ.ಶಿವಕುಮಾರ್, ರೇವಣ್ಣ, ಅಶೋಕ, ಕೆ.ಪಿ.ಮಹದೇವ್, ನಿಂಗರಾಜೇಗೌಡ, ಜವರೇಗೌಡ, ರಮೇಶ, ಸುರೇಶ, ಚಂದ್ರು ಯೋಗೇಶ, ರಂಗೇಗೌಡ, ಮುತ್ತು, ದೇವರಾಜು, ತಮ್ಮೇಗೌಡ, ಯೋಗೀಶ, ಕೆ.ಹೆಚ್.ರಘು, ಲೋಕೇಶ್, ದಿವಾಕರ್, ಮಹದೇವ್, ದೊಡ್ಡಯ್ಯ, ಶೇಖರ, ಮಹದೇವ, ವಿನಯಕುಮಾರ್, ಕರಿಗೌಡ, ಪ್ರಸನ್ನ, ಕಿರಣ, ದರ್ಶನ್ ಸೇರಿದಂತೆ ನೂರಕ್ಕು ಅಧಿಕ ಮಂದಿಯನ್ನು ಸಾ.ರಾ.ಮಹೇಶ್ ಶಾಲು ಹಾಕಿ ಸ್ವಾಗತಿಸಿದರು.
ಸಾಲಿಗ್ರಾಮ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳುಮಧು, ಜೆಡಿಎಸ್ ಮುಖಂಡರಾದ ಬಿ.ಹೆಚ್.ಮಹದೇವ್, ಗುರುಪ್ರಸಾದ್, ಸಿ.ಬಿ.ಲೋಕೇಶ್, ತಂದ್ರೆರವಿ, ಯಜಮಾನ್ ಮಾಲೇಗೌಡ, ಬಿ.ರಾಜು, ಅನೀಫ್ ಗೌಡ, ಅನಿಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.ಆರ್ ನಗರ. ” ಬಾಕ್ಸ್ ಕಾಲ “:-. ಕಾಂಗ್ರೆಸ್ ಪಕ್ಷದ ಕುರುಬ ಸಮುದಾಯದ 50 ಜನ ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುವ ಕಾರ್ಯಕ್ರಮಕ್ಕೆ ಮುನ್ನ ಹೈಡ್ರಾಮಾ ನಡೆದು ಶಾಸಕ ಡಿ ರವಿಶಂಕರ್ ಮತ್ತು ಅವರ ತಂದೆ ಎಂ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡ ಸ್ವಾಮಿಗೌಡರ ಬೆಂಬಲಿಗರ ಗುಂಪೊಂದು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ರಸ್ತೆ ಯುದ್ಧಕ್ಕೂ ಟ್ಯಾಕ್ಟರ್ ತಮಟೆಗಳ ಮೂಲಕ ತಡೆ ಒಡ್ಡಿದ ಘಟನೆ ಇಂದು ನಡೆಯಿತು.

ಸಾಲಿಗ್ರಾಮ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕುರುಬ ಸಮುದಾಯದ ಮುಖಂಡರು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್ ವಿಶ್ವನಾಥ್ ರವರ ಪುತ್ರ ಅಮಿತ್ ವಿ ದೇವರಹಟ್ಟಿ ನೇತೃತ್ವದಲ್ಲಿ ಮಾಜಿ ಶಾಸಕ ಸಾರಾ ಮಹೇಶ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಕೆಂಚನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಯುವಕರು ತಡೆಯೋಡ್ಡಿದರು.
ಬೇರ್ಯ ಮತ್ತು ಮುಂಜನಹಳ್ಳಿ ಮೂಲಕ ಕೆಂಚನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಯುದ್ಧಕ್ಕೂ ಟ್ರ್ಯಾಕ್ಟರ್ ಮತ್ತು ಮಣ್ಣು ತೆಗೆಯುವ ಪೋಕ್ ಲೈನ್ ಗಳನ್ನು ಅಡ್ಡಗಟ್ಟಿ ತಮಟೆ ಶಬ್ದಗಳ ಮೂಲಕ ಡಿ ರವಿಶಂಕರ್ ಮತ್ತು ದೊಡ್ಡ ಸ್ವಾಮಿಗೌಡರ ಫ್ಲೆಕ್ಸ್ ಗಳನ್ನು ಹಿಡಿದು ಜಯ ಘೋಷಗಳನ್ನು ಕೂಗುತ್ತಾ ತಡೆ ಒಡ್ಡಿದ್ದಲ್ಲದೆ ಕಾರ್ಯಕ್ರಮ ನಡೆಯದಂತೆ ವಿದ್ಯುತ್ ಲೈನನ್ನು ತೆರವುಗೊಳಿಸಿ ತಡೆ ಒಡ್ಡಿದರು ಎಲ್ಲವನ್ನು ಗಮನಿಸಿದ ಮಾಜಿ ಸಚಿವರಾದ ಸಾರಾ ಮಹೇಶ್ ಮತ್ತು ಹೆಚ್ ವಿಶ್ವನಾಥ್ ರವರ ಪುತ್ರ ಅಮಿತ್ ವಿ ದೇವರಟ್ಟಿ ತಕ್ಷಣ ಕೆಆರ್ ನಗರದ ಪೊಲೀಸ್ ವೃತ್ತ ನಿರೀಕ್ಷಕ ಶಿವಪ್ರಕಾಶ್ ಮತ್ತು ಕೆಇಬಿಎ ಇ ಇ ಮಧುಸೂದ ನವರಿಗೆ ದೂರವಾಣಿ ಕರೆ ಮಾಡಿ ರಕ್ಷಣೆ ಮತ್ತು ವಿದ್ಯುತ್ ನೀಡುವಂತೆ ತಿಳಿಸಿದರು.





