HOME

HOME

Grihalakshmi: Good news for women: Money in account this week
Job NewsHOME

ಗೃಹಲಕ್ಷ್ಮಿ ಮಹಿಳೆಯರಿಗೆ ಸಮಾಧಾನಕರ ಸುದ್ದಿ: ಈ ವಾರವೇ ಖಾತೆಗೆ ಹಣ

ಗೃಹಲಕ್ಷ್ಮಿ 24ನೇ ಕಂತಿನ ಹಣ ಏಕೆ ತಡವಾಯಿತು? ಈಗ ಏನಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರದ ಅತ್ಯಂತ ಮಹತ್ವದ ಹಾಗೂ ಜನಪರ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ವಿಶೇಷವಾಗಿ ಕುಟುಂಬದ ಆರ್ಥಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಮಹಿಳೆಯರಿಗೆ ಈ ಯೋಜನೆ ನಿಜವಾದ ಆಧಾರಸ್ತಂಭವಾಗಿದೆ. ತಿಂಗಳಿಗೆ ರೂ. 2,000 ನೇರವಾಗಿ ಅವರವರ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ  ಜಮೆಯಾಗುವ ಮೂಲಕ ಕುಟುಂಬದ ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ, ಔಷಧೋಪಚಾರ ಹಾಗೂ ಸಣ್ಣ ಅಗತ್ಯಗಳಿಗೆ ಸಹಾಯವಾಗುತ್ತಿದೆ. ಇಂತಹ ಯೋಜನೆಯ ಹಣ ಕೆಲ ತಿಂಗಳು ವಿಳಂಬವಾಗಿದ್ದ ಕಾರಣ ಫಲಾನುಭವಿಗಳಲ್ಲಿ ಆತಂಕ, ಅನುಮಾನ ಮತ್ತು ಗೊಂದಲಗಳು ಹೆಚ್ಚಾಗಿದ್ದವು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಹೇಳಿಕೆಯಿಂದ ಇತ್ತೀಚಿನ ಮಾಹಿತಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಮಾಧಾನ ತಂದಿದೆ.

ಗೃಹಲಕ್ಷ್ಮಿ ಹಣ ಬಿಡುಗಡೆಗೆ ಗ್ರೀನ್ ಸಿಗ್ನಲ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಸಚಿವೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಹೇಳಿಕೆಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಬರುವ ಶನಿವಾರದೊಳಗೆ ಜಮೆ ಮಾಡಲಾಗುವುದು. ಈ ಕಂತಿನ ರೂ. 2,000 ನೇರವಾಗಿ ಡಿಬಿಟಿ (Direct Benefit Transfer) ಮೂಲಕ ಮಹಿಳೆಯರ ಖಾತೆಗೆ ವರ್ಗಾವಣೆಯಾಗಲಿದೆ. ಇದರಿಂದ ಕಳೆದ ಕೆಲವು ವಾರಗಳಿಂದ ಹಣಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ತಾತ್ಕಾಲಿಕವಾದ ಹಣಕಾಸಿನ ಬಿಕ್ಕಟ್ಟಿನಿಂದ ನಿಟ್ಟುಸಿರು ಸಿಗಲಿದೆ. ರಾಜ್ಯ ಸರ್ಕಾರವು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಅಂತಿಮ ಹಂತಕ್ಕೆ ತಂದುಕೊಂಡಿದ್ದು, ಆರ್ಥಿಕ ಇಲಾಖೆಯ ಅನುಮೋದನೆ ಈಗಾಗಲೇ ದೊರೆತಿದೆ ಎಂದು ತಿಳಿಸಿದ್ದಾರೆ

 

ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ವಿಳಂಬವಾಗಲು ಪ್ರಮುಖ ಕಾರಣಗಳಾಗಿ ಆರ್ಥಿಕ ಇಲಾಖೆಯ ಅನುಮೋದನಾ ಪ್ರಕ್ರಿಯೆ ಹಾಗೂ ಕೆಲವು ತಾಂತ್ರಿಕ ಸಮಸ್ಯೆಗಳು ಇದ್ದುದರಿಂದ  ಎಂದು  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಡಿಬಿಟಿ (Direct Benefit Transfer)  ವ್ಯವಸ್ಥೆಯಲ್ಲಿ ನಡೆಯುವ ತಾಂತ್ರಿಕ ತೊಂದರೆಗಳು, ಬ್ಯಾಂಕ್ ಸರ್ವರ್ ಸಮಸ್ಯೆಗಳು, ದಾಖಲೆಗಳ ಪರಿಶೀಲನೆ ಮುಂತಾದ ಕಾರಣಗಳಿಂದಾಗಿ ಹಣ ಜಮೆ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಈಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.

ರಾಜ್ಯದಲ್ಲಿ ಅನೇಕ ಫಲಾವಿಳಂಬಕ್ಕೆ ತೆರೆ: ಗೃಹಲಕ್ಷ್ಮಿ ಯೋಜನೆಯ ರೂ.2000 ಹಣ ಬಿಡುಗಡೆ ದಿನಾಂಕ ಘೋಷಣೆ

ನುಭವಿಗಳು ಕಳೆದ ವರ್ಷದ ಕೆಲವು ತಿಂಗಳಿಂದ ಗೃಹಲಹಕ್ಷ್ಮೀ ಹಣ ಇನ್ನೂ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ ಎಂಬ ವಿಷಯವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರು. ಇದಕ್ಕೂ ಸಚಿವೆ ಸ್ಪಷ್ಟ ಉತ್ತರ ನೀಡಿದ್ದು, ಹಳೆಯ ಬಾಕಿ ಹಣದ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವು ಇದೆ ಎಂದು ತಿಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಬಾಕಿ ಹಣವನ್ನು ಬಿಡುಗಡೆ ಮಾಡುವ ಉದ್ದೇಶ ಸರ್ಕಾರದದ್ದಾಗಿದೆ. ಅಂದರೆ, ಒಂದೇ ಬಾರಿ ಸಂಪೂರ್ಣ ಬಾಕಿ ಹಣ ಬಾರದಿದ್ದರೂ ಮುಂದಿನ ದಿನಗಳಲ್ಲಿ ಹಂತವಾಗಿ ಹಣ ಜಮೆಯಾಗುವ ಸಾಧ್ಯತೆ ಇದೆ ಎಂಬ ಸಂದೇಶವನ್ನು ಸರ್ಕಾರ ನೀಡಿದೆ.

 

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಪ್ರಮುಖ ವಿಚಾರವೆಂದರೆ ಅನರ್ಹರಿಗೆ ಹಣ ಜಮೆಯಾಗದಂತೆ ಮಾಡುವ ಕ್ರಮ. ಕೆಲವೊಂದು ಸಂದರ್ಭಗಳಲ್ಲಿ ಹಾಲಿ ಮೃತಪಟ್ಟವರ ಹೆಸರಿನಲ್ಲಿಯೇ ಹಣ ಜಮೆಯಾಗುತ್ತಿರುವ ದೂರುಗಳು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ-ಮನೆ ಸಮೀಕ್ಷೆ ನಡೆಸುತ್ತಿದೆ. ಕುಟುಂಬದ ಸ್ಥಿತಿ, ಫಲಾನುಭವಿ ಈಗ ಬದುಕಿದ್ದಾರೆಯೇ, ದಾಖಲೆಗಳಲ್ಲಿ ಏನಾದರೂ ದೋಷಗಳಿವೆಯೇ ಎಂಬುದನ್ನು ಪರಿಶೀಲಿಸಿ ಸರಿಪಡಿಸುವ ತ್ವರಿತವಾಗಿ ಕಾರ್ಯ ನಡೆಯುತ್ತಿದೆ. ಇದರ ಉದ್ದೇಶ ರಾಜ್ಯದಲ್ಲಿ ಅನರ್ಹರನ್ನು ತಡೆದು ನಿಜವಾದ ಅರ್ಹ ಮಹಿಳೆಯರಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವುದಾಗಿದೆ.

 

ಹಣ ಜಮೆಯಾಗಿದೆಯೇ ಇಲ್ಲವೇ ಎಂಬುದನ್ನು ಫಲಾನುಭವಿಗಳು ತಾವೇ ಪರಿಶೀಲಿಸಿಕೊಳ್ಳಲು ರಾಜ್ಯ ಸರ್ಕಾರ ಹಲವು ಸುಲಭ ಮಾರ್ಗಗಳನ್ನು ಒದಗಿಸಿದೆ. ಮೊದಲನೆಯದಾಗಿ DBT Karnataka App ಅತ್ಯಂತ ಉಪಯುಕ್ತವಾಗಿದೆ. ಮೋಬೈಲ್ ಪ್ಲೇ ಸ್ಟೋರ್ನಿಂದ ಈ APP ಅನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿದರೆ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳ ಡಿಬಿಟಿ ಸ್ಥಿತಿಯನ್ನು ಸುಲಭವಾಗಿ ನೋಡಬಹುದು. ಯಾವ ಕಂತಿನ ಹಣ ಜಮೆಯಾಗಿದೆ, ಯಾವುದು ಪ್ರಕ್ರಿಯೆಯಲ್ಲಿದೆ ಎಂಬ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ.

 

ಇದಕ್ಕೂ ಜೊತೆಗೆ, ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಹಣ ಜಮೆಯಾದ ತಕ್ಷಣ ಬ್ಯಾಂಕ್ನಿಂದ ಎಸ್ಎಮ್ಎಸ್ ಸಂದೇಶ ಬರುತ್ತದೆ. ಆದ್ದರಿಂದ ಮೊಬೈಲ್ ಸಂಖ್ಯೆ ಆಧಾರ್ ಹಾಗೂ ಬ್ಯಾಂಕ್ ಖಾತೆಗೆ ಸರಿಯಾಗಿ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಕೆಲವೊಮ್ಮೆ ಹಣ ಜಮೆಯಾಗಿದ್ದರೂ ಎಸ್ಎಮ್ಎಸ್ ಬರದಿರುವ ಸಾಧ್ಯತೆ ಇರುತ್ತದೆ. ಅಂಥ ಸಂದರ್ಭಗಳಲ್ಲಿ ಬ್ಯಾಂಕ್ ಪಾಸ್ಬುಕ್ ಅಪ್ಡೇಟ್ ಮಾಡಿಸಿಕೊಳ್ಳುವುದರಿಂದ ಸ್ಪಷ್ಟ ಮಾಹಿತಿ ಸಿಗುತ್ತದೆ.

ಹಳೆಯ ಬಾಕಿ ಹಣ ಏನು? ಹೊಸ ಕಂತು ಯಾವಾಗ? ಗೃಹಲಕ್ಷ್ಮಿ ಯೋಜನೆ ಬಗ್ಗೆ ಸ್ಪಷ್ಟತೆ

ಮೂರನೆಯದಾಗಿ, ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕವೂ ಡಿಬಿಟಿ ಸ್ಥಿತಿಯನ್ನು ಪರಿಶೀಲಿಸಬಹುದು. ಪಡಿತರ ಚೀಟಿ ಸಂಖ್ಯೆ ಅಥವಾ ಆಧಾರ್ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಅರ್ಜಿಯ ಸ್ಥಿತಿ, ಹಣ ಬಿಡುಗಡೆ ಹಂತ ಇತ್ಯಾದಿ ಮಾಹಿತಿಯನ್ನು ಪಡೆಯಬಹುದು. ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ಇದು ಸ್ವಲ್ಪ ಕಷ್ಟವಾಗಬಹುದು. ಅಂಥವರು ಹತ್ತಿರದ ಗ್ರಾಮ ಪಂಚಾಯಿತಿ, ಬಾಪೂಜಿ ಸೇವಾ ಕೇಂದ್ರ ಅಥವಾ ಸೇವಾ ಸಿಂಧು ಕೇಂದ್ರದ ಸಹಾಯವನ್ನು ಪಡೆಯಬಹುದು.

 

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣವೇ ನಿಮ್ಮ ಖಾತೆಗೆ ಹಣ ಜಮೆಯಾಗದೇ ಇರಬಹುದು. ಸರ್ಕಾರದಿಂದ ಹಣ ಹೊರಟ ನಂತರ ಅದು ಬ್ಯಾಂಕ್ ಸರ್ವರ್ಗಳ ಮೂಲಕ ನಿಮ್ಮ ಖಾತೆಗೆ ತಲುಪಲು ಸಾಮಾನ್ಯವಾಗಿ 2 ರಿಂದ 3 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಕೆಲವೊಮ್ಮೆ ಬ್ಯಾಂಕ್ ಲೋಡ್ ಜಾಸ್ತಿ ಇದ್ದರೆ ಇನ್ನೂ ಸ್ವಲ್ಪ ತಡವಾಗಬಹುದು. ಆದ್ದರಿಂದ ಒಂದು ಅಥವಾ ಎರಡು ದಿನಗಳಲ್ಲಿ ಹಣ ಬಾರದಿದ್ದರೆ ಆತಂಕ ಪಡುವ ಅಗತ್ಯವಿಲ್ಲ.

ಗೃಹಲಕ್ಷ್ಮಿ ಹಣ ಬಿಡುಗಡೆ ಕುರಿತು ಸರ್ಕಾರದ ಅಧಿಕೃತ ಮಾಹಿತಿ: ತಿಳಿಯಬೇಕಾದ ಎಲ್ಲವೂ

ಒಟ್ಟಿನಲ್ಲಿ, ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಮಾಹಿತಿ ನಂಬಿಕೆ ಮೂಡುವಂತಿದ್ದು, ಫಲಾನುಭವಿಗಳ ಆತಂಕವನ್ನು ಬಹುತೇಕ ದೂರ ಮಾಡಿದೆ. ಯೋಜನೆ ಜಾರಿಯಲ್ಲಿ ತಾತ್ಕಾಲಿಕ ವಿಳಂಬಗಳಾದರೂ ಸರ್ಕಾರ ಮಹಿಳೆಯರ ಹಿತವನ್ನು ಕಡೆಗಣಿಸಿಲ್ಲ ಎಂಬ ಸಂದೇಶ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಬಾಕಿ ಹಣವೂ ಹಂತ ಹಂತವಾಗಿ ಬಿಡುಗಡೆಯಾಗಲಿದೆ ಎಂಬ ಭರವಸೆ ಮಹಿಳೆಯರಿಗೆ ನಿರೀಕ್ಷೆ ಮೂಡಿಸಿದೆ. ಗೃಹಲಕ್ಷ್ಮಿ ಯೋಜನೆ ಕೇವಲ ಹಣಕಾಸು ನೆರವಷ್ಟೇ ಅಲ್ಲ, ಮಹಿಳೆಯರ ಗೌರವ ಮತ್ತು ಆರ್ಥಿಕ ಸ್ವಾವಲಂಬನೆಯ ಸಂಕೇತವಾಗಿ ಮುಂದುವರಿಯುತ್ತಿದೆ.

1 49 50 51
Page 51 of 51