News

News National and International

HOMENews

ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು : ಶಾಸಕ ಡಿ ರವಿಶಂಕರ್

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ.ಆರ್.ನಗರ. ಫೆ. 07:- ಮಹಾಶಿವರಾತ್ರಿಯಿಂದ ಯುಗಾದಿಯವರಿಗೆ ನಡೆಯುವ ಶ್ರೀ ಕ್ಷೇತ್ರ ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೂಕ್ತ ಭದ್ರತೆ ನೀಡುವ ಜೊತೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಡಿ ರವಿಶಂಕರ್ ಸೂಚನೆ ನೀಡಿದರು.

ಒಂದು ತಿಂಗಳು ನಡೆಯುವ ಕಪ್ಪಡಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಸೂಕ್ತ ಭದ್ರತೆ ನೀಡಬೇಕು ಇಲ್ಲದಿದ್ದಲ್ಲಿ ಯಾವುದೇ ವ್ಯತ್ಯಾಸವಾದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ ರವಿಶಂಕರ್ ಹೇಳಿದರು .

ತಾಲೂಕಿನ ಹೆಬ್ಬಾಳು ಹೋಬಳಿಯ ಕಪ್ಪಡಿ ಕ್ಷೇತ್ರದಲ್ಲಿ ಶನಿವಾರ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸತ್ಯ ಮತ್ತು ನಿಷ್ಠೆಗೆ ಹೆಸರಾಗಿರುವ ನಮ್ಮೂರಿನ ಜಾತ್ರೆಗೆ ಬರುವವರಿಗೆ ಮೂಲ ಸವಲತ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಹಾಗೂ.ಫೆ. 15ನೇ ಭಾನುವಾರದ ಮಹಾಶಿವರಾತ್ರಿ ಹಬ್ಬದ ದಿನದಿಂದ ಆರಂಭವಾಗಿ ಮಾ.12ನೇ ಗುರುವಾರದ ಯುಗಾದಿ ಹಬ್ಬದವರೆಗೆ ನಡೆಯುವ ಇತಿಹಾಸ ಪ್ರಸಿದ್ದ ಕಪ್ಪಡಿ ವಾರ್ಷಿಕ ಜಾತ್ರೆಯ ಯಶಸ್ಸಿಗೆ ತಾಲೂಕು ಮಟ್ಟದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಮುಖವಾಗಿ ಕಪ್ಪಡಿಯ ರಾಚಪ್ಪಾಜಿ, ಸಿದ್ದಪ್ಪಾಜಿ ಮತ್ತು ಚನ್ನಾಜಮ್ಮನವರ ಗದ್ದುಗೆ, ಕಾವೇರಿ ನದಿ ಹಾಗೂ ಜಾತ್ರೆಗೆ ಭಕ್ತರು ನೆರೆಯುವ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡಬೇಕೆಂದರು.

ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಮಠದ ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸಿ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದರು.

ಜಾತ್ರೆಗೆ ಜಿಲ್ಲೆಯಿಂದಲ್ಲದೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಬರುವುದರಿಂದ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜತೆಗೆ ಸಮರ್ಪಕ ಸಾರಿಗೆ ಅನುಕೂಲ ಕಲ್ಪಿಸಬೇಕು ಎಂದು ಆದೇಶಿಸಿದರು.

ವಾಹನಗಳ ಪಾರ್ಕಿಂಗ್ ಮಾಡಲು ನಿಗದಿತ ಸ್ಥಳ ಗೊತ್ತುಪಡಿಸಿ ಸರಿಯಾದ ಮಾರ್ಗ ಫಲಕಗಳನ್ನು ಅಳವಡಿಸಿ ಎಂದ ಶಾಸಕರು ಸಾಧ್ಯವಾದಷ್ಠು ಪ್ಲಾಸ್ಟಿಕ್ ಮುಕ್ತವಾದ ಜಾತ್ರೆ ನಡೆಸಲು ಮಠದವರು ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರು.

ಜಾತ್ರಾ ಸಂಪರ್ಕ ರಸ್ತೆ ಹಾಗೂ ಗದ್ದುಗೆಯ ಸುತ್ತ ನಿತ್ಯ ಮೂರು ಬಾರಿ ನೀರು ಹಾಕಬೇಕು ಅದರೊಂದಿಗೆ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಬರುವ ಮಹಿಳೆಯರು ಮತ್ತು ಮಕ್ಕಳಿಗೆ ಬಟ್ಟೆ ಬದಲಾಯಿಸಲು ಸುರಕ್ಷಿತ ಪ್ರದೇಶ ಗುರುತಿಸಿ ಇದರೊಂದಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ,ಮಾಡಬೇಕೆಂದು ತಿಳಿಸಿದರು. ಮಹಾ ಶಿವರಾತ್ರಿಯಿಂದ ಯುಗಾದಿಯವರೆಗೆ ರಾಮಸಮುದ್ರ ಮತ್ತು ಚಾಮರಾಜ ನಾಲೆಗಳ ಎಡ ಹಾಗೂ ಬಲದಂಡೆ ನಾಲೆಗಳಿಗೆ ಕಾವೇರಿ ನದಿಯಿಂದ ನಿರಂತರವಾಗಿ ನೀರು ಹರಿಯ ಬಿಡಬೇಕೆಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ ಡಿ.ರವಿಶಂಕರ್ ಇದರೊಟ್ಟಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಪೊಲೀಸರಿಗೆ ಮಾರ್ಗದರ್ಶನ ಮಾಡಿದರು.

ಸೆಸ್ಕಾಂ ಇಲಾಖೆಯವರು ನಿರಂತರ ವಿಧ್ಯುತ್ ಸರಬರಾಜು ಮಾಡಬೇಕು ಜತೆಗೆ ಇವರೊಂದಿಗೆ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಜಾತ್ರಾ ಸಂಪರ್ಕ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ನಾಳೆಯಿಂದಲೆ ಆರಂಬಿಸಬೇಕೆಂದರು.

ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ.ಇಒ ವಿ.ಪಿ.ಕುಲದೀಪ್, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಕಾಂಗ್ರೆಸ್ ವಕ್ತರ ಸೈಯದ್ ಜಾಬೀರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಹೆಬ್ಬಾಳು ಗ್ರಾ.ಪಂ.ಮಾಜಿ ಅಧ್ಯಕ್ಷ ಕಾಂತರಾಜು, ಪಿಡಿಒ ಸರಿತಾ. ವೇಣುಗೋಪಾಲ್. ಪರುಶುರಾಮು.ಸೇರಿದಂತೆ ಇನಿತರರು ಹಾಜುರಿದ್ದರು.

1 30 31 32 33 34 40
Page 32 of 40