HOMEPolitical

ಪಾರಂಪರಿಕ ಮೈಸೂರಿನಲ್ಲಿ ಅವೈಜ್ಞಾನಿಕ ನಿರ್ಧಾರಗಳ ವಿರುದ್ಧ ಆಕ್ರೋಶ

ಮೈಸೂರು :- ಪಾರಂಪರಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಮೈಸೂರು ನಗರದಲ್ಲಿ ಮಹಾನಗರ ಪಾಲಿಕೆಯ ಇತ್ತೀಚಿನ ನಿರ್ಧಾರಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಅರಮನೆ ಮುಂಭಾಗದ ಚಾಮರಾಜ ವೃತ್ತದ ಸಮೀಪ, ಪುರಭವನದ ಕಾಂಪೌಂಡ್‌ಗೆ ಹೊಂದಿಕೊಂಡ ರಾಜಪಥ (ಪಾದಚಾರಿ ಮಾರ್ಗ)ದಲ್ಲಿ ಟಾಂಗಾ ನಿಲ್ದಾಣ ಹಾಗೂ ಟಿಕೆಟ್ ಕೌಂಟರ್ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ

ಈ ಕುರಿತು ಮಾತನಾಡಿದ ಸಂತೋಷ್ ಕುಮಾರ್ ಬಿ ಎಂ, ಮೈಸೂರು ನಗರವು ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಪಾರಂಪರಿಕ ನಗರವಾಗಿದ್ದು, ಇಂತಹ ಪ್ರದೇಶದ ಹೃದಯಭಾಗದಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಟಾಂಗಾ ನಿಲ್ದಾಣ ನಿರ್ಮಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ

ಸಾರ್ವಜನಿಕ ದಟ್ಟಣೆ ಇರುವ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಪೂರ್ವಭಾವಿ ಸಭೆ ನಡೆಸಿ ಸಾಧಕ-ಬಾಧಕಗಳನ್ನು ಚರ್ಚಿಸಬೇಕಾಗಿತ್ತು. ಆದರೆ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವು ಈ ಕ್ರಮವನ್ನು ಅನುಸರಿಸದೇ ಜಾಣಕುರುಡುತನ ತೋರಿದೆ ಎಂದು ಸಂತೋಷ್ ಕುಮಾರ್ ಬಿ ಎಂ ಟೀಕಿಸಿದ್ದಾರೆ

ನಗರದಲ್ಲಿ ಈಗಾಗಲೇ 200ರಿಂದ 300 ಮೀಟರ್ ಅಂತರದಲ್ಲಿ ಅನಗತ್ಯವಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಸ್ಥಾಪಿಸಿರುವುದು ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದೆ. ಸಮಗ್ರ ಯೋಜನೆ ಇಲ್ಲದೆ ತರಾತುರಿಯಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅನುಮಾನಗಳಿಗೆ ಕಾರಣವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು

ಮೈಸೂರು ನಗರದ ಅಭಿವೃದ್ಧಿ ಕುರಿತಂತೆ ಉಸ್ತುವಾರಿ ಸಚಿವರ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆಗಳು ಮೂಡುತ್ತಿವೆ. ಇಂತಹ ಅವೈಜ್ಞಾನಿಕ ನಿರ್ಧಾರಗಳನ್ನು ತಕ್ಷಣ ನಿಲ್ಲಿಸಿ, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಲಹೆಗಳನ್ನು ಪಡೆದು ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸಂತೋಷ್ ಕುಮಾರ್ ಬಿ ಎಂ ಆಗ್ರಹಿಸಿದ್ದಾರೆ

ಇಲ್ಲವಾದಲ್ಲಿ ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ

       ಸಂತೋಷ್ ಕುಮಾರ್ ಬಿ ಎಂ

ಮಾಧ್ಯಮ ಸಹ ಸಂಚಾಲಕರು, ಮೈಸೂರು ಮಹಾನಗರ

                  9663662002

Leave a Reply